
ಬೆಂಗಳೂರು: 2024ರ ಲೋಕಸಭಾ ಚುನಾವಣೆ ಜೊತೆಗೆ 4 ರಾಜ್ಯಗಳ ವಿಧಾನಸಭಾ ಚುನಾವಣಾ ಡೇಟ್ ಅನೌನ್ಸ್ ಆಗಿದೆ. ಆಂಧ್ರ ಪ್ರದೇಶ, ಸಿಕ್ಕಿಮ್, ಅರುಣಾಚಲ ಪ್ರದೇಶ ಹಾಗೂ ಒಡಿಶಾ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.
ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ಲೋಕಸಭೆಯೊಂದಿಗೆ ಆಂಧ್ರ, ಸಿಕ್ಕಿಮ್, ಒಡಿಶಾ, ಅರುಣಾಚಲ ಪ್ರದೇಶದ ವಿಧಾನಸಭೆ ಅವಧಿ ಕೂಡ ಜೂನ್ನಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಾಗಿ ಈ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಮೇ 13ರಂದು ಆಂಧ್ರ ಹಾಗೂ ಒಡಿಶಾ, ಏಪ್ರಿಲ್ 19ರಂದು ಸಿಕ್ಕಿಂ ಹಾಗೂ ಅರುಣಾಚಲ ವಿಧಾನಸಭಾ ಚುನಾವಣೆಗೆ ಮತದಾನ ಆಗಲಿದೆ. ಫಲಿತಾಂಶ ಜೂನ್ 4 ರಂದು ಘೋಷಣೆಯಾಗಲಿದೆ ಎಂದರು.

4 ರಾಜ್ಯಗಳ ಚುನಾವಣೆ ವೇಳಾಪಟ್ಟಿ ಹೀಗಿದೆ..!
ಆಂಧ್ರ ವಿಧಾನಸಭಾ ಚುನಾವಣೆ
ನಾಮಪತ್ರ ಸಲ್ಲಿಸಲು ಕೊನೆ ದಿನ: ಎಪ್ರಿಲ್ 25
ನಾಮಪತ್ರ ಹಿಂಪಡೆಯಲು ಕೊನೆ ದಿನ: ಎಪ್ರಿಲ್ 29
ಮತದಾನ: ಮೇ 13
ಫಲಿತಾಂಶ ಘೋಷಣೆ: ಜೂನ್ 04
ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಮಾರ್ಚ್ 27
ನಾಮಪತ್ರ ಪರಿಶೀಲನೆ: 28 ಮಾರ್ಚ್
ನಾಮಪತ್ರ ಹಿಂಪಡೆಯಲು ಕೊನೆ ದಿನ: 30 ಮಾರ್ಚ್
ಮತದಾನ: 19 ಎಪ್ರಿಲ್
ಫಲಿತಾಂಶ ಘೋಷಣೆ: ಜೂನ್ 4

ಸಿಕ್ಕಿಂ ವಿಧಾನಸಭಾ ಚುನಾವಣೆ
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಮಾರ್ಚ್ 27
ನಾಮಪತ್ರ ಹಿಂಪಡೆಯಲು ಕೊನೆ ದಿನ: ಮಾರ್ಚ್ 30
ಮತದಾನ: ಎಪ್ರಿಲ್ 19
ಫಲಿತಾಂಶ ಘೋಷಣೆ: ಜೂನ್ 04
ಒಡಿಶಾ ವಿಧಾನಸಭಾ ಚುನಾವಣೆ
ನಾಮಪತ್ರ ಸಲ್ಲಿಸಲು ಕೊನೆಯ ದಿನ : ಎಪ್ರಿಲ್ 25
ನಾಮಪತ್ರ ಹಿಂಪಡೆಯಲು ಕೊನೆ ದಿನ: ಎಪ್ರಿಲ್ 29
ಮತದಾನ: ಮೇ 13
ಫಲಿತಾಂಶ ಘೋಷಣೆ: ಜೂನ್ 04
