ಕೃಪೆ :ನಾನು ಗೌರಿ
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಸೋನಿಯಾ ಗಾಂಧಿಯ ದೆಹಲಿ ನಿವಾಸದ ಎದುರು ಸೌಜನ್ಯ ತಾಯಿ ಸೇರಿ ಹಲವು ಸೌಜನ್ಯಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಯೋಗಿತಾ ಬಯಾನ ಸೇರಿದಂತೆ ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು. ಪ್ರತಿಭಟನೆಯ ವೇಳೆ ಸೌಜನ್ಯ ತಾಯಿ ಧರ್ಮಸ್ಥಳ ಸಮೀಪದ ಪಾಂಗಾಳ ಗ್ರಾಮದ ನಿವಾಸಿ ಚಂದಪ್ಪ ಗೌಡ ಅವರ ಪತ್ನಿ ಕುಸುಮಾವತಿ ಗೌಡ ಸೇರಿದಂತೆ ಪ್ರತಿಭಟನಾಕಾರರು ಪ್ರಕರಣದ ಮರುತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಇರುವ ಕಾರಣ ರಾಜ್ಯ ಸರಕಾರಕ್ಕೆ ಸೂಚನೆ ನೀಡುವಂತೆ ಸೋನಿಯಾ ಗಾಂಧಿಗೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಈ ವೇಳೆ ಸೋನಿಯಾ ಗಾಂಧಿಯವರ ಆಪ್ತ ಸಹಾಯಕರೊಬ್ಬರು ಪ್ರತಿಭಟನಾ ನಿರತ ತಾಯಿಯನ್ನು ಭೇಟಿಯಾಗಿದ್ದು, ಈ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸೋನಿಯಾ ಗಾಂಧಿಯವರು ಅನಾರೋಗ್ಯದಿಂದ ಇರುವ ಕಾರಣ ಅವರ ಆಪ್ತರೊಬ್ಬರು ತಮ್ಮ ಮನವಿಯನ್ನು ಆಲಿಸಿದರು ಮತ್ತು ಪ್ರಕರಣದ ಮರುತನಿಖೆ ಮತ್ತು ನಮಗೆ ನ್ಯಾಯ ದೊರಕಿಸಿಕೊಡಲು ಕಾಂಗ್ರೆಸ್ ನಾಯಕರು ಕರ್ನಾಟಕದ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು ಎಂದು ಸೌಜನ್ಯ ತಾಯಿ ಕುಸುಮಾವತಿ ಮಾದ್ಯಮಗಳಿಗೆ ತಿಳಿಸಿದ್ದಾರೆ.

ನಮ್ಮ ಕಳವಳಗಳನ್ನು ಪರಿಹರಿಸುವ ಬಗ್ಗೆ ಸೋನಿಯಾ ಗಾಂಧಿಯವರ ಭರವಸೆಯನ್ನು ನಾವು ಪ್ರಶಂಸಿಸುತ್ತೇವೆ. ನಮ್ಮ ಮಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇದೊಂದು ಸಕಾರಾತ್ಮಕ ಹೆಜ್ಜೆಯಾಗಿದೆ. ಆದರೂ ನಾವು ಜಾಗರೂಕರಾಗಿದ್ದು, ಅಗತ್ಯಬಿದ್ದರೆ ನ್ಯಾಯ ಸಿಗುವವರೆಗೂ ಮತ್ತೆ ಧ್ವನಿ ಎತ್ತಲು ಹಿಂಜರಿಯುವುದಿಲ್ಲ ಎಂದು ಕುಸುಮಾವತಿ ಅವರು ಹೇಳಿದ್ದಾರೆ.

