
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಾರತದ ಸೇನಾ ವಾಹನಗಳ ಮೇಲೆ ಭೀಕರ ದಾಳಿ ನಡೆದಿದೆ. ಭಯೋತ್ಪಾದಕರು ದಾಳಿ ನಡೆಸಿದ್ದು, ಘಟನೆಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಎರಡು ಸೇನಾ ವಾಹನಗಳಲ್ಲಿ ಯೋಧರು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸೇನಾ ವಾಹನದಲ್ಲಿ ಯೋಧರನ್ನು ಸಾಗಿಸುವಾಗ ಉಗ್ರರ ದಾಳಿ ಮಾಡಿದ್ದಾರೆ.

ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಲ್ಲಿ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕಳೆದ ಬುಧವಾರ ರಾತ್ರಿಯಿಂದ ಭಯೋತ್ಪಾದಕರ ವಿರುದ್ಧ ಪೂಂಚ್‌ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಬುಫ್ಲಿಯಾಜ್ ಬಳಿಯ ಪ್ರದೇಶದಿಂದ ಸೇನಾ ವಾಹನಗಳಲ್ಲಿ ಯೋಧರನ್ನು ಈ ವಾಹನದಲ್ಲಿ ಸಾಗಿಸಲಾಗುತ್ತಿತ್ತು.

ರಾಜೌರಿ-ಥಾನಮಂಡಿ-ಸುರನ್‌ಕೋಟೆ ರಸ್ತೆಯ ಸಾವನಿ ಪ್ರದೇಶದಲ್ಲಿ ಇಂದು ಮಧ್ಯಾಹ್ನ 3:45ರ ಸುಮಾರಿಗೆ ದಾಳಿ ನಡೆದಿದೆ. ಟ್ರಕ್ ಮತ್ತು ಜಿಪ್ಸಿ ಸೇರಿದಂತೆ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಲಾಗಿದೆ. ಗಾಯಗೊಂಡಿದ್ದ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
