Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

2 ತಿಂಗಳ ಅವಧಿಯಲ್ಲಿ UAPAಯಡಿ 9 ಮುಸ್ಲಿಂ ಯುವಕರನ್ನು ಬಂಧಿಸಿದ ಉತ್ತರಪ್ರದೇಶದ ಎಟಿಎಸ್‌!

editor tv by editor tv
January 13, 2024
in ರಾಷ್ಟ್ರೀಯ
0
2 ತಿಂಗಳ ಅವಧಿಯಲ್ಲಿ UAPAಯಡಿ 9 ಮುಸ್ಲಿಂ ಯುವಕರನ್ನು ಬಂಧಿಸಿದ ಉತ್ತರಪ್ರದೇಶದ ಎಟಿಎಸ್‌!
1.9k
VIEWS
Share on FacebookShare on TwitterShare on Whatsapp

ಐಸಿಸ್ ಮಾಡ್ಯೂಲ್” ನೆಪದಲ್ಲಿ ಉತ್ತರಪ್ರದೇಶದ ಪೊಲೀಸರು ಮುಸ್ಲಿಂ ಯುವಕರ ಬಂಧನವನ್ನು ಮುಂದುವರಿಸಿದ್ದು, ಕಳೆದ ಎರಡು ತಿಂಗಳಲ್ಲಿ ರಾಜ್ಯದ ಒಳಗೆ ಮತ್ತು ಹೊರಗೆ ಭಯೋತ್ಪಾದನಾ ಆರೋಪದ ಮೇಲೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಹಾಲಿ ಮತ್ತು ಮಾಜಿ ಸೇರಿ 9 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

2023ರ ನ.23ರಂದು ಲಕ್ನೋದಲ್ಲಿ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ದಾಖಲಿಸಿದ ಎಫ್‌ಐಆರ್ ಬಳಿಕ ವಿದ್ಯಾರ್ಥಿಗಳ ಬಂಧನಗಳು ನಡೆದಿವೆ. ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121 ಎ ಮತ್ತು 122 ಜೊತೆಗೆ ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಯುಎಪಿಎಯ ಸೆಕ್ಷನ್ 13, 18, 18 ಬಿ ಮತ್ತು 38ನ್ನು ವಿಧಿಸಲಾಗಿದೆ.

ರಾಜ್ಯದ ವಿರುದ್ಧದ ಅಪರಾಧಕ್ಕೆ  ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡುವ ಉದ್ದೇಶದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು, ಭಯೋತ್ಪಾದಕ ಕೃತ್ಯವನ್ನು ಎಸಗಲು ಪ್ರಯತ್ನಿಸುವುದು, ಭಯೋತ್ಪಾದಕ ಕೃತ್ಯಗಳಿಗೆ ಜನರನ್ನು ನೇಮಿಸಿಕೊಳ್ಳವ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರು ಉತ್ತರಪ್ರದೇಶದಲ್ಲಿ ಅಥವಾ ದೇಶದ ಇತರ ಭಾಗಗಳಲ್ಲಿ ದೊಡ್ಡ ಭಯೋತ್ಪಾದಕ ಕೃತ್ಯವನ್ನು ನಡೆಸಲು ಯೋಚಿಸಿಸಿದ್ದರು ಎಂದು ಉತ್ತರಪ್ರದೇಶದ ಎಟಿಎಸ್ ಆರೋಪಿಸಿದೆ.

ಅಲಿಘರ್ ಮುಸ್ಲಿಂ ವಿವಿಯ “ಐಸಿಸ್ ಮಾಡ್ಯೂಲ್” ಆರೋಪಿಸಿ ನವೆಂಬರ್ ಮೊದಲ ವಾರದಲ್ಲಿ ಈ ಕುರಿತ ಮೊದಲ ಬಂಧನ ನಡೆದಿದೆ. ಜನವರಿ 8, 2024ರಂದು ಎಟಿಎಸ್ ಅಮಾಸ್ ಅಹ್ಮದ್‌ನನ್ನು ಅಲಿಘರ್‌ನಲ್ಲಿ ಬಂಧಿಸಿತ್ತು. ಸಂಭಾಲ್‌ನ ಅಬ್ದುಲ್ ಸಮದ್ ಮಲಿಕ್ (25) ಸ್ಥಳೀಯ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ. ಅಹ್ಮದ್ 2022ರಲ್ಲಿ AMUನಿಂದ ಮನೋವಿಜ್ಞಾನದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದರು. ಸಮದ್ ಮಲಿಕ್ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಈ ಹಿಂದೆ ಬಂಧಿತರಾಗಿದ್ದ ಏಳು ಮಂದಿಯೊಂದಿಗೆ ಈ ಇಬ್ಬರು ವ್ಯಕ್ತಿಗಳು ಎಎಂಯುನಲ್ಲಿ ಐಸಿಸ್ ಮಾಡ್ಯೂಲ್‌ನ್ನು ಸಿದ್ಧಪಡಿಸುತ್ತಿದ್ದಾರೆ ಮತ್ತು ಅದಕ್ಕೆ ಇತರರನ್ನು ನೇಮಿಸಿಕೊಳ್ಳುತ್ತಿದ್ದಾರೆ ಎಂದು ಯುಪಿ ಎಟಿಎಸ್ ಆರೋಪಿಸಿದೆ.

