Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    ಲಂಚ ತಗೊಂಡಾದ್ಮೇಲೆ ಡಾಕ್ಟ್ರು ನಿನ್ ಹೆಂಡ್ತಿ ಸತ್ತೋದ್ಲು ಅಂದ್ರು: ಪತಿ ಗೋಳಾಟ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

Yuva Nidhi scheme: ಯುವನಿಧಿಗೆ ಡಿ.26ರಿಂದ ಆನ್‌ಲೈನ್‌ನಲ್ಲೇ ನೋಂದಣಿ! ಯಾರೆಲ್ಲ ಅರ್ಹ? ಅರ್ಜಿ ಸಲ್ಲಿಕೆ ಹೇಗೆ? ಯಾರಿಗೆ ಎಷ್ಟು ಹಣ?

editor tv by editor tv
December 22, 2023
in ರಾಜ್ಯ
0
Yuva Nidhi scheme: ಯುವನಿಧಿಗೆ ಡಿ.26ರಿಂದ ಆನ್‌ಲೈನ್‌ನಲ್ಲೇ ನೋಂದಣಿ! ಯಾರೆಲ್ಲ ಅರ್ಹ? ಅರ್ಜಿ ಸಲ್ಲಿಕೆ ಹೇಗೆ? ಯಾರಿಗೆ ಎಷ್ಟು ಹಣ?
1.9k
VIEWS
Share on FacebookShare on TwitterShare on Whatsapp

ಬೆಂಗಳೂರು: ರಾಜ್ಯ ಸರಕಾರದ ‘ಯುವನಿಧಿ’ ಯೋಜನೆ ಮೂಲಕ ನಿರುದ್ಯೋಗ ಭತ್ಯೆ ಪಡೆಯಲು ಅರ್ಜಿ ಸಲ್ಲಿಸುವವರು ಕನಿಷ್ಠ ಆರು ವರ್ಷ ಕರ್ನಾಟಕದಲ್ಲಿ ವಾಸವಾಗಿದ್ದು, ರಾಜ್ಯದಲ್ಲಿ ಪದವಿ, ಡಿಪ್ಲೊಮಾ ವ್ಯಾಸಂಗ ಮಾಡಿರಬೇಕು. ಯೋಜನೆಯ ನೋಂದಣಿ ಡಿ.26ರಿಂದ ಆರಂಭವಾಗಲಿದೆ. ನೋಂದಣಿ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ.

ಜನವರಿ 12 ರ ಸ್ವಾಮಿ ವಿವೇಕಾನಂದರ ಜಯಂತಿಯಂದು ಅರ್ಹರಿಗೆ ನಿರುದ್ಯೋಗ ಭತ್ಯೆ ಮೊತ್ತ ಡಿಬಿಟಿ ಮೂಲಕ ವರ್ಗಾವಣೆಯಾಗಲಿದೆ. ಈ ಯೋಜನೆಯ ಲಾಭವನ್ನು 5.29 ಲಕ್ಷ ಫಲಾನುಭವಿಗಳು ಪಡೆಯುವ ನಿರೀಕ್ಷೆ ಇದೆ. ಅನರ್ಹರು ನಿರುದ್ಯೋಗ ಭತ್ಯೆ ಪಡೆದರೆ ಅಷ್ಟೂ ಮೊತ್ತ ವಸೂಲಾತಿ ಜತೆಗೆ ಕಾನೂನು ಕ್ರಮವನ್ನೂ ಎದುರಿಸಬೇಕಾಗುತ್ತದೆ.

2022-23ನೇ ಶೈಕ್ಷಣಿಕ ಸಾಲಿನಲ್ಲಿ ಪದವೀಧರರಾದವರಿಗೆ ಮಾಸಿಕ 3000 ರೂ., ಡಿಪ್ಲೊಮಾ ತೇರ್ಗಡೆಯಾದವರಿಗೆ 1500 ರೂ. ನಿರುದ್ಯೋಗ ಭತ್ಯೆ ಸಿಗಲಿದೆ. ಫಲಾನುಭವಿಗಳು ಪ್ರತಿ ತಿಂಗಳ 25ರೊಳಗೆ ಸ್ವಯಂಘೋಷಣೆ ಮೂಲಕ ನಿರುದ್ಯೋಗ ಭತ್ಯೆ ಪಡೆಯಬಹುದು. ಸ್ವಂತ ಉದ್ಯೋಗ ಆರಂಭಿಸಿದರೆ, ಉದ್ಯೋಗ ಸಿಕ್ಕರೆ ಭತ್ಯೆ ಪಡೆಯುವಂತಿಲ್ಲ. ಐಟಿ- ಜಿಎಸ್‌ಟಿ ನೋಂದಣಿ, ಇಎಸ್‌ಐ- ಪಿಎಫ್‌ ಮಾಹಿತಿಯಿಂದಲೂ ಉದ್ಯೋಗ ಪಡೆದಿರುವ ಬಗ್ಗೆ ಮಾಹಿತಿ ಸಿಗಲಿದೆ. ಜತೆಗೆ ಶೇ.5ರಷ್ಟು ಭೌತಿಕ ಪರಿಶೀಲನೆಯೂ ನಡೆಯಲಿದೆ. ಅನರ್ಹರು ಪಡೆದರೆ ಅಷ್ಟು ಮೊತ್ತವನ್ನು ವಾಪಾಸ್‌ ಪಡೆಯುವ ಜತೆಗೆ ಕಾನೂನು ಕ್ರಮವೂ ಆಗಲಿದೆ.

