ಐಐಟಿ ಬಿಎಚ್‌ಯು ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮೂವರು ಶಂಕಿತರನ್ನು ವಾರಣಾಸಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದು, ಆರೋಪಿಗಳಲ್ಲಿ ಇಬ್ಬರು ಬಿಜೆಪಿ ಐಟಿ ಸೆಲ್‌ನ ಸದಸ್ಯರು ಎನ್ನಲಾಗುತ್ತಿದೆ.
ವಾರಣಾಸಿಯ ಬ್ರಿಜ್ ಎನ್‌ಕ್ಲೇವ್ ಕಾಲೋನಿ ಸುಂದರ್‌ಪುರದ ಕುನಾಲ್ ಪಾಂಡೆ ಮತ್ತು ಜಿವಾಧಿಪುರ ಬಜಾರ್ದಿಹಾದ ಆನಂದ್ ಅಲಿಯಾಸ್ ಅಭಿಷೇಕ್ ಚೌಹಾನ್ ಮತ್ತು ಸಕ್ಷಮ್ ಪಟೇಲ್ ಬಂಧಿತ ವ್ಯಕ್ತಿಗಳು. ಅಪರಾಧ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ

ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಲ್ಲಿ ಇಬ್ಬರು ಬಿಜೆಪಿ ಐಟಿ ಸೆಲ್‌ಗೆ ಸಂಪರ್ಕ ಹೊಂದಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ತಿಳಿದುಬಂದಿದೆ. ಕುನಾಲ್ ಪಾಂಡೆ ವಾರಣಾಸಿಯ ಬಿಜೆಪಿ ಐಟಿ ಸೆಲ್‌ನಲ್ಲಿ ಮೆಟ್ರೋಪಾಲಿಟನ್ ಸಂಯೋಜಕ ಸ್ಥಾನವನ್ನು ಹೊಂದಿದ್ದರೆ, ಸಕ್ಷಮ್ ಪಟೇಲ್ ಐಟಿ ಸೆಲ್‌ನಲ್ಲಿ ವಾರಣಾಸಿ ಮೆಟ್ರೋಪಾಲಿಟನ್ ಸಹ-ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಖಿಲೇಶ್ ಖಂಡನೆ:
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಈ ಪ್ರಕರಣದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ‘ಬಂಧಿತರು ಬಿಜೆಪಿಯ ಹಿರಿಯ ನಾಯಕರ ಆಶ್ರಯದಲ್ಲಿರುವ ಹೊಸ ಬಿಜೆಪಿ ಕಾರ್ಯಕರ್ತರು ಎಂದು ತೋರಿಸಿದ್ದಾರೆ. ಬಂಧಿತರು ಬಿಜೆಪಿ ಕಾರ್ಯಕರ್ತರಾಗಿದ್ದು, ಬಿಜೆಪಿಯ ಉನ್ನತ ನಾಯಕರಿಂದ ವಿನಾಯಿತಿ ಪಡೆದಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

–
ಐಐಟಿ ಬಿಎಚ್‌ಯು ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮೂವರು ಶಂಕಿತರನ್ನು ವಾರಣಾಸಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದು, ಆರೋಪಿಗಳಲ್ಲಿ ಇಬ್ಬರು ಬಿಜೆಪಿ ಐಟಿ ಸೆಲ್‌ನ ಸದಸ್ಯರು ಎನ್ನಲಾಗುತ್ತಿದೆ.
