
ರಷ್ಯಾದಲ್ಲಿ ಸಿಲುಕಿರುವ ಪಂಜಾಬ್ ಮತ್ತು ಹರಿಯಾಣದ ಯುವಕರ ಗುಂಪೊಂದು ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ಹೊಸ ವರ್ಷ ಆಚರಿಸಲು ಯುವಕರ ಗುಂಪೊಂದು ರಷ್ಯಾಕ್ಕೆ ಹೋಗಿದ್ದು , 90 ದಿನಗಳ ಪ್ರಯಾಣದ ವೀಸಾವನ್ನು ಹೊಂದಿದ್ದರು. ಆದ್ರೆ ಯುವಕರು ವೀಸಾ ಇಲ್ಲದೆ ಬೆಲಾರಸ್ ಪ್ರವಾಸ ಮಾಡಿದ್ದಾರೆ. ಇದ್ರಿಂದ ಪೊಲೀಸರು ಯುವಕರನ್ನು ಹಿಡಿದು ರಷ್ಯಾದ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಬಳಿಕ ರಷ್ಯಾದ ಅಧಿಕಾರಿಗಳು ಯುವಕರನ್ನು ಮಿಲಿಟರಿ ಸೇವೆಗೆ ಬಳಸಿಕೊಂಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಸೇನೆಗೆ ಸೇರಿಸಿಕೊಂಡು ಉಕ್ರೇನ್ ವಿರುದ್ಧ ಹೋರಾಡಲು ಒತ್ತಾಯಿಸಿದ್ದಾರೆ. ಇದ್ರಿಂದ ನೊಂದ ಯುವಕರು ವಿಡಿಯೋ ಮಾಡಿ ಸಹಾಯಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

