Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ಜಾತಿ ಆಧಾರಿತ ಬಹಿಷ್ಕಾರಕ್ಕೆ ಪ್ರೋತ್ಸಾಹ; ಪೇಜಾವರ ಶ್ರೀ, ಅಜಿತ್ ಹನುಮಕ್ಕನವರ್ ವಿರುದ್ಧ ದೂರು ದಾಖಲು

editor tv by editor tv
January 16, 2024
in ರಾಜ್ಯ
0
ಜಾತಿ ಆಧಾರಿತ ಬಹಿಷ್ಕಾರಕ್ಕೆ ಪ್ರೋತ್ಸಾಹ; ಪೇಜಾವರ ಶ್ರೀ, ಅಜಿತ್ ಹನುಮಕ್ಕನವರ್ ವಿರುದ್ಧ ದೂರು ದಾಖಲು
1.9k
VIEWS
Share on FacebookShare on TwitterShare on Whatsapp

ಉಡುಪಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಮತ್ತು ಸುವರ್ಣ ನ್ಯೂಸ್ ವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಜಾತಿ ತಾರತಮ್ಯ ಮತ್ತು ಧಾರ್ಮಿಕ ಸ್ಥಳಗಳಲ್ಲಿ ಜಾತಿ ಆಧಾರಿತ ಬಹಿಷ್ಕಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿ ಜನವರಿ 12ರಂದು ದಲಿತ ಸಂಘಟನೆಯೊಂದು ದೂರು ದಾಖಲಿಸಿದೆ.

ಸುವರ್ಣ ನ್ಯೂಸ್ ವಾಹಿನಿಯಲ್ಲಿ ನಡೆದ ರಾಮಮಂದಿರ ಉದ್ಘಾಟನೆ ಸಂವಾದ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಸ್ವಾಮೀಜಿ ಅತಿಥಿಯಾಗಿ ಭಾಗವಹಿಸಿದ್ದರು. ಡಿಸೆಂಬರ್ 27, 2023 ರಂದು ಕಾರ್ಯಕ್ರಮ ಪ್ರಸಾರವಾಯಿತು. ಕಾರ್ಯಕ್ರಮವು ಅಯೋಧ್ಯೆಯ ರಾಮಮಂದಿರದೊಳಗೆ ದಲಿತರಿಗೆ ಪೂಜೆ (ಪ್ರಾರ್ಥನೆ) ಮಾಡಲು ಅವಕಾಶವಿದೆಯೇ ಎಂಬುದರ ಕುರಿತು ಚರ್ಚೆಯನ್ನು ನಡೆಸಲಾಯಿತು. ಪೇಜಾವರ ಶ್ರೀಗಳು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ (ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ವಹಣೆ) ಟ್ರಸ್ಟಿ ಕೂಡ ಆಗಿದ್ದಾರೆ.

ಕಾರ್ಯಕ್ರಮದ ವೇಳೆ ದಲಿತ ಸಂಘಟನೆಯ ವಕ್ತಾರ ನಾಗರಾಜ್, ಅಯೋಧ್ಯೆ ರಾಮ ಮಂದಿರದಲ್ಲಿ ಪೂಜೆ ನಡೆಸುವುದರಿಂದ ದಲಿತರನ್ನು ಹೊರಗಿಟ್ಟಿರುವ ಆರೋಪದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೇಜಾವರ ಶ್ರೀ, “ದೇವಸ್ಥಾನದಲ್ಲಿ ಒಬ್ಬರೇ ಪೂಜೆ ಮಾಡುತ್ತಾರೆ, ಎಲ್ಲರೂ ಮಾಡಲಾಗುವುದಿಲ್ಲ. ಕಾಶಿ ದೇವಸ್ಥಾನದಲ್ಲಿ ಹೊರತುಪಡಿಸಿ; ಪೂಜೆಗೆ ನೇಮಕಗೊಂಡವರು ಮಾತ್ರ ಮಾಡುತ್ತಾರೆ. ದೇವಸ್ಥಾನದಲ್ಲಿ ಮಾತ್ರವಲ್ಲ, ಯಾವುದೇ ಕಚೇರಿ ಮತ್ತು ಸಂಸ್ಥೆಯಲ್ಲಿ ಕೂಡ. ಪ್ರತಿಯೊಬ್ಬರೂ ಆ ಹುದ್ದೆಯಲ್ಲಿ ಕುಳಿತುಕೊಳ್ಳಬಹುದು, ಹುದ್ದೆಗೆ ನೇಮಕಗೊಂಡವರಿಗೆ ಮಾತ್ರ ಅವಕಾಶವಿದೆ’ ಎಂದು ಹೇಳುವು ಮೂಲಕ ಬ್ರಾಹ್ಮಣರಿಗೆ ಮಾತ್ರ ಅವಕಾಶ ಎಂದು ಸಮರ್ಥಿಸಿಕೊಂಡಿದ್ದರು.

ಶ್ರೀಗಳ ಹೇಳಿಕೆಗಳು ಧಾರ್ಮಿಕ ಸ್ಥಳಗಳಲ್ಲಿ ಜಾತಿ ಆಧಾರಿತ ಬಹಿಷ್ಕಾರದ ಚರ್ಚೆಗೆ ಕಾರಣವಾಯಿತು. ಆದರೆ, ಪೇಜಾವರ ಶ್ರೀ ಸಾಂಪ್ರದಾಯಿಕ ಜಾತಿವಾದಿ ವಿಧಾನವನ್ನು ಸಮರ್ಥಿಸಿಕೊಂಡರು. “ಇಲ್ಲಿಯವರೆಗೆ ಪೂಜೆ ಸಲ್ಲಿಸುತ್ತಿರುವ ಸಮುದಾಯವು ಮುಂದೆಯೂ ಹೀಗೆಯೇ ಮುಂದುವರಿಯುತ್ತದೆ. ಇತರರು ಇದನ್ನು ಮಾಡಲು ಸಾಧ್ಯವಿಲ್ಲ’ ಎಂದರು. ಸಂಪ್ರದಾಯಗಳನ್ನು ಬದಲಾಯಿಸುವ ಸಾಧ್ಯತೆಯ ಬಗ್ಗೆ ಪ್ರಶ್ನಿಸಿದಾಗ, “ದೇವಾಲಯಗಳು ಮತ್ತು ಧಾರ್ವಿುಕ ಸ್ಥಳಗಳಿಗೆ ಬಂದಾಗ ಮಾತ್ರ ಏಕೆ ಪ್ರಶ್ನೆ ಉದ್ಭವಿಸುತ್ತದೆ?” ಎಂದು ಮರು ಪ್ರಶ್ನೆ ಹಾಕಿದ್ದರು.

ಧಾರ್ಮಿಕ ಸ್ಥಳಗಳಿಗೆ ಜಾತ್ಯತೀತ ನಿಯಮಗಳನ್ನು ಅನ್ವಯಿಸುವುದರ ವಿರುದ್ಧ ಟಿವಿ ಆಂಕರ್ ಅಜಿತ್ ಹನುಮಕ್ಕನವರ್ ವಾದಿಸಿದರು, “ನೀವು ಧಾರ್ಮಿಕ ಸ್ಥಳಗಳಲ್ಲಿ ಜಾತ್ಯತೀತ ಸ್ಥಳಗಳ ನಿಯಮಗಳನ್ನು ಹಾಕಲು ಸಾಧ್ಯವಿಲ್ಲ. ಎರಡನ್ನೂ ಬೆರೆಸಬೇಡಿ. ನೀವು ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ಬಯಸಿದರೆ, ಅಗತ್ಯವಿರುವ ನಿಯಮಗಳಿವೆ; ಅನುಸರಿಸಬೇಕು. ನಿಗದಿತ ನಿಯಮಗಳನ್ನು ಪಾಲಿಸದೆ ಅವರು ಶಬರಿಮಲೆಗೆ ಹೋಗಬೇಕೆಂದು ನೀವು ಹೇಗೆ ಹೇಳುತ್ತೀರಿ? ಕೆಲವು ಮನೆಗಳಲ್ಲಿ ನೀವು ಮನೆಯೊಳಗೆ ಪಾದರಕ್ಷೆಗಳನ್ನು ಧರಿಸಬಹುದು, ಇತರ ಮನೆಗಳಲ್ಲಿ ಪಾದರಕ್ಷೆಗಳನ್ನು ಮನೆಯ ಹೊರಗೆ ಇಡಲು ನಿಯಮಗಳಿವೆ. ನೀವು ನಿಮ್ಮ ಮನೆಯಲ್ಲಿ ಅಡುಗೆಮನೆಯೊಳಗೆ ಪಾದರಕ್ಷೆಗಳನ್ನು ಧರಿಸುತ್ತೀರಾ? ಇತರರ ಮನೆಗಳಲ್ಲಿಯೂ ಅದೇ ರೀತಿ ಅನುಸರಿಸುತ್ತೀರಿ ಎಂದರೆ ನೀವು ತರ್ಕಬದ್ಧ ವ್ಯಕ್ತಿಯಾಗುವುದಿಲ್ಲ’ ಎಂದ ಹೇಳಿದ್ದರು.

