
ಚಿಕ್ಕಮಗಳೂರು ತಾಲೂಕು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ 2017ರಲ್ಲಿ ಗೋರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿತ್ತು. ಒಟ್ಟು 14 ಜನರ ಮೇಲೆ ಈ ಪ್ರಕರಣ ದಾಖಲಾಗಿದ್ದು, ಆಪಾದಿತರಿಗೆ ಮುಂದಿನ ಸೋಮವಾರ ಜನವರಿ 8ರಂದು ಕೋರ್ಟ್ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಚಿಕ್ಕಮಗಳೂರು, ಜನವರಿ 04: ಸಮಾಧಿ ಸೇರಿದ್ದ ಹಳೆಯ ಕೇಸುಗಳು ಮತ್ತೆ ಸದ್ದು (skeletons out of the cupboard) ಮಾಡತೊಡಗಿವೆ. ಸಿದ್ದರಾಮಯ್ಯ (Siddaramaiah) ನೇತೃತ್ವದ ಹಾಲಿ ಕಾಂಗ್ರೆಸ್ ಸರ್ಕಾರ ಹಳೆಯ ಕೇಸ್ಗಳ ರೀಓಪನ್ ಮಾಡಿಸುವ ಕೈಂಕರ್ಯವನ್ನು ಮುಂದುವರಿಸಿದೆ. 2017ರಲ್ಲಿ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಗಿರಿಧಾಮದಲ್ಲಿರುವ ದತ್ತ ಪೀಠದಲ್ಲಿದ್ದ ಗೋರಿಯನ್ನು (Baba Budangiri dargah) ಧ್ವಂಸಗೊಳಿಸಿದ ಪ್ರಕರಣಕ್ಕೆ ಮರುಜೀವ ನೀಡಲಾಗಿದೆ. ಇದರೊಂದಿಗೆ 7 ವರ್ಷದ ಬಳಿಕ ಅಂದಿನ ದತ್ತಪೀಠ ಹೋರಾಟಗಾರರ ಮೇಲಿದ್ದ ಹಳೇ ಕೇಸ್ ಅನ್ನು ರಾಜ್ಯ ಸರ್ಕಾರ ರೀ ಓಪನ್ ಮಾಡಿಸಿದಂತಾಗಿದೆ. ಗಮನಾರ್ಹವೆಂದರೆ ಬಿಜೆಪಿ ( BJP) ಸರ್ಕಾರದ ಅವಧಿಯಲ್ಲಿ ಈ ಕೇಸ್ ಕ್ಲೋಸ್ ಆಗಿತ್ತು.

ಒಟ್ಟು 14 ಜನರ ಮೇಲೆ ಈ ಪ್ರಕರಣ ದಾಖಲಾಗಿದ್ದು, ತುಡುಕೂರು ಮಂಜು, ಶಿವರಾಜ್, ಸಂದೇಶ್, ಸುಮಂತ್, ನಾಗ, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್, ರಾಮು ಅವರು ಆರೋಪಿಗಳಾಗಿದ್ದಾರೆ. ಆಪಾದಿತರಿಗೆ ಮುಂದಿನ ಸೋಮವಾರ ಜನವರಿ 8ರಂದು ಕೋರ್ಟ್ಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. 2017ರಲ್ಲಿ ಚಿಕ್ಕಮಗಳೂರು ತಾಲೂಕು ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಗೋರಿಯನ್ನು ಧ್ವಂಸಗೊಳಿಸಿದ ಘಟನೆ ನಡೆದಿತ್ತು.