
ಹೊಸದಿಲ್ಲಿ: ನಮ್ಮ ಮಕ್ಕಳು ಹೊಸ ವರ್ಷ ಆಚರಿಸುತ್ತಿರುವಾಗ ಗಾಝಾದ ಮಕ್ಕಳನ್ನು ನಿರ್ದಯವಾಗಿ ಕೊಲ್ಲಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹೊಸ ವರ್ಷದ ಆಗಮನವನ್ನು ಪರಸ್ಪರರಿಗೆ ಶುಭ ಹಾರೈಸಿ ನಾವು ಆಚರಿಸುತ್ತಿರುವಾಗ ಗಾಝಾದಲ್ಲಿ ತಮ್ಮ ಜೀವಿಸುವ ಹಕ್ಕು, ಗೌರವ ಮತ್ತು ಸ್ವಾತಂತ್ರ್ಯದ ಮೇಲೆ ನಿರಂತರ ದಬ್ಬಾಳಿಕೆ ಎದುರಿಸುತಿರುವ ನಮ್ಮ ಗಾಝಾದ ಸೋದರ, ಸೋದರಿಯರನ್ನು ನೆನಪಿಸೋಣ ಎಂದು ಬರೆದುಕೊಂಡಿದ್ದಾರೆ.

