
ಪಂಚರಾಜ್ಯಗಳ ಚುನಾವಣೆಯ ಮತದಾನ ಪ್ರಕ್ರಿಯೆಯು ಮುಕ್ತಾಯಗೊಂಡಿದ್ದು ಮತ ಎಣಿಕೆ ಪ್ರಕ್ರಿಯೆ ಡಿಸೆಂಬರ್ 3 ರಂದು ಅಂದರೆ ನಾಳೆ ನಡೆಯಲಿದೆ.
ಇದರ ನಡುವೆ ಮಿಜೋರಾಂನಲ್ಲಿ ಮತ ಎಣಿಕೆ ಕಾರ್ಯ ಒಂದು ದಿನಕ್ಕೆ ಮುಂದೂಡಲಾಗಿದೆ. ಡಿಸೆಂಬರ್ 3 ರ ಬದಲಾಗಿ ಡಿಸೆಂಬರ್ 4 ಕ್ಕೆ ಮತ ಎಣಿಕೆ ಕಾರ್ಯ ನಡೆಸುವುದಾಗಿ ಚುನಾವಣಾ ಆಯೋಗವು ಘೋಷಣೆ ಮಾಡಿದೆ.
ಡಿಸೆಂಬರ್ 3 ರಂದು ಭಾನುವಾರ ಆಗಿದ್ದು, ಕ್ರಿಶ್ಚಿಯನ್ನರ ಪವಿತ್ರ ದಿನವಾಗಿದೆ. ಆ ಕಾರಣಕ್ಕಾಗಿ ರಾಜ್ಯದಲ್ಲಿ ಎನ್‌ಜಿಒ ಸಮನ್ವಯ ಸಮಿತಿ ಪ್ರತಿಭಟನೆಗಳನ್ನು ನಡೆಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗವು ದಿನಾಂಕವನ್ನು ಪರಿಷ್ಕರಿಸಿದೆ. ನವೆಂಬರ್ 7 ರಂದು ಮಿಜೊರಾಂನ 40 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಇದೀಗ ಚುನಾವಣಾ ಫಲಿತಾಂಶದ ದಿನಾಂಕ ಬದಲಾವಣೆ ಆಗಿದೆ. ಸರ್ಕಾರ ರಚನೆಗೆ 21 ಮ್ಯಾಜಿಕ್ ನಂಬರ್ ಆಗಿದೆ.

