
ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಮೋಹನ್ ಭಾಗವತ್ ನಿಯಂತ್ರಿಸುತ್ತಿದ್ದಾರೆ ಎಂದು AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪ ಮಾಡಿದ್ದಾರೆ.
ಹೈದರಾಬಾದ್ನಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ನಿಮಗೆ ಹೇಳಲು ಏನೂ ಇಲ್ಲದಿದ್ದಾಗ, ನಾವು ಧರಿಸುವ ಬಟ್ಟೆ, ಟೋಪಿ ಹಾಗೂ ನಮ್ಮ ಗಡ್ಡದ ಬಗ್ಗೆ ಮಾತನಾಡ್ತೀರಿ. ನೀವು ಈಗಲೂ RSSನೊಂದಿಗೆ ಸಂಪರ್ಕದಲ್ಲಿದ್ದು, ಮೋಹನ್ ಭಾಗವತ್ ನಿಮ್ಮನ್ನು ನಿಯಂತ್ರಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅಸಾದುದ್ದೀನ್ ಓವೈಸಿ ಹರಿಹಾಯ್ದರು.

