
ಸೂರತ್: ಗುಜರಾತ್‌ನ ಸೂರತ್ ರೈಲು ನಿಲ್ದಾಣದಲ್ಲಿ ಶನಿವಾರ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದೀಪಾವಳಿಗೆ ತಮ್ಮ ಊರುಗಳಿಗೆ ತೆರಳುತ್ತಿದ್ದ ಭಾರೀ ಸಂಖ್ಯೆಯ ಜನರು ವಿವಿಧ ರಾಜ್ಯಗಳಿಗೆ ತೆರಳಲು ನಿಲ್ದಾಣದಲ್ಲಿ ಜಮಾಯಿಸಿದ್ದರು.

ರೈಲು ಹತ್ತುವ ವೇಳೆ ಕಾಲ್ತುಳಿತ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದರೆ, ಹಲವರು ಪ್ರಜ್ಞೆ ತಪ್ಪಿದ್ದಾರೆ.ಗಾಯಾಳುಗಳಿಗೆ ತತ್ ಕ್ಷಣ ವೈದ್ಯಕೀಯ ನೆರವು ನೀಡಲಾಯಿತು. ಏತನ್ಮಧ್ಯೆ, ಸೂರತ್‌ನ ಸಂಸದ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳೊಂದಿಗೆ ಮಾತನಾಡಿದ್ದಾರೆ.

ಹಬ್ಬದ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಜನಸಂದಣಿ ನಿರ್ವಹಣೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಸುಮಾರು 165 ಆರ್‌ಪಿಎಫ್ ಮತ್ತು ಜಿಆರ್‌ಪಿ ಜವಾನರನ್ನು ಸೂರತ್ ನಿಲ್ದಾಣದಲ್ಲಿ ನಿಯೋಜಿಸಲಾಗಿದೆ ಮತ್ತು ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗಿದೆ.
