
ಮಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಉಜಿರೆಯ ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದರೂ, ಬಾಲಕನನ್ನು ಅಪಹರಿಸಲು ಸುಪಾರಿ ನೀಡಿದಾತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಿö್ಮÃ ಪ್ರಸಾದ್, ಬಾಲಕನ ತಂದೆ ಮೂರು ವರ್ಷಗಳ ಹಿಂದೆ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದ ಮಾಹಿತಿ ಇದ್ದ ಹಿನ್ನೆಲೆಯಲ್ಲಿ ಅಪಹರಣಕಾರರು ೧೦೦ ಬಿಟ್ ಕಾಯಿನ್ ಬೇಡಿಕೆ ಇರಿಸಿದ್ದರು. ಬಾಲಕನನ್ನು ಅಪಹರಿಸಲು ಬಾಲಕನ ತಂದೆಯ ಪರಿಚಿಯದ ವ್ಯಕ್ತಿಯೋರ್ವನೇ ಸುಪಾರಿ ನೀಡಿದ್ದು, ಅಪಹರಣಕಾರರಿಗೆ ಏಳು ಲಕ್ಷ ರೂ. ನೀಡುವುದಾಗಿ ಹೇಳಿದ್ದ. ಆದರೆ ಅಪಹರಣ ನಡೆದು ಒಂದು ದಿನವಾದರೂ ಹಣ ಬರದ ಹಿನ್ನೆಲೆಯಲ್ಲಿ ಅಪಹರಣಕಾರರು ಬೆಂಗಳೂರಿನಿAದ ಕೋಲಾರಕ್ಕೆ ತೆರಳಿ ಅವಿತು ಕುಳಿತಿದ್ದರು.
ಸುಪಾರಿ ನೀಡಿದ ವ್ಯಕ್ತಿ ಸಿಕ್ಕ ಬಳಿಕ ಅಪಹರಣದ ಸ್ಪಷ್ಟ ಉದ್ದೇಶ ಗೊತ್ತಾಗಲಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇನ್ನು ಅಪಹರಣಕಾರರು ಮಗುವಿಗೆ ಯಾವುದೇ ರೀತಿಯ ತೊಂದರೆಯನ್ನು ನೀಡಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.