
ಅಣಬೆ ಫ್ಯಾಕ್ಟರಿಯ ವಿರುದ್ಧ ಧ್ವನಿ ಎತ್ತಿದ ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸುವ ಮೂಲಕ ದರ್ಪ ಪ್ರದರ್ಶಿಸಿದ ಜೆ.ಆರ್. ಲೋಬೋ
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಜೆ ಆರ್ ಲೋಬೊ ರವರ ಒಡೆತನದ ವಾಮಂಜೂರಿನ ಜನನಿಬಿಡ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಅಣಬೆ ಫ್ಯಾಕ್ಟರಿಯ ದುರ್ನಾತ ಬೀರುವ ಮಾಲಿನ್ಯದಿಂದ ಸಂಕಷ್ಟಕ್ಕೆ ಒಳಗಾದ ಸ್ಥಳೀಯ ಸಂತ್ರಸ್ತರು ಕಳೆದ ಹಲವಾರು ಸಮಯಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರು.ಆದರೆ ಕಳೆದ ಎರಡು ತಿಂಗಳಿನಿಂದ ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರ ನೇತೃತ್ವದ ತಂಡ ಸಂತ್ರಸ್ತರ ಹೋರಾಟಕ್ಕೆ ಬೆಂಬಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ,ದೂರು ನೀಡುವುದು, ಮಾಧ್ಯಮಗಳಲ್ಲಿ ಈ ಬಗ್ಗೆ ಎಚ್ಚರಿಸಿ ಹೋರಾಟವನ್ನು ಇನ್ನಷ್ಟು ಬಲಿಷ್ಠಗೊಳಿಸಿತು.
ಇದರ ಪರಿಣಾಮವಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆ ಸೇರಿದಂತೆ ಅದರ ಮಾಲಿಕರಿಗೆ ತಲೆ ನೋವಾಗುವಂತೆ ಮಾಡಿತ್ತು.
ಇದೀಗ ಅಣಬೆ ಫ್ಯಾಕ್ಟರಿಯ ಮಾಲಿಕರಾದ ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಜೆ.ಆರ್.ಲೋಬೋ ರವರು ಸಂತ್ರಸ್ತ ಸ್ಥಳೀಯ ಮಹಿಳೆಯರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅವರನ್ನು ಭಯ ಪಡಿಸಲು ನೋಡಿ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡುತ್ತಿದ್ದಾರೆ.

ಇಲ್ಲಿರುವ ಇನ್ನೊಂದು ವಿಚಾರ ಏನೆಂದರೆ ಎಸ್‌ಡಿಪಿಐ ಹೋರಾಟಕ್ಕೆ ಇಳಿದಾಗ ಮಾಧ್ಯಮಗಳ ಮೂಲಕ “ನೀವು ಕೇಸ್ ಮಾಡುವುದಾದರೆ ನಮ್ಮ ಮೇಲೆ ಮಾಡಿ,ನಾವು ಎದುರಿಸಲು ತಯಾರಾಗಿದ್ದೇವೆ” ಎಂದು ಪಕ್ಷದ ಜಿಲ್ಲಾ ನಾಯಕರು ಬಹಿರಂಗ ಎಚ್ಚರಿಕೆಯನ್ನು ಮಾಲಿಕರಾದ ಜೆ.ಆರ್ ಲೋಬೋ ರವರಿಗೆ ನೀಡಿದ್ದರು.

ಆದರೆ ಅವರು ಸಂತ್ರಸ್ತರ ವಿರುದ್ಧ ಸುಳ್ಳು ಕೇಸು ದಾಖಲಿಸಿದ ಪರಿಣಾಮ ಇದೀಗ ಪೊಲೀಸರು ಸ್ಥಳೀಯ ಮಹಿಳೆಯರು ಸೇರಿದಂತೆ ಕೆಲವು ನಿವಾಸಿಗಳಿಗೆ ನೋಟೀಸು ಜಾರಿಗೊಳಿಸಿರುವುದು ಲೋಬೋ ರವರ ಅಹಂಕಾರದ ದರ್ಪವನ್ನು ಪ್ರತಿಬಿಂಬಿಸುತ್ತದೆ , ರಾಜ್ಯದಲ್ಲಿ ತನ್ನದೇ ಪಕ್ಷದ ಸರಕಾರ ಇದೆ ,ತಾನೊಬ್ಬ ಮಾಜಿ ಶಾಸಕ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ , ತನ್ನಲ್ಲಿ ಶ್ರೀಮಂತಿಕೆ ಇದೆ ಎಂಬ ದುರಹಂಕಾರದಲ್ಲಿ ಈ ರೀತಿ ಅಮಾಯಕ ಸಂತ್ರಸ್ತರಿಗೆ ಪೊಲೀಸ್ ದೂರಿನ ಮೇಲೆ ಭಯಪಡಿಸಿ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಲು ವಿಫಲ ಪ್ರಯತ್ನ ಮಾಡುತ್ತಿರುವ ಲೋಬೊ ನಡೆ ಖಂಡನೀಯ , ಜಿಲ್ಲಾಡಳಿತ ಸರಕಾರ, ಪೊಲೀಸ್ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಈ ವಿಚಾರದಲ್ಲಿ ಸ್ಪಷ್ಟ ನಿಲುವು ಕೈಗೊಳ್ಳಬೇಕು , ಪ್ರಭಾವಿ ವ್ಯಕ್ತಿಗಳ ಉದ್ದಿಮೆಗಳ ಮೇಲೆ ಅಧಿಕಾರಿಗಳು ತೋರುವ ಕಾಳಜಿ ಜನಸಾಮಾನ್ಯರ ನೆಮ್ಮದಿಯ ಬದುಕಿನ ಬಗ್ಗೆ ಯಾಕೆ ಯಾಕೆ ತೋರುತ್ತಿಲ್ಲ , ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯವನ್ನು ಪ್ರಶ್ನಿಸುವ , ಹೋರಾಟ ಮಾಡುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ ಆದನ್ನು ಸುಳ್ಳು ಪ್ರಕರಣಗಳ ಮೂಲಕ ದಮನಿಸುವುದಾದರೆ ಮುಂದಿನ ದಿನಗಳಲ್ಲಿ ಇನ್ನೂ ತೀವ್ರವಾಗಿ ಹೋರಾಟ ನಡೆಸಲು ನಾಗರಿಕರು ತಯಾರಾಗಿದ್ದಾರೆ . ನಮ್ಮ ನ್ಯಾಯಯುತ ಹೋರಾಟಕ್ಕೆ ಸರಕಾರ ಸ್ಪಂದನೆ ನೀಡುವುದಿಲ್ಲ ಎಂದಾದರೆ ಮುಂದೆ ಈ ಹೋರಾಟವನ್ನು ಜಿಲ್ಲಾಧಿಕಾರಿ,ಉಸ್ತುವಾರಿ ಸಚಿವರ ಕಚೇರಿ ಮುಂಭಾಗದಲ್ಲಿ ನಡೆಸುವುದು ಅಲ್ಲದೇ ಕಾರ್ಖಾನೆಗೆ ಸ್ಥಳೀಯರೇ ಸೇರಿ ಬೀಗ ಜಡಿಯುವುದು ಅನಿವಾರ್ಯ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