
ಮಕ್ಕಳನ್ನ ಆಸ್ಪತ್ರೆಗಳಿಗೆ ಕರೆದುಕೊಂಡು ಹೂಗುವ ಪೋಷಕರೇ ವೈದ್ಯರ ಬಗ್ಗೆ ಇರಲಿ ಎಚ್ಚರ. ಏಕೆಂದರೆ, ಬೆಂಗಳೂರಿನಲ್ಲಿ ಮಕ್ಕಳಿಗೆ ಅವಧಿ ಮೀರಿದ ಚುಚ್ಚು ಮದ್ದು, ಮಾತ್ರೆ, ಡ್ರಿಪ್ಸ್ ನೀಡಿ ಯಾಮಾರಿಸಲಾಗುತ್ತಿದೆ. ಡಾಕ್ಟರ್ಗಳ ನಿರ್ಲಕ್ಷದಿಂದಾಗಿ ಪುಟ್ಟ ಕಂದಮ್ಮವೊಂದು ಸಾವು ಬದುಕಿನ ಹೋರಾಡುತ್ತಿದೆ.

ಬೆಂಗಳೂರು, ನ.3: ಮಕ್ಕಳನ್ನ ಆಸ್ಪತ್ರೆಗಳಿಗೆ ಕರೆದುಕೊಂಡು ಹೂಗುವ ಪೋಷಕರೇ ವೈದ್ಯರ ಬಗ್ಗೆ ಇರಲಿ ಎಚ್ಚರ. ಏಕೆಂದರೆ, ಬೆಂಗಳೂರಿನಲ್ಲಿ ಮಕ್ಕಳಿಗೆ ಅವಧಿ ಮೀರಿದ ಚುಚ್ಚು ಮದ್ದು, ಮಾತ್ರೆ, ಡ್ರಿಪ್ಸ್ ನೀಡಿ ಯಾಮಾರಿಸಲಾಗುತ್ತಿದೆ. ಡಾಕ್ಟರ್ಗಳ ನಿರ್ಲಕ್ಷದಿಂದಾಗಿ ಪುಟ್ಟ ಕಂದಮ್ಮವೊಂದು ಸಾವು ಬದುಕಿನ ಹೋರಾಡುತ್ತಿದೆ.

ಮೂರು ವರ್ಷದ ಯಾದ್ವಿ ಎಂಬ ಮಗುವಿಗೆ ಅಕ್ಟೋಬರ್ 29 ರಂದು ಜ್ವರ ಬಂದಿದ್ದು, ಪೋಷಕರು ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಮಗು ಸುಸ್ತಾಗಿದೆ ಅಂತ ವೈದ್ಯರು ಡ್ರಿಪ್ಸ್ ಹಾಕಿದ್ದಾರೆ. ಈ ಮದ್ದು ಮಗುವಿನ ದೇಹಕ್ಕೆ ಹೋಗುತ್ತಿದ್ದಂತೆ ಮಗುವಿನ ತುಟಿಯಲ್ಲಿ ಸೌಲ್ಲಿಂಗ್, ರಕ್ತ ಬರಲು ಆರಂಭವಾಗಿದೆ.

ಇದನ್ನ ಗಮನಿಸಿದ ಪೋಷಕರಿಗೆ, ವೈದ್ಯರು ಅವಧಿ ಮುಗಿದ ಡ್ರಿಪ್ಸ್ ಕೊಟ್ಟಿರುವುದು ಗೊತ್ತಾಗಿದೆ. ಇದನ್ನ ಪ್ರಶ್ನಿಸಿದ್ದಕ್ಕೆ ವೈದ್ಯರು ತಪ್ಪನ್ನೆ ಸಮರ್ಥಿಸಿಕೊಂಡಿದ್ದಾರೆ. ಕೂಡಲೇ ಮಗುವನ್ನು ಪೋಷಕರು ಬೇರೊಂದು ಆಸ್ಪತ್ರೆಗೆ ದಾಖಲಿಸಿ ಸಂಜೀವಿನಿ ಆಸ್ಪತ್ರೆಯ ವಿರುದ್ಧ ಪೋಲಿಸರಿಗೆ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ, ಆಸ್ಪತ್ರೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಗುವಿನ ಪೋಷಕರು ಏರಿಯಾದ ಎಂಒಎಚ್ ಅವರಿಗೂ ಮಗುವಿನ ಪೋಷಕರು ದೂರು ನೀಡಿದ್ದಾರೆ