ವಾರಣಾಸಿಯ ಬ್ರಿಜ್ ಎನ್‌ಕ್ಲೇವ್ ಕಾಲೋನಿ ಸುಂದರ್‌ಪುರದ ಕುನಾಲ್ ಪಾಂಡೆ ಮತ್ತು ಜಿವಾಧಿಪುರ ಬಜಾರ್ದಿಹಾದ ಆನಂದ್ ಅಲಿಯಾಸ್ ಅಭಿಷೇಕ್ ಚೌಹಾನ್ ಮತ್ತು ಸಕ್ಷಮ್ ಪಟೇಲ್ ಬಂಧಿತ ವ್ಯಕ್ತಿಗಳು. ಅಪರಾಧ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಲ್ಲಿ ಇಬ್ಬರು ಬಿಜೆಪಿ ಐಟಿ ಸೆಲ್‌ಗೆ ಸಂಪರ್ಕ ಹೊಂದಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದ ತಿಳಿದುಬಂದಿದೆ. ಕುನಾಲ್ ಪಾಂಡೆ ವಾರಣಾಸಿಯ ಬಿಜೆಪಿ ಐಟಿ ಸೆಲ್‌ನಲ್ಲಿ ಮೆಟ್ರೋಪಾಲಿಟನ್ ಸಂಯೋಜಕ ಸ್ಥಾನವನ್ನು ಹೊಂದಿದ್ದರೆ, ಸಕ್ಷಮ್ ಪಟೇಲ್ ಐಟಿ ಸೆಲ್‌ನಲ್ಲಿ ವಾರಣಾಸಿ ಮೆಟ್ರೋಪಾಲಿಟನ್ ಸಹ-ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಖಿಲೇಶ್ ಖಂಡನೆ:
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಈ ಪ್ರಕರಣದ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ‘ಬಂಧಿತರು ಬಿಜೆಪಿಯ ಹಿರಿಯ ನಾಯಕರ ಆಶ್ರಯದಲ್ಲಿರುವ ಹೊಸ ಬಿಜೆಪಿ ಕಾರ್ಯಕರ್ತರು ಎಂದು ತೋರಿಸಿದ್ದಾರೆ. ಬಂಧಿತರು ಬಿಜೆಪಿ ಕಾರ್ಯಕರ್ತರಾಗಿದ್ದು, ಬಿಜೆಪಿಯ ಉನ್ನತ ನಾಯಕರಿಂದ ವಿನಾಯಿತಿ ಪಡೆದಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
ಆಗಿದ್ದೇನು?
ಐಐಟಿ ಬಿಎಚ್‌ಯುನಲ್ಲಿ ನವೆಂಬರ್ 1ರ ರಾತ್ರಿ ಈ ಭಯಾನಕ ಘಟನೆ ಸಂಭವಿಸಿದ್ದು, ಬೈಕ್‌ನಲ್ಲಿ ಬಂದ ಮೂವರು ಯುವಕರು ಬಂದೂಕು ತೋರಿಸಿ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸುವಂತೆ ಒತ್ತಾಯಿಸಿದರು. ಆಕೆಯ ಮೇಲೆ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಲು ಮುಂದಾದ ಅವರು, ಹೇಯ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಗಣಿತ ಇಂಜಿನಿಯರಿಂಗ್ ವಿಭಾಗದ ಬಿ.ಟೆಕ್ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ಮಧ್ಯರಾತ್ರಿ 1:30ರ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕ್ಯಾಂಪಸ್‌ನ ಗಾಂಧಿ ಸ್ಮೃತಿ ಹಾಸ್ಟೆಲ್ ಬಳಿ ಬಳಿ ತನ್ನ ಸ್ನೇಹಿತೆಗೆ ಎದುರಾಗಿದ್ದಳು. ಆಗ ಬೈಕಿನಲ್ಲಿ ಬಂದ ಮೂವರು ಕಾಮುಕರು ಯುವತಿಯರನ್ನು ಅಡ್ಡಗಟ್ಟಿದ್ದಾರೆ. ಅಂತಿಮವಾಗಿ ಸಂತ್ರಸ್ತೆಯ ಸ್ನೇಹಿತೆಯನ್ನು ಕಳುಹಿಸಿ, ಆಕೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಗೆ ಲೈಂಗಿಕ ದೌರ್ಜನ್ಯ ನೀಡಿ, ಬೆದರಿಕೆ ಹಾಕಿದ್ದೂ ಅಲ್ಲದೆ, ಫೋನ್ ಅನ್ನು ಕಸಿದುಕೊಂಡಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ ವಾರಣಾಸಿ ಪೊಲೀಸರು ತೀವ್ರ ತನಿಖೆ ಪ್ರಾರಂಭಿಸಿದ್ದರು. ಐಐಟಿ ಬಿಎಚ್‌ಯು ಕ್ಯಾಂಪಸ್‌ನಲ್ಲಿರುವ 170ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದರು. ಸರಿಸುಮಾರು ಎರಡು ತಿಂಗಳ ನಂತರ ನಂತರ, ಸುಸುವಾಹಿ ಪ್ರದೇಶದ ಕುನಾಲ್ ಪಾಂಡೆ ಮತ್ತು ಅವರ ಸ್ನೇಹಿತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.