
ಉತ್ತರ ಕನ್ನಡ: ಲೋಕಸಭೆಯಲ್ಲಿ 400 ಸ್ಥಾನ ಗೆಲ್ಲಬೇಕು. ಸಂವಿಧಾನ ತಿದ್ದುಪಡಿಗೆ ಮೆಜಾರಿಟಿ ಬೇಕಾಗುತ್ತದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮೆಜಾರಿಟಿ ಇರಬೇಕು ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.
ಸಿದ್ದಾಪುರದಲ್ಲಿ ಮಾತನಾಡಿದ ಅನಂತ್ ಕುಮಾರ್ ಹೆಗಡೆ, 400 ಸ್ಥಾನ ಗೆದ್ದರೆ ಸಂವಿಧಾನ ತಿದ್ದುಪಡಿ ಮಾಡಬಹುದು.400 ಕ್ಕೂ ಹೆಚ್ಚು ಲೋಕಸಭೆ ಗೆದ್ದರೆ 20 ಕ್ಕೂ ಹೆಚ್ಚು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. 2/3 ಮೆಜಾರಿಟಿ ಬಂದ ನಂತರ ಮಾರಿಜಾತ್ರೆ ನೋಡಿ. ಒಂದೊಂದು ಸೀಟು ಚುನಾವಣೆಯಲ್ಲಿ ಇಂಪಾರ್ಟೆಂಟ್ ಎಂದು ಹೇಳಿದ್ದಾರೆ.

ಈಗಾಗಲೇ ಲೋಕಸಭಾ ಚುನಾವಣೆ ಕಾವು ರಂಗೇರಿದೆ. ಬಿಜೆಪಿ ಈಗಾಗಲೇ ಮೊದಲ ಅಭ್ಯರ್ಥಿ ಪಟ್ಟಿಯನ್ನು ರಿಲೀಸ್ ಮಾಡಿದೆ. ಆದರೆ ಅದರಲ್ಲಿ ಕರ್ನಾಟಕದ ಅಭ್ಯರ್ಥಿಯ ಹೆಸರನ್ನು ಬಿಟ್ಟುಕೊಟ್ಟಿಲ್ಲ. ಅತ್ತ ಕಾಂಗ್ರೆಸ್ ಕೂಡ ಮೊದಲ ಅಭ್ಯರ್ಥಿ ಪಟ್ಟಿಯನ್ನು ರಿಲೀಸ್ ಮಾಡಿದೆ.