ಅಕ್ಟೋಬರ್ 9, 2012ರಂದು ನಡೆದ ಭೀಕರ ಅಪರಾಧಕ್ಕೆ ತನ್ನ ಮಗಳು ಬಲಿಯಾಗಿದ್ದಾಳೆ. ಪ್ರಕರಣವನ್ನು ಕರ್ನಾಟಕ ಪೊಲೀಸರು ಮತ್ತು ನಂತರ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಳಿಕ ಸಿಬಿಐಗೆ ವಹಿಸಲಾಗಿದೆ. ನನ್ನ ಪ್ರೀತಿಯ ಮಗಳು, ಕಾಲೇಜಿನಿಂದ ಮನೆಗೆ ಹೋಗುವಾಗ ಕ್ರೂರವಾಗಿ ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟರು. ಕಳೆದ 12 ವರ್ಷಗಳಿಂದ, ನಮ್ಮ ಕುಟುಂಬವು ನಮ್ಮ ಮಗಳಿಗೆ ನ್ಯಾಯವನ್ನು ಕೇಳಿದ್ದರಿಂದ ಊಹಿಸಲಾಗದ ನೋವು ಮತ್ತು ಸಂಕಟವನ್ನು ಸಹಿಸಿಕೊಂಡಿದೆ. ಕಾಲ ಕಳೆದರೂ ಘೋರ ಅಪರಾಧ ಎಸಗಿದ ಆರೋಪಿಗಳಿಗೆ ನ್ಯಾಯ ಸಿಕ್ಕಿಲ್ಲ. ಇತ್ತೀಚೆಗೆ ಆರೋಪಿಗಳನ್ನು ಖುಲಾಸೆಗೊಳಿಸಿರುವುದು ನಮಗೆ ಆಘಾತವನ್ನುಂಟು ಮಾಡಿದೆ ಮತ್ತು ನಮಗೆ ಹತಾಶೆಯಾಗಿದೆ ಎಂದು ಅವರು ಸೋನಿಯಾ ಗಾಂಧಿಗೆ ಸಲ್ಲಿಸಿದ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ತನಿಖೆಯು ಸಂಪೂರ್ಣವಾಗಿ ವಿಳಂಬ ಮತ್ತು ಅಡೆತಡೆಗಳಿಂದ ಕೂಡಿದೆ ಮತ್ತು ಪ್ರಭಾವಿ ವ್ಯಕ್ತಿಗಳು ಅಧಿಕಾರಿಗಳ ಮೇಲೆ ಅನಗತ್ಯ ಪ್ರಭಾವ ಬೀರಿದ್ದಾರೆ ಮತ್ತು ಸತ್ಯ ಮತ್ತು ನ್ಯಾಯದ ಅನ್ವೇಷಣೆಗೆ ಅಡ್ಡಿಯಾಗಿದ್ದಾರೆ ಎಂದು ಊಹಿಸುತ್ತೇವೆ. ಈ ವಿಷಯದಲ್ಲಿ ವೈಯಕ್ತಿಕವಾಗಿ ಮಧ್ಯಪ್ರವೇಶಿಸುವಂತೆ ಮತ್ತು ಧರ್ಮಸ್ಥಳ ನಿರ್ಭಯಾ ಮತ್ತು ಅಂತಹುದೇ ಅಪರಾಧಗಳ ಎಲ್ಲಾ ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸುವಂತೆ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಯಾವುದೇ ಬಾಹ್ಯ ಪ್ರಭಾವದಿಂದ ಮುಕ್ತವಾಗಿ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ನಾವು ನಿಮ್ಮನ್ನು ಒತ್ತಾಯಿಸುತ್ತೇವೆ, ಇದರಿಂದಾಗಿ ನಿಜವಾದ ಅಪರಾಧಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಸಂತ್ರಸ್ತೆಯ ತಾಯಿ ತನ್ನ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

2012ರ ಅ.9ರಂದು ಸೌಜನ್ಯಳನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಠಾಣಾ ಪೊಲೀಸರು ಸಂತೋಷ್ ರಾವ್ನ್ನು ಬಂಧಿಸಿದ್ದರು. ನಂತರ ಪ್ರಕರಣವನ್ನು ಸಿಐಡಿ ತನಿಖೆ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ ಈ ಕುರಿತು ತನಿಖೆಯನ್ನು ಪೂರ್ಣಗೊಳಿಸಿ ಸಂತೋಷ್ ರಾವ್ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಂತೋಷ್ ರಾವ್ ನಿರಪರಾಧಿ, ಆತನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ ಎಂದು ಜೂನ್ 16ರಂದು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಅಪರಾಧ ಕೃತ್ಯದಲ್ಲಿ ಆರೋಪಿಯ ಪಾತ್ರವನ್ನು ಸಾಬೀತು ಪಡಿಸುವಲ್ಲಿ ವಿಫಲವಾಗಿದೆ. ಸೂಕ್ತ ಸಮಯದಲ್ಲಿ ತನಿಖೆಯು ಸೂಕ್ತವಾಗಿ ನಡೆಸಿಲ್ಲ ಎಂದು ಕೋರ್ಟ್ ಹೇಳಿತ್ತು.