
ಮಂಗಳೂರು: ಅಯೋಧ್ಯೆಯಲ್ಲಿ ರಾಮನ ಮಂದಿರವನ್ನು ಅಪೂರ್ಣಾವಸ್ಥೆಯಲ್ಲಿರುವಾಗ ಉದ್ಘಾಟನೆ ಮಾಡುತ್ತಿರುವುದು ಧರ್ಮಶಾಸ್ತ್ರಕ್ಕೆ ಮಾಡಿದ ಅಪಚಾರವಾಗಿದೆ ಎಂದು ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಚಂದ್ರನನ್ನು ಚುನಾವಣಾ ಸರಕನ್ನಾಗಿ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಶ್ರೀರಾಮನ ಶಾಪ ತಟ್ಟುತ್ತದೆ. ಕರ್ನಾಟಕದಲ್ಲಿ ಆದ ಸ್ಥಿತಿಯೇ ಕೇಂದ್ರದಲ್ಲೂ ಆಗಬಹುದು’ ಎಂದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಈ ನಡೆಯನ್ನು ಹಿಂದೂ ಮಹಾಸಭಾ ಖಂಡಿಸುತ್ತದೆ. ಹಿಂದೂ ಮಹಾಸಭಾ ಶ್ರೀರಾಮನ ವಿಚಾರವನ್ನು ಎಂದಿಗೂ
ರಾಜಕೀಯವಾಗಿ ಬಳಸಿಕೊಂಡಿಲ್ಲ. ಅಯೋಧ್ಯೆಯಲ್ಲಿ ಶ್ರೀ ರಾಮಚಂದ್ರರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಮೂಲ ವಕಾಲತ್ತುದಾರರಾದ ಹಿಂದೂ ಮಹಾಸಭಾ ಹಾಗೂ ನಿರ್ಮೂಯಿ ಅಖಾಡಕ್ಕೆ ಆಮಂತ್ರಣ
ನೀಡದಿರುವುದು ಕೇಂದ್ರ ಸರಕಾರದ ಸ್ವಾರ್ಥದ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷ ಡಾ.ಎಲ್.ಕೆ. ಸುವರ್ಣ, ರಾಜ್ಯ ಖಜಾಂಚಿ ಲೋಕೇಶ್ ಉಳ್ಳಾಲ್, ಸಂಘಟನೆಯ ಪ್ರಮುಖರಾದ ಇಮಾಂಶು ಶರ್ಮ, ಪ್ರವೀಣ್ ಚಂದ್ರರಾವ್ ಉಪಸ್ಥಿತರಿದ್ದರು