ಯಾರೆಲ್ಲ ಅರ್ಹರು?

ನಿರುದ್ಯೋಗ ಭತ್ಯೆ ಪಡೆಯಲು ಬಯಸುವವರು 2022-23ನೇ ಸಾಲಿನಲ್ಲಿ ಪದವಿ/ ಡಿಪ್ಲೊಮಾ ತೇರ್ಗಡೆಯಾಗಿರಬೇಕು. ಕರ್ನಾಟಕದಲ್ಲಿಕನಿಷ್ಠ 6 ವರ್ಷದವರೆಗೆ ಪದವಿ/ ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದ ವಾಸಿಯಾಗಿರಬೇಕು.

ಇವರು ಅರ್ಹರಲ್ಲ

ಸರಕಾರಿ, ಸರಕಾರಿ ಅನುದಾನಿತ ಸಂಸ್ಥೆ/ ಖಾಸಗಿ ವಲಯಗಳಲ್ಲಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳು. ಸ್ವಯಂ ಉದ್ಯೋಗಿಗಳಾಗಿರುವ ಅಭ್ಯರ್ಥಿಗಳು. ವಿದ್ಯಾಭ್ಯಾಸವನ್ನು ಮುಂದುವರಿಸುವ ಅಭ್ಯರ್ಥಿಗಳು.

ಕರ್ನಾಟಕ ವಾಸಿ ಎಂದು ನಿರೂಪಿಸಲು ಸಲ್ಲಿಸಬೇಕಾದ ದಾಖಲೆ

  • ಪದವೀಧರ ಅಭ್ಯರ್ಥಿಗಳು: ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಇಲ್ಲವೇ ಸಿಇಟಿ ಸಂಖ್ಯೆಅಥವಾ ಪಡಿತರ ಚೀಟಿ ಸಂಖ್ಯೆ
  • ಡಿಪ್ಲೊಮಾ ಅಭ್ಯರ್ಥಿಗಳು: 8, 9ನೇ ತರಗತಿ ಅಂಕಪಟ್ಟಿ (ಎಸ್ಸೆಸ್ಸೆಲ್ಸಿ ಮೂಲದಿಂದ ಡಿಪ್ಲೊಮಾ ಮಾಡಿದ್ದರೆ) ಅಥವಾ ಎಸ್ಸೆಸ್ಸೆಲ್ಸಿ ಇಲ್ಲವೇ ಪಿಯುಸಿ ಅಥವಾ ಪಡಿತರ ಚೀಟಿ ಸಂಖ್ಯೆ

ಅರ್ಜಿ ಸಲ್ಲಿಕೆಗೆ ಅಗತ್ಯ ವಿದ್ಯಾರ್ಹತೆ ದಾಖಲಾತಿ

  • ಪದವೀಧರರು: ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ (ಪಿಡಿಸಿ)
  • ಡಿಪ್ಲೊಮಾ ಅಭ್ಯರ್ಥಿಗಳು: ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ, ಡಿಪ್ಲೊಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ

ಅರ್ಜಿ ಸಲ್ಲಿಕೆ ವಿಧಾನ- ಪ್ರಕ್ರಿಯೆ

ಅರ್ಹ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್‌ಗೆ ಲಾಗಿನ್‌ ಆಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ಪದವಿ/ ಡಿಪ್ಲೊಮಾ ತೇರ್ಗಡೆಯಾದ ಅಭ್ಯರ್ಥಿಗಳ ಶೈಕ್ಷಣಿಕ ಪ್ರಮಾಣ ಪತ್ರವನ್ನು ಎನ್‌ಎಡಿ ಪೋರ್ಟಲ್‌ನಲ್ಲಿಸಂಬಂಧಪಟ್ಟ ವಿವಿಗಳು/ ಶೈಕ್ಷಣಿಕ ಸಂಸ್ಥೆಗಳು/ ಮಂಡಳಿಗಳು ಇಂಡೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಲು ಜಾಲತಾಣದಲ್ಲಿ ಲಾಗಿನ್‌ ಆಗಬೇಕು. ತಮ್ಮ ಪದವಿ/ ಡಿಪ್ಲೊಮಾ ಪ್ರಮಾಣ ಪತ್ರದಲ್ಲಿ ನೀಡಿರುವ ನೋಂದಣಿ ಸಂಖ್ಯೆಯನ್ನು ದಾಖಲಿಸಿ ಪರಿಶೀಲಿಸಿಕೊಳ್ಳಬಹುದು. ಇದಕ್ಕೆ ಪೂರಕವಾಗಿ ಸೇವಾಸಿಂಧು ಮುಖಪುಟದಲ್ಲಿ ಲಿಂಕ್‌ ನೀಡಲಾಗಿದೆ.