ನವೆಂಬರ್ 5 ರಂದು ಇಬ್ಬರು ಮಾಜಿ ಎಎಮ್‌ಯು ವಿದ್ಯಾರ್ಥಿಗಳಾದ ಅಬ್ದುಲ್ಲಾ ಅರ್ಸಲಾನ್ ಮತ್ತು ಮಾಜ್ ಬಿನ್ ತಾರಿಕ್ ಅವರನ್ನು ಬಂಧಿಸಲಾಗಿತ್ತು. ಎರಡು ದಿನಗಳ ನಂತರ ಯುಪಿ ಎಟಿಎಸ್ ಛತ್ತೀಸ್‌ಗಢದ ದುರ್ಗ್‌ನಿಂದ ಎಎಮ್‌ಯುನಿಂದ ಪಿಎಚ್‌ಡಿ ಪೂರ್ಣಗೊಳಿಸಿದ್ದ ವಜಿಹುದ್ದೀನ್ ಎಂಬ ಮೂರನೇ ವ್ಯಕ್ತಿಯನ್ನು ಬಂಧಿಸಿದೆ. ಕಳೆದ ನವೆಂಬರ್ 11ರಂದು ಎಟಿಎಸ್, ರಖೀಬ್ ಇಮಾಮ್,  ನಾವೇದ್ ಸಿದ್ದಿಕಿ, ಮೊಹಮ್ಮದ್ ನೋಮನ್, ಮೊಹಮ್ಮದ್ ನಜೀಮ್ ಅವರನ್ನು ಬಂಧಿಸಿತ್ತು. ನೋಮನ್, ನಾಜಿಮ್ ಮತ್ತು ಸಿದ್ದಿಕಿ ಅವರನ್ನು ಅವರ ಹುಟ್ಟೂರಾದ ಸಂಭಾಲ್ ಜಿಲ್ಲೆಯಿಂದ ಬಂಧಿಸಲಾಗಿದ್ದು, ಇಮಾಮ್ ಅವರನ್ನು ಅಲಿಘರ್‌ನಲ್ಲಿ  ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳು ಹಿಂಸಾತ್ಮಕ ಜಿಹಾದ್ ಮೂಲಕ ಸರ್ಕಾರವನ್ನು ಉರುಳಿಸಲು ಮತ್ತು ಷರಿಯಾ ಕಾನೂನನ್ನು ಹೇರಲು ಯೋಜಿಸುತ್ತಿದ್ದರು ಎಂದು ಎಟಿಎಸ್ ಆರೋಪಿಸಿದೆ.

