
ಉಡುಪಿ: ನಗರದ ಪ್ರತಿಷ್ಠಿತ ಚಿನ್ನದ ಮಳಿಗೆಯ ಮೇಲೆ ಮಂಗಳವಾರ ಬೆಳಗ್ಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕರಾವಳಿಯ ಅನೇಕ ಭಾಗಗಳಲ್ಲಿ ತನ್ನ ಶೋರೂಮ್ ಹೊಂದಿರುವ ಪ್ರಸಿದ್ಧ ಚಿನ್ನದ ಮಳಿಗೆ ಇದಾಗಿದ್ದು ಹೊರ ಜಿಲ್ಲೆಗಳಲ್ಲೂ ಚಿನ್ನದ ಮಳಿಗೆಗಳನ್ನು ಹೊಂದಿದೆ. ಬೆಳಗ್ಗೆ ಏಕಕಾಲದಲ್ಲಿ ಉಡುಪಿ, ಕಾರ್ಕಳ, ಕುಂದಾಪುರ, ಪುತ್ತೂರು, ಪಡುಬಿದ್ರಿ, ಬ್ರಹ್ಮಾವರ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ.

ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. 7ರಿಂದ 8 ವಾಹನಗಳಲ್ಲಿ ಆಗಮಿಸಿರುವ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು ದಕ್ಷಿಣ ಕನ್ನಡ
ಮಂಗಳೂರಲ್ಲಿರುವ ಚಿನ್ನಾಭರಣಗಳ ಮಳಿಗೆ ಆಭರಣ ಜ್ಯುವೆಲ್ಲರ್ಸ್ ಇದರ ವಿವಿಧ ಮಳಿಗೆ, ಮಾಲಕರ ಮನೆಯ ಮೇಲೆ ಇಂದು ಆದಾಯ ತೆರಿಗೆ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಉಡುಪಿ & ಮಂಗಳೂರಿನ ಕದ್ರಿ ಬಳಿಯ ಶಿವಭಾಗ್ ನಲ್ಲಿರುವ ಮಳಿಗೆಗಳಿಗೆ ಏಕಕಾಲದಲ್ಲಿ ದಾಳಿ ನಡೆದಿದೆ. ಎಲ್ಲಾ ಮಳಿಗೆಗಳಿಗೆ ಬೀಗ ಹಾಕಿ ಒಳಗಡೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿರುವುದು ತಿಳಿದುಬಂದಿದೆ. ದಾಳಿಯ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕೂಡ ಒದಗಿಸಲಾಗಿದೆ.
ಐದಾರು ಜನ ಐಟಿ ಅಧಿಕಾರಿಗಳ ತಂಡದಿಂದ ಜ್ಯುವೆಲ್ಲರಿಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಆಭರಣ ಜ್ಯುವೆಲ್ಲರಿ ಕರ್ನಾಟಕದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಮಳಿಗೆಗಳನ್ನು ಹೊಂದಿದೆ.
ದ.ಕ ಜಿಲ್ಲೆಯ ಬೆಳ್ತಂಗಡಿ, ಮಂಗಳೂರಿನ ಶಿವಭಾಗ್ ಹಾಗೂ ಕೊಟ್ಟಾರದಲ್ಲಿ ಮಳಿಗೆಗಳಿದ್ದು, ಉಡುಪಿಯ ಹಲವಡೆ ಆಭರಣ ಜ್ಯುವೆಲ್ಲರಿ ಮಳಿಗೆಗಳಿವೆ. ಐಟಿ ರೇಡ್ ನಡೆದಿದ್ದು ತನಿಖೆ ನಡೆಯುತ್ತಿದೆ.
