
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿರುವ ಹೋಟೆಲ್ ಒಂದರಲ್ಲಿ ದಲಿತರಿಗೆ ಆಹಾರ ನೀಡಲು ನಿರಾಕರಿಸಿದ ಆರೋಪ ಕೇಳಿಬಂದಿದೆ.
ಹೊಟೇಲ್‌ನಲ್ಲಿ ದಲಿತರಿಗೆ ಆಹಾರ ನೀಡಲು ಮಹಿಳೆಯೊಬ್ಬರು ನಿರಾಕರಿಸಿ ಕ್ಯಾತೆ ತೆಗೆದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಹಾರ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಲವು ದಲಿತ ಯುವಕರು ಬೇಸರ ವ್ಯಕ್ತಪಡಿಸಿ ಆ ಮಹಿಳೆ ಜೊತೆ ವಾಗ್ವಾದ ನಡೆಸಿದ್ದಾರೆ.

ನಿಮಗೆ ಆಹಾರ ನೀಡಲು ಆಗುವುದಿಲ್ಲ, ನಾನು ಹೋಟೆಲ್ ಬಾಗಿಲು ಬಂದ್ ಮಾಡ್ತೀನಿ. ಏನ್ ಬೇಕಾದರೂ ಮಾಡಿಕೊಳ್ಳಿ ಊಟ ಕೊಡಲ್ಲ ಎಂದು ಆವಾಜ್ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ತಹಶಿಲ್ದಾರ್ ರಾಘವೇಂದ್ರ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.
