
ಮಂಗಳೂರು: ಹೃದಯಾಘಾತದಿಂದ (Heart Attack) ದ್ವಿತೀಯ ಪಿಯುಸಿ (Second Puc) ವಿದ್ಯಾರ್ಥಿನಿ ಮಲಗಿದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನಡೆದಿದೆ.
ಹಫೀಜಾ (17) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿನಿ (Student). ಈಕೆ ಉಪ್ಪಿನಂಗಡಿಯ ನೆಕ್ಕಿಲಾಡಿ ಕುರ್ವೇಲು ನಿವಾಸಿಯಾದ ಉದ್ಯಮಿ ದಾವೂದ್ ಎಂಬವರ ಪುತ್ರಿ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಹಫೀಜಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.

ಹಫೀಜಾ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರಣ ತಡ ರಾತ್ರಿವರೆಗೂ ಅಭ್ಯಾಸ ಮಾಡುತ್ತಿದ್ದಳು. ಎಂದಿನಂತೆ ಗುರುವಾರ ಕೂಡ ತಡ ರಾತ್ರಿವರೆಗೂ ಓದಿಕೊಕೊಂಡು ಮಲಗಿದ್ದಾಳೆ. ಆದರೆ ಮುಂಜಾನೆ ಮಲಗಿದ್ದಲ್ಲಿಂದ ಎದ್ದೇಳಲೇ ಇಲ್ಲ, ಇದನ್ನ ಮನೆಯವರು ಗಮನಿಸಿದ್ದಾರೆ. ಬಳಿಕ ಮಲಗಿದಲ್ಲಿಯೇ ಹಫೀಜಾ ಮೃತಪಟ್ಟಿರುವುದು ತಿಳಿದುಬಂದಿದೆ
