
ಮಂಗಳೂರು: ಕಬಡ್ಡಿ ಪಂದ್ಯಾಟದ ವೇಳೆ ಪ್ರೇಕ್ಷಕರ ಗ್ಯಾಲರಿ ಏಕಾಏಕಿ ಕುಸಿದು ಬಿದ್ದ ಘಟನೆ ಮಂಗಳೂರು ಹೊರವಲಯದ ಉಳ್ಳಾಲದಲ್ಲಿ ನಡೆದಿದೆ.
ಫ್ರೆಂಡ್ಸ್ ಉಲ್ಲಾಲ ಜ್ಯೂನಿಯರ್ ಪ್ರೋ ಕಬಡ್ಡಿ ಪಂದ್ಯಾಟ ಆಯೋಜಿಸಿತ್ತು. ಈ ವೇಳೆ ಪ್ರೇಕ್ಷಕರು ಗ್ಯಾಲರಿಯಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಿಸುತ್ತಿದ್ದರು. ಪಂದ್ಯ ವೀಕ್ಷಣೆಯ ವೇಳೆ ಗ್ಯಾಲರಿ ಏಕಾಏಕಿ ಕುಸಿದು ಬಿದ್ದಿದೆ.

ಇನ್ನು ಗ್ಯಾಲರಿ ಕುಸಿದ ಪರಿಣಾಮ ಸಣ್ಣಪುಟ್ಟ ಗಾಯಗಳಿಂದ ಪ್ರೇಕ್ಷಕರು ಪಾರಾಗಿದ್ದಾರೆ. ಸೆಮಿಫೈನಲ್ಸ್ ಪಂದ್ಯಾಟದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
