
ಪುಣೆ: ಮಹಾರಾಷ್ಟ್ರದ ಹೋಟೆಲ್ನಲ್ಲಿ ಊಟಕ್ಕಾಗಿ ಕೂತಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೊದಲು ನಾಲ್ಕೈದು ದುಷ್ಕರ್ಮಿಗಳು ಹೋಟೆಲ್ಗೆ ನುಗ್ಗಿ ಶೂಟ್ ಮಾಡಿದ್ದಾರೆ. ಬಳಿಕ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಹೋಟೆಲ್ ಒಳಗೆ ನಡೆದ ಈ ಭಯಾನಕ ಹತ್ಯೆ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪುಣೆ-ಸೋಲ್ಹಾಪುರ ಹೆದ್ದಾರಿಯ ಇಂದಾಪುರ ಬಳಿಯ ಹೋಟೆಲ್ ಜಗದಂಬಾ ಎಂಬಲ್ಲಿ ಈ ಭೀಕರ ಘಟನೆ ನಡೆದಿದೆ. ಮೃತ ಯುವಕನನ್ನು ಅವಿನಾಶ್ ಬಾಲು ಧನ್ವೆ ಎಂದು ಪೊಲೀಸರು ಗುರುತಿಸಿದ್ದಾರೆ.

ಕಳೆದ ಶನಿವಾರ ರಾತ್ರಿ ಅವಿನಾಶ್ ತನ್ನ ಮೂವರು ಸ್ನೇಹಿತರೊಂದಿಗೆ ಹೋಟೆಲ್ನಲ್ಲಿ ಊಟ ಮಾಡುತ್ತಿದ್ದ. ಊಟಕ್ಕೆ ಆರ್ಡರ್ ಮಾಡಿದ ನಂತರ ಅವಿನಾಶ್ ಸ್ನೇಹಿತರ ಜೊತೆ ಮಾತನಾಡುತ್ತಿದ್ದ. ಅಷ್ಟರಲ್ಲೇ ರಾಕ್ಷಸರು ಹೋಟೆಲ್ ಒಳಗೆ ಬಂದಿದ್ದಾರೆ

ಹಂತಕನೊಬ್ಬ ಹಿಂದಿನಿಂದ ಬಂದು ಯುವಕನ ತಲೆಗೆ ಗುಂಡು ಹಾರಿಸಿದ್ದಾನೆ. ಇದಾದ ನಂತರ ಹಲವಾರು ಗುಂಡುಗಳು ಹಾರಿದೆ. ಇದಾದ ಮೇಲೆ ಸ್ಥಳಕ್ಕೆ ಬಂದ ಇನ್ನೂ ಕೆಲವರು ಕೈಯಲ್ಲಿದ್ದ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಒಬ್ಬರ ನಂತರ ಒಬ್ಬರು ಅವಿನಾಶ್ ಕುತ್ತಿಗೆ ಮತ್ತು ದೇಹದ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತಸ್ರಾವದಲ್ಲಿ ಬಿದ್ದಿದ್ದ ಅವಿನಾಶ್ ಅಲ್ಲೇ ಬಿದ್ದು ಸಾವನ್ನಪ್ಪಿದ್ದಾರೆ. ಇಡೀ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ

