
ಯೋಗ ಗುರು, ಪತಂಜಲಿ ಸ್ಥಾಪಕ ಬಾಬಾ ರಾಮ್ದೇವ್ ಹೇಳಿಕೆಯ ವಿಡಿಯೋವೊಂದರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೀಗ ತಾವು ನೀಡಿದ ಹೇಳಿಕೆಯ ಕುರಿತು ಸ್ಪಷ್ಟೀಕರಣ ಕೊಟ್ಟಿದ್ದಾರೆ. ‘‘ನಾನು ಓವೈಸಿ ಎಂದು ಹೇಳಿದ್ದು, ಒಬಿಸಿ ಅಲ್ಲ’’ ಎಂದು ಹೇಳಿದ್ದಾರೆ.
ಬಾಬಾ ರಾಮ್ದೇವ್ ವಿಡಿಯೋವೊಂದರಲ್ಲಿ ವೇದಿಕೆ ಮೇಲೆ ಪೂಜೆ ಮಾಡುತ್ತಾ ‘‘ನನ್ಮ ಮೂಲ ಗೋತ್ರ ಬ್ರಹ್ಮ ಗೋತ್ರ, ನಾನು ಅಗ್ನಿಹೋತ್ರಿ. ನಾನು ಅಗ್ನಿಹೋತ್ರಿ ಬ್ರಾಹ್ಮಣ. ಅವರು ಹೇಳುತ್ತಾರೆ ಬಾಬಾಜಿ ನೀವು ಒಬಿಸಿ..’’ ಎಂದು ಹೇಳುವ ವಿಡಿಯೋ ವೈರಲ್ ಆಗಿತ್ತು.

ರಾಮ್ದೇವ್ ವಿಡಿಯೋ ಹೊರಬಿದ್ದಂತೆ ಹಲವರ ಆಕ್ರೋಶಕ್ಕೆ ಕಾರಣವಾಯಿತು. ಅನೇಕರು ಈ ಬಗ್ಗೆ ಕಿಡಿಕಾರಿದ್ದರು. ಪತಂಜಲಿ ಹ್ಯಾಶ್ ಟ್ಯಾಗ್ ನಮೂದಿಸುವ ಮೂಲಕ ರಾಮ್ದೇವ್ ಹೇಳಿಕೆ ವಿರೋಧಿಸಿದರು. ಆದರೆ ಈ ಬಗ್ಗೆ ಸ್ಪಷ್ಟಣೆ ನೀಡಿದ ರಾಮ್ ದೇವ್ ‘‘ನಾನು ಓವೈಸಿ ಎಂದಿದ್ದು, ಒಬಿಸಿ ಅಲ್ಲ’’ ಎಂದು ಹೇಳಿದ್ದಾರೆ.
ಬಳಿಕ ವರದಿಗಾರರು ಒಬಿಸಿ ಎಂದಾಗ ಪ್ರತಿಕ್ರಿಯಿಸಿದ ರಾಮದೇವ್ ‘‘ನಾನು ಯಾವತ್ತೂ ಒಬಿಸಿ ಬಗ್ಗೆ ಏನೂ ತಪ್ಪಾಗಿ ಹೇಳಿಲ್ಲ’’ ಎಂದು ಹೇಳಿದ್ದಾರೆ.

