
ಪೌರತ್ವ (ತಿದ್ದುಪಡಿ) ಕಾಯ್ದೆ-2019 ಜಾರಿ ಗೊಳಿಸಿದ್ದನ್ನು ತಮಿಳು ನಟ, ಟಿವಿಕೆ (Tamilaga Vettri Kazhagam) ಪಕ್ಷದ ಮುಖ್ಯಸ್ಥ ತಲಪತಿ ವಿಜಯ್ ಅಸಮಾಧಾನ ಹೊರ ಹಾಕಿದ್ದಾರೆ.
ನಾಲ್ಕು ವರ್ಷದ ಹಿಂದೆ ಜಾರಿಗೆ ತರಲು ನಿರ್ಧರಿಸಿದ್ದ ಸಿಎಎ ಕಾನೂನನ್ನು ಜಾರಿಗೆ ತರಲು ನಿನ್ನೆ ಭಾರತ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಮುಸ್ಲಿಮೇತರ ಜನರಿಗೆ ಭಾರತದ ಪೌರತ್ವ ನೀಡುವ ಕಾನೂನು ಇದಾಗಿದೆ. ಡಿಸೆಂಬರ್ 31, 2014ರ ಅವಧಿಯೊಳಗೆ ಬಂದಿರೋರಿಗೆ ಸಿಎಎ ಕಾಯ್ದೆ ಅನ್ವಯ ಆಗುತ್ತದೆ. ಅವರು ಸುಲಭವಾಗಿ ಭಾರತದ ಪೌರತ್ವವನ್ನು ಪಡೆದುಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸಿರುವ ವಿಜಯ್.. ದೇಶದಲ್ಲಿ ಸಿಎಎ ಜಾರಿ ಸ್ವೀಕಾರರ್ಹವಲ್ಲ ಎಂದಿದ್ದಾರೆ. ದೇಶದ ನಾಗರಿಕರು ಸಾಮಾಜಿಕ ಸಾಮರಸ್ಯದಿಂದ ಬದುಕುತ್ತಿರುವ ವಾತಾವರಣದಲ್ಲಿ ಸಿಎಎ ಜಾರಿ ಸ್ವೀಕಾರರ್ಹವಲ್ಲ ಎಂದಿದ್ದಾರೆ. ಈ ಕಾಯ್ದೆಯನ್ನು ತಮಿಳುನಾಡು ಸರ್ಕಾರ ಜಾರಿ ಮಾಡಬಾರದು ಎಂದು ಆಗ್ರಹಿಸಿದ್ದಾರೆ


Yes true no need CAA NRC to India, what is there in Indian Constitution that is enough for pre Indian citizens. So don’t pressure to human of India.
Yes true no need CAA NRC to India, what is there in Indian Constitution that is enough for pre Indian citizens. So don’t pressure to human of India.