
ಕೊಡಗಿನಲ್ಲಿ ನಾವು ಗೆದ್ದೇ ಇಲ್ಲ ಗೆದ್ದೇ ಇಲ್ಲ ಅಂತಿದ್ರು. ಮೊನ್ನೆ ಎರಡು ಶಾಸಕ ಸ್ಥಾನಗಳನ್ನ ಗೆದ್ದಿದೇವೆ. ಅದೇ ರೀತಿ ಜನರ ಮನಸ್ಸನ್ನ ನಾವು ಗೆಲ್ಲಬೇಕು. ಈ ಸಲ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದು ಬದಲಾವಣೆ ಆಗುತ್ತೆ. ಜನರಿಗೂ ಇದನ್ನು ನೋಡಿನೋಡಿ ಅವರಿಗೂ ಸಾಕಾಗಿ ಹೋಗಿದೆ ಎಂದು ಹೇಳಿದ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು(ಫೆ.17): ಮಂಗಳೂರಲ್ಲಿ ನಾವು ಪಾರ್ಲಿಮೆಂಟ್ ಗೆಲ್ಲೋದಕ್ಕೆ ಆಗಿಲ್ಲ ಇದನ್ನ ಒಪ್ಪಿಕೊಳ್ತೇವೆ. ಆದ್ರೆ ನಮ್ಮ ಪ್ರಯತ್ನವನ್ನು ನಾವು ಮಾಡ್ತೇವೆ. ಜನರ ಮುಂದೆ ಕೊಟ್ಟಿರುವ ಮಾತು ಉಳಿಸಿಕೊಂಡಿರುವ ಸರ್ಕಾರ ನಮ್ಮದು. ಒಳ್ಳೆಯ ಕೆಲಸ ಮಾಡಲು ಮುಖ್ಯಮಂತ್ರಿಗಳು ಮುಂದೆ ಹೆಜ್ಜೆ ಇಡ್ತಿದ್ದಾರೆ. ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರತಿಪಾದನೆ ಮಾಡ್ತಿದ್ದಾರೆ. ಜನರ ವಿಶ್ವಾಸ ಗಳಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ ಇದ್ದೇ ಇರುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಇಂದು(ಶನಿವಾರ) ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ಅವರು, ಕೊಡಗಿನಲ್ಲಿ ನಾವು ಗೆದ್ದೇ ಇಲ್ಲ ಗೆದ್ದೇ ಇಲ್ಲ ಅಂತಿದ್ರು. ಮೊನ್ನೆ ಎರಡು ಶಾಸಕ ಸ್ಥಾನಗಳನ್ನ ಗೆದ್ದಿದೇವೆ. ಅದೇ ರೀತಿ ಜನರ ಮನಸ್ಸನ್ನ ನಾವು ಗೆಲ್ಲಬೇಕು. ಈ ಸಲ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದು ಬದಲಾವಣೆ ಆಗುತ್ತೆ. ಜನರಿಗೂ ಇದನ್ನು ನೋಡಿನೋಡಿ ಅವರಿಗೂ ಸಾಕಾಗಿ ಹೋಗಿದೆ ಎಂದು ಹೇಳಿದ್ದಾರೆ.

ಬರೀ ಧರ್ಮ, ಜಾತಿ, ಸ್ವಾರ್ಥ, ಪ್ರಚೋದನಕಾರಿ ಮಾತು ಇದೇ ಅಗಿದೆ. ಈ ಬಗ್ಗೆ ಜನರಿಗೆ ಅರ್ಥವಾಗುವ ರೀತಿ ನಾವು ಪ್ರಚಾರ ಮಾಡ್ತೇವೆ. ನಿಮಗೆ ಅಭಿವೃದ್ಧಿ, ಶಾಂತಿ, ನೆಮ್ಮದಿ ಬೇಕಾ ಅಥವಾ ಈ ಮಾತುಗಳನ್ನೇ ಕೇಳಿಕೊಂಡು ಹೋಗ್ಬೇಕಾ ಎಂಬ ಪ್ರಶ್ನೆಯನ್ನು ಜನರ ಮುಂದಿಡುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
