ಪುತ್ತೂರು: ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು, ಪಕ್ಕದ ತೋಟದ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ಆಪಿನಿಮೂಲೆ ಎಂಬಲ್ಲಿ ನಡೆದಿದೆ. ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಸಿದ್ದೀಕ್ ಮತ್ತು ಅಸ್ಮಾ ದಂಪತಿಯ ಮೂರುವರೆ ವರ್ಷದ ಪುತ್ರ ಮುಹಮ್ಮದ್ ಸಾನಿದ್ ಗುರುವಾರ ಸಂಜೆ ಮನೆಮುಂದೆ ಆಟವಾಡುತ್ತಿದ್ದು, ಮನೆಯವರ ಗಮನಕ್ಕೆ ಬಾರದ ಪಕ್ಕದ ತೋಟಕ್ಕೆ ಹೋಗಿದ್ದ. ಅಲ್ಲಿ ಮಗು ಈಜುಕೊಳದಲ್ಲಿ ಮುಳುಗಿದ್ದು, ನಾಪತ್ತೆಯಾದ ಮಗುವಿಗೆ ಮನೆಯವರು ಹುಡುಕತೊಡಗಿದ್ದರು. ಈಜುಕೊಳಕ್ಕೆ ಮಗು ಬಿದ್ದದ್ದು ಗಮನಕ್ಕೆ ಬಂದಕೂಡಲೇ ಮಗುವನ್ನು ನೀರಿನಿಂದ ಎತ್ತಿ ಆಸ್ಪತ್ರೆಗೆ ಕೊಂಡೊಯ್ಯಲಾದರೂ ಅಷ್ಟರಲ್ಲೇ ಮಗು ಮೃತಪಟ್ಟಿತ್ತು.