  • ಕರ್ನಾಟಕ ಒನ್‌, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್‌ ಕೇಂದ್ರಗಳಲ್ಲೂಅರ್ಜಿ ಸಲ್ಲಿಸಬಹುದು. ಸೇವಾಸಿಂಧು ಪೋರ್ಟಲ್‌ನಲ್ಲಿ ಲಾಗಿನ್‌ ಮಾಡಿಕೊಂಡು ಯುವನಿಧಿ ಯೋಜನೆ ಸೇವೆ ಆಯ್ಕೆ ಮಾಡಿಕೊಳ್ಳಬೇಕು
  • ಮುಖಪುಟದಲ್ಲಿ ಲಾಗ್‌ಆನ್‌ ನಂತರ ಅರ್ಜಿ ನಮೂನೆ ತೆರೆದುಕೊಳ್ಳಲಿದ್ದು ಮೊದಲಿಗೆ ಅಭ್ಯರ್ಥಿಗಳು ನಿಬಂಧನೆಗಳನ್ನು ಓದಿ ಮೊದಲ ಘೋಷಣೆ ಮಾಡಿಕೊಳ್ಳಬೇಕು
  • ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಳ್ಳಬೇಕು
  • ಆಧಾರ್‌ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ಕೆವೈಸಿ ಮಾಹಿತಿ ಪಡೆಯಬೇಕು
  • ವಿದ್ಯಾರ್ಹತೆ ಮಾಹಿತಿ ಸಂಬಂಧ ಪ್ರಮಾಣ ಪತ್ರದಲ್ಲಿರುವ ನೋಂದಣಿ ಸಂಖ್ಯೆ ನಮೂದಿಸಿದ ತಕ್ಷಣ ಸ್ವಯಂಚಾಲಿತವಾಗಿ ಎನ್‌ಎಡಿ ಪೋರ್ಟಲ್‌ನಿಂದ ಸಕ್ರಿಯಗೊಳಿಸುತ್ತದೆ
  • ಜಾತಿ- ಪ್ರವರ್ಗ ಆಯ್ಕೆ ಮಾಡಿಕೊಳ್ಳಬೇಕು
  • ಮೊಬೈಲ್‌ ಸಂಖ್ಯೆ ನೀಡಿ ಒಟಿಪಿ ಪಡೆಯಬೇಕು. ಇ-ಮೇಲ್‌ ವಿಳಾಸ ದಾಖಲಿಸಿ ಒಟಿಪಿ ಪಡೆದು ಮತ್ತೊಮ್ಮೆ ದಾಖಲಿಸಬೇಕು
  • ಅಂತಿಮವಾಗಿ ಮತ್ತೊಮ್ಮೆ ಸ್ವಯಂ ಘೋಷಣೆ ಮಾಡಿ ನಂತರ ಅರ್ಜಿ ಸಲ್ಲಿಕೆ ಪೂರ್ಣಗೊಳ್ಳಲಿದೆ
  • ಅರ್ಜಿ ಸ್ವೀಕೃತಿ ಯಶಸ್ವಿಯಾಗಿರುವ ಬಗ್ಗೆ ಸಂದೇಶ ರವಾನೆಯಾಗುತ್ತದೆ. ನಂತರ ಸ್ವೀಕೃತಿ ಸೃಜನೆಯಾಗಲಿದ್ದು, ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು
  • ಅಭ್ಯರ್ಥಿಯು ಸೇವಾಸಿಂಧು ಪೋರ್ಟಲ್‌ನಲ್ಲಿ ನಿರುದ್ಯೋಗಿ ಸ್ಥಿತಿ ಬಗ್ಗೆ ಪ್ರತಿ ತಿಂಗಳ 25 ಅಥವಾ ಅದಕ್ಕಿಂತ ಮೊದಲು ಆಧಾರ್‌ ಒಟಿಪಿ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.

Previous Post

ಹೆಚ್​​ಡಿಕೆ, ಹೆಚ್​ಡಿಡಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಿಎಂ ಇಬ್ರಾಹಿಂ; ಆರೋಪ ಏನು ಗೊತ್ತಾ?

Next Post

Bajrang Punia: ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಕುಸ್ತಿಪಟು ಬಜರಂಗ್ ಪುನಿಯಾ

Next Post
Bajrang Punia: ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಕುಸ್ತಿಪಟು ಬಜರಂಗ್ ಪುನಿಯಾ

Bajrang Punia: ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ ಕುಸ್ತಿಪಟು ಬಜರಂಗ್ ಪುನಿಯಾ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.