
ಮಂಗಳೂರು – ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169 ರ ಬಿಕರ್ನಕಟ್ಟೆ- ಸಾಣೂರು ವರೆಗೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಗುರುಪುರ ಕೈಕಂಬ ಜಂಕ್ಷನ್ ಜಿಲ್ಲೆಯ ಬೆಳೆಯುತ್ತಿರುವ ನಗರದಲ್ಲಿ ಒಂದಾಗಿದೆ. ಕೈಕಂಬ ಜಂಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿಯನ್ನು ಸ್ಥಗಿತಗೊಳಿಸಿ ಚತುಷ್ಪಥ ಫ್ಲೈ ಓವರ್ ಸೇತುವೆಯನ್ನು ನಿರ್ಮಿಸಬೇಕೆಂದು ಒತ್ತಾಯಿಸಿ ಎಸ್‌ಡಿಪಿಐ ಗುರುಪುರ ಬ್ಲಾಕ್ ಸಮಿತಿ ಅದ್ಯಕ್ಷರಾದ ಅಶ್ರಫ್ ಕೈಕಂಬ ರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮತ್ರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ಭೇಟಿಯಾದರು.

ಈ ಸಂದರ್ಭದಲ್ಲಿ ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಎ.ಕೆ.ರಿಯಾಝ್ ಅಡ್ಡೂರು, ಶಾಹೀಕ್ ಪಾಂಡೇಲ್ ಅಡ್ಡೂರು, ಬ್ಲಾಕ್ ಸಮಿತಿ ಸದಸ್ಯರಾದ ಇಮ್ತಿಯಾಜ್ ಅಡ್ಡೂರು, ಗೌಸ್ ಗುರುಕಂಬಳ, ಸಾಬಿಕ್ ಕಂದಾವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