ಬಂಧಿತ ಯುವಕರೆಲ್ಲರೂ SAMU ಎಂಬ ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಸಂಘಟನೆ ಜೊತೆ ಸಂಬಂಧ ಹೊಂದಿದ್ದರು. ಈ ಸಂಘಟನೆ ಕ್ಯಾಂಪಸ್‌ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿತ್ತು. ಇದು ವಿದ್ಯಾರ್ಥಿಗಳ ಸಂಘಟನೆಯಾಗಿದೆ. ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಆರಂಭಿಕ ಹಂತದಲ್ಲಿ ಸರಿಯಾದ ಪುರಾವೆಗಳಿಲ್ಲದೆ ದೊಡ್ಡ ಆರೋಪ ಹೊರಿಸುತ್ತಿರುವ ತನಿಖೆಯ ಬಗ್ಗೆ ಅನೇಕ ವಿದ್ಯಾರ್ಥಿಗಳು  ಮಾತನಾಡುತ್ತಾ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಆಲಿಗಢ್ ಮುಸ್ಲಿಂ ವಿವಿಯ ಅಧಿಕಾರಿಯೊಬ್ಬರು ಮಾತನಾಡುತ್ತಾ, ಪೊಲೀಸರ ನಿರೂಪಣೆಯು “ಆಧಾರರಹಿತ”, ಎಟಿಎಸ್ ಹೇಳಿರುವ ಆರೋಪಗಳು ಇನ್ನೂ ಸಾಬೀತಾಗಿಲ್ಲ, ಅಂತಹ ನಡವಳಿಕೆ ವಿರುದ್ಧ ವಿಶ್ವವಿದ್ಯಾಲಯವು “ಶೂನ್ಯ ಸಹಿಷ್ಣುತೆ” ನೀತಿಯನ್ನು ಹೊಂದಿದೆ. ಆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಮತ್ತು ವಿಶ್ವವಿದ್ಯಾನಿಲಯವು ತನಿಖೆಗೆ ಸಹಕರಿಸಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ವಿಶ್ವವಿದ್ಯಾನಿಲಯದ ಕೆಲವು ಮಾಜಿ ಮತ್ತು ಹಾಲಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ತಿಳಿದಿದ್ದರೂ, ಯಾವುದೇ ಸಂಸ್ಥೆಗಳು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ ಎಂದು AMUನ ವಾಸಿಂ ಅಲಿ ಹೇಳಿದ್ದಾರೆ. ಈ ಆರೋಪಗಳ ಕುರಿತ ಸತ್ಯ ಮತ್ತು ಅವುಗಳನ್ನು ಯಾವ ಆಧಾರದ ಮೇಲೆ ಮಾಡಲಾಗಿದೆ ಎಂದು ತನಿಖೆಯ ಮೂಲಕ ತಿಳಿಯಲಾಗುವುದು ಅಥವಾ ನ್ಯಾಯಾಲಯದಲ್ಲಿ ನಿರ್ಧರಿಸಲಾಗುವುದು ಎಂದು ಅಲಿ ಹೇಳಿದ್ದಾರೆ.

ಈ ಬಂಧನಗಳು ಮತ್ತು ಯುಪಿ ಪೊಲೀಸರು ಆಪಾದಿಸಿದ ಐಸಿಸ್ ಮಾಡ್ಯೂಲ್ ಜೊತೆ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಸಂಬಂಧ ಕಲ್ಪಿಸುವುದು ಎಎಂಯು ಮೇಲೆ ಆಳವಾಗಿ ಪರಿಣಾಮ ಬೀರುವುದಿಲ್ಲ ಎಂದು ಅಲಿ ಹೇಳಿದರು. ವಿಶ್ವವಿದ್ಯಾನಿಲಯದಲ್ಲಿ 25,000 ವಿದ್ಯಾರ್ಥಿಗಳಿದ್ದಾರೆ. ಪ್ರತಿ ವರ್ಷ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಈ ಪೈಕಿ 3-4 ವಿದ್ಯಾರ್ಥಿಗಳು, ಅವರಲ್ಲಿ ಹೆಚ್ಚಿನವರು ಮಾಜಿ ವಿದ್ಯಾರ್ಥಿಗಳು, ಅಂತಹ ಆರೋಪಗಳನ್ನು ಎದುರಿಸಿದರೆ, ಅದು ವಿಶ್ವವಿದ್ಯಾಲಯದ ಇಮೇಜ್ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಆಲಿಗಢ್ ಮುಸ್ಲಿಂ ವಿವಿಯ ವಾಸಿಂ ಅಲಿ ಹೇಳಿದ್ದಾರೆ.

Previous Post

ರಾಜ್ಯೋತ್ಸವ ಪ್ರಶಸ್ತಿ ಹಣದಲ್ಲಿ ಉಚಿತ ಆ್ಯಂಬುಲೆನ್ಸ್‌ ಸೇವೆ..!

Next Post

ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ್ ಖರ್ಗೆ ನೇಮಕ

Next Post
ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ್ ಖರ್ಗೆ ನೇಮಕ

ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರಾಗಿ ಮಲ್ಲಿಕಾರ್ಜುನ್ ಖರ್ಗೆ ನೇಮಕ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.