
ಹೈದರಾಬಾದ್: 2024ರ ಲೋಕಸಭಾ ಚುನಾವಣೆಗೆ ಮುನ್ನ ದೇಶದಲ್ಲಿ ಮಿನಿ ಸಮರ ನಡೆಯುತ್ತಿದೆ. ಅದರಲ್ಲೂ ಬಹುನಿರೀಕ್ಷಿತ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆ ಅಂತೂ ರಂಗೇರಿದೆ. ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿಗೆ ಬಿರುಸಿನ ಮತದಾನ ನಡೆಯುತ್ತಿದೆ. ಇದುವರೆಗೂ ಶೇಕಡಾ 60ಕ್ಕೂ ಹೆಚ್ಚು ಮತ ಚಲಾವಣೆ ಆಗಿದೆ ಎಂದು ತಿಳಿದು ಬಂದಿದೆ.

ಇನ್ನು, ಈ ಮಧ್ಯೆ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ಜನ್ ಕೀ ಬಾತ್ ಸರ್ವೇ ಪ್ರಕಾರ ಸಿಎಂ ಕೆಸಿಆರ್ ನೇತೃತ್ವದ ಬಿಆರ್ಎಸ್ 48, ಕಾಂಗ್ರೆಸ್ 56, ಬಿಜೆಪಿ 10, AIMIM 05 ಸೀಟು ಗೆಲ್ಲಲಿದೆ.

ತೆಲಂಗಾಣದ 32.6 ಮಿಲಿಯನ್ ಮತದಾರರು ಇದ್ದಾರೆ. 119 ವಿಧಾನಸಭಾ ಸ್ಥಾನಗಳಿಗೆ 2,290 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಪ್ರಧಾನಿ ಮೋದಿ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಭಾರತ್ ರಾಷ್ಟ್ರ ಸಮಿತಿ ಅಧ್ಯಕ್ಷ ಕೆಸಿಆರ್ ಸೇರಿದಂತೆ ಪ್ರಮುಖ ನಾಯಕರು ಪ್ರಚಾರ ಕೈಗೊಂಡಿದ್ದರು.