ಇದೇ ವೇಳೆ ದಲಿತರಿಗೆ ಷರತ್ತಿನ ಮಾರ್ಗವನ್ನು ಸೂಚಿಸಿದ ಕಾಂಗ್ರೆಸ್ ಸಮಿತಿಯ ಸದಸ್ಯರೊಬ್ಬರು, ‘ದಲಿತರು ಪೂಜೆ ಮಾಡಬೇಕಾದರೆ ಮಂತ್ರಗಳನ್ನು ಕಲಿತು ‘ಅಖಂಡ ಪಾಂಡಿತ್ಯ’ ಪಡೆದು ಪೂಜೆ ಸಲ್ಲಿಸಲಿ’ ಎಂದರು.
ಇದಕ್ಕೆ ನಾಗರಾಜ್ ಪ್ರತಿಕ್ರಿಯಿಸಿ, ದಲಿತರಿಗೆ ಯಾವ ದೇವಸ್ಥಾನದಲ್ಲೂ ಅವಕಾಶವಿಲ್ಲ ಎಂದರು. ಆಗ ಶ್ರೀಗಳು, ‘ಬ್ರಾಹ್ಮಣನೊಬ್ಬ ದಲಿತ ಸಂಘಟನೆಯ ನಾಯಕನಾಗಲು ಬಿಡುವಿರಾ?’ ಎಂದು ಕೇಳಿದರು.

“ನೀವು ಈ ವಿಷಯವನ್ನು ಏಕೆ ತೆಗೆದುಕೊಳ್ಳುತ್ತಿದ್ದೀರಿ? ಭೂಮಿ ಪೂಜೆಯ ಸಮಯದಲ್ಲಿ, ಕಾಮೇಶ್ವರಿ (ದಲಿತ ಕರಸೇವಕ ಕಾಮೇಶ್ವರ ಚೌಪಾಲ್) ಉಪಸ್ಥಿತರಿದ್ದರು; ಹಾಗಾದರೆ ನೀವು ಈ ವಿಷಯದ ಬಗ್ಗೆ ಏಕೆ ಜಗಳವಾಡುತ್ತಿದ್ದೀರಿ” ಎಂದು ಪ್ರಶ್ನಿಸಿದ್ದರು.

ನಾಗರಾಜ್ ಅವರ ಪ್ರಶ್ನೆಗಳಿಗೆ ಶ್ರೀಗಳು ನೀಡಿದ ಉತ್ತರವು ತಿರಸ್ಕಾರ ಮತ್ತು ತಾರತಮ್ಯದಿಂದ ಕೂಡಿದೆ ಎಂದು ಬಿಆರ್ ಅಂಬೇಡ್ಕರ್ ಸೇನೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ. ‘ಧಾರ್ಮಿಕ ಸ್ಥಳಗಳಲ್ಲಿ ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು ಮತ್ತು ದಲಿತರಿಗೆ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಅವಕಾಶವಿಲ್ಲ ಎಂದು ಹೇಳುವ ಮೂಲಕ ಶ್ರೀಗಳು ಮತ್ತು ಟಿವಿ ನಿರೂಪಕ ಅಸ್ಪೃಶ್ಯತೆಯನ್ನು ಪ್ರತಿಪಾದಿಸುತ್ತಿದ್ದಾರೆ’ ಎಂದು ದೂರಿನಲ್ಲಿ ಹೇಳಲಾಗಿದೆ.

Previous Post

ಅಯೋಧ್ಯೆ ರಾಮಮಂದಿರ ರಾಜಕೀಯ ಜೂಜಾಟ ಕೇಂದ್ರ: ಹಿರಿಯ ಸಾಹಿತಿ ದೇವನೂರ ಮಹಾದೇವ

Next Post

ಮಥುರಾ : ಮಸೀದಿ ಸಮೀಕ್ಷೆಗೆ ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

Next Post
ಮಥುರಾ : ಮಸೀದಿ ಸಮೀಕ್ಷೆಗೆ ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಮಥುರಾ : ಮಸೀದಿ ಸಮೀಕ್ಷೆಗೆ ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.