
ಉಕ್ರೇನ್‌ನ 65 ಮಂದಿ ಯುದ್ಧ ಕೈದಿಗಳನ್ನು ಸಾಗಿಸುತ್ತಿದ್ದ ರಷ್ಯಾದ ಎಲ್-76 ಮಿಲಿಟರಿ ವಿಮಾನವು ರಷ್ಯಾದ ಬೆಲ್ಗೊರೊಡ್ ಪ್ರಾಂತ್ಯದಲ್ಲಿ ಉಕ್ರೇನ್ ಗಡಿ ಸಮೀಪ ಪತನಗೊಂಡಿದೆ.
ವಸತಿ ಪ್ರದೇಶದ ಸಮೀಪ ವಿಮಾನ ಪತನಗೊಂಡು ಹೊತ್ತಿ ಉರಿದ ವಿಡಿಯೊವೊಂದು ಲಭ್ಯವಾಗಿದೆ. ಅದರಲ್ಲಿ ವಿಮಾನದ ಬಲಭಾಗದ ರೆಕ್ಕೆ ಮೊದಲು ನೆಲಕ್ಕೆ ಬಡಿದು ನಂತರ ಅದು ಹೊತ್ತಿ ಉರಿದಿರುವುದನ್ನು ಕಾಣಬಹುದು.

ರಷ್ಯಾದ ಕಾಲಮಾನ ಬೆಳಿಗ್ಗೆ 11 ಗಂಟೆಗೆ ಸಾಮಾನ್ಯ ಹಾರಾಟದ ವೇಳೆ ವಿಮಾನ ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ. ವಿಮಾನದಲ್ಲಿ 65 ಉಕ್ರೇನ್ ಸೇನಾ ಸಿಬ್ಬಂದಿ, 6 ಮಂದಿ ವಿಮಾನ ಸಿಬ್ಬಂದಿ ಮೂವರು ಸಹಾಯಕರಿದ್ದರು ಎಂದು ಸಚಿವಾಲಯ ತಿಳಿಸಿದೆ.
ಘಟನೆಯ ಬಗ್ಗೆ ಮಾಹಿತಿ ದೊರೆತಿದೆ. ಆದರೆ, ವಿಮಾನದಲ್ಲಿದ್ದವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ ಎಂದು ಬೆಲ್ಗೊರೊಡ್ ಪ್ರಾದೇಶಿಕ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಅವರು ತಿಳಿಸಿದ್ದಾರೆ. ಮಾಧ್ಯಮ ವರದಿಗಳು ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿರುವ ಸಾಧ್ಯತೆಯಿದೆ ಎಂದಿದೆ.
