
ಭಾರತ ಚುನಾವಣೆ ಆಯೋಗವು ಲೋಕ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಒಂದು ಸುತ್ತೋಲೆಯನ್ನು ಹೊರಡಿಸಿದೆ. ಈ ಆದೇಶದಲ್ಲಿ ಏಪ್ರಿಲ್ 16ರಂದು ಲೋಕಸಭೆ ಚುನಾವಣೆ ನಡೆಸಲಿದೆ ಎಂದು ಹೇಳಲಾಗಿದೆ. ಇದೀಗ ಈ ಆದೇಶದ ಪ್ರತಿ ವೈರಲ್ ಆಗಿದೆ. ಈ ಬಗ್ಗೆ ಇದೀಗ ಸ್ವತಃ ಮುಖ್ಯ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ.

ದೆಹಲಿ, ಜ.23: ಭಾರತದ ಚುನಾವಣಾ ಆಯೋಗ ವು ಲೋಕ ಸಭೆ ಚುನಾವಣೆಗೆ (Lok Sabha Election)ಸಂಬಂಧಿಸಿದಂತೆ ಒಂದು ಸುತ್ತೋಲೆಯನ್ನು ಹೊರಡಿಸಿದೆ. ಈ ಸುತ್ತೋಲೆಯಲ್ಲಿ ಏಪ್ರಿಲ್ 16ರಂದು ಲೋಕಸಭೆ ಚುನಾವಣೆ ನಡೆಸಲಿದೆ ಎಂದು ಹೇಳಲಾಗಿದೆ. ಇದೀಗ ಈ ಆದೇಶದ ಪ್ರತಿ ವೈರಲ್ ಆಗಿದ್ದು, ಈ ಬಗ್ಗೆ ಸ್ವತಃ ಮುಖ್ಯ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ. ಈ ಸುತ್ತೋಲೆಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳ ಕರ್ತವ್ಯ ಪಾಲನೆಗೆ ಸಿದ್ಧತೆ ಮಾಡಿಕೊಳ್ಳಲು ತಾತ್ಕಾಲಿಕ ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಹೇಳಿದೆ.

ಏಪ್ರಿಲ್ 16ರಿಂದ ಲೋಕಸಭೆ ಚುನಾವಣೆಯ ಪ್ರಕಿಯೆಗಳು ಆರಂಭವಾಗಲಿದೆ. ಈ ಕಾರಣಕ್ಕೆ ದೆಹಲಿಯ 11 ಜಿಲ್ಲಾಗಳಲ್ಲಿರುವ ಚುನಾವಣಾ ಅಧಿಕಾರಿಗಳಿಗೆ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಆದೇಶವನ್ನು ಹೊರಡಿಸಲಾಗಿದೆ ಎಂದು ಚುನಾವಣಾ ಆಯೋಗ ಎಕ್ಸ್ನಲ್ಲಿ ತಿಳಿಸಿದೆ. ಚುನಾವಣಾ ಆಯೋಗ ಹೊರಡಿಸಿದ ಸುತ್ತೋಲೆ ಬಗ್ಗೆ ಮಾಧ್ಯಮಗಳು ಆಯೋಗವನ್ನು ಪ್ರಶ್ನಿಸಿತ್ತು. ಇದೀಗ ಈ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿದೆ. ಚುನಾವಣೆಗೆ ತಯಾರಿ ನಡೆಸಲು ಹಾಗೂ ಎಲ್ಲ ಅಧಿಕಾರಿಗಳು ಚುನಾವಣಾ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಲು ತಾತ್ಕಾಲಿಕ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದೆ.

ಈಗಾಗಲೇ ಏಪ್ರಿಲ್ ಅಥವಾ ಮೇಯಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. 2019ರಲ್ಲಿ ನಡೆದ ಲೋಕಸಭೆ ಚುನಾವಣೆ ಪ್ರಕ್ರಿಯೆಯಂತೆ 2024ರ ಚುನಾವಣೆಯು ನಡೆಯಲಿದೆ ಎಂದು ಹೇಳಲಾಗಿದೆ. ಏಳು ಹಂತದಲ್ಲಿ ಚುನಾವಣಾ ನಡೆಯಲಿದೆ. ಇದರ ಪ್ರಕ್ರಿಯೆ ಏಪ್ರಿಲ್ 11ರಂದು ಪ್ರಾರಂಭವಾಗಿ ಮೇ 19ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಲಾಗಿದೆ.

ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ರಾಮಮಂದಿರ ಉದ್ಘಾಟನೆ ನಂತರ ಲೋಕಸಭೆ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಇದೀಗ ಈ ಚುನಾವಣೆ ಆಯೋಗದ ಈ ಸುತ್ತೋಲೆ ವೈರಲ್ ಸುದ್ದಿಗೆ ಪುಷ್ಠಿ ನೀಡಿದೆ. ಆದರೆ ಇದು ತಾತ್ಕಾಲಿಕ ದಿನಾಂಕ ಎಂದು ಚುನಾವಣಾ ಆಯೋಗ ಹೇಳಿದೆ.