
ಬೆಂಗಳೂರು: ಇಲ್ಲಿನ ವೀರಭದ್ರನಗರದಲ್ಲಿ (Veerabhadra Nagar )ಬೆಂಕಿ ಕೆನ್ನಾಲಿಗೆಗೆ 19 ಬಸ್‌ಗಳು ಸುಟ್ಟು ಕರಕಲಾದ ಘಟನೆ (Bus Fire Incident) ನಡೆದಿದ್ದು, ಗಿರಿನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಬಳಿಕ ತನಿಖೆ ಆರಂಭಿಸಿರುವ ಪೊಲೀಸರಿಗೆ ಕಚೇರಿಯಲ್ಲಿದ್ದ ಲಕ್ಷ-ಲಕ್ಷ ಹಣವೂ ಸಹ ಬೆಂಕಿಗಾಹುತಿಯಾಗಿದೆ ಅನ್ನೋ ಮಾಹಿತಿಗೆ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ.

ಸದ್ಯ ಎಫ್‌ಐಆರ್ ದಾಖಲಿಸಿರುವ ಪೊಲೀಸರು FSL, ಅಗ್ನಿಶಾಮಕ ಇಲಾಖೆ, RTO ಮೂರು ಇಲಾಖೆಗಳ ವರದಿಗಾಗಿ ಕಾಯುತ್ತಿದ್ದಾರೆ. ಮೂರು ಇಲಾಖೆಗಳ ವರದಿ ಕೈ ಸೇರಿದ ಬಳಿಕ ಅಧಿಕೃತ ತನಿಖೆ ಆರಂಭಿಸುವುದಾಗಿ ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ಈ ನಡುವೆ ನಿನ್ನೆಯೇ ಲೊ ಬಿಪಿಯಿಂದ ಆಸ್ಪತ್ರೆ ಸೇರಿರುವ ಮಾಲೀಕ ಶ್ರೀನಿವಾಸ್ ಅವರನ್ನಯು ಡಿಸ್ಚಾರ್ಜ್ ಬಳಿಕ ನೋಟಿಸ್ ಕೊಟ್ಟು ಪೊಲೀಶರು ವಿಚಾರಣೆಗೆ ಕರೆತರಲಿದ್ದಾರೆ. ಈ ನಡುವೆ ಆಫೀಸ್ ನಲ್ಲಿ ಇಟ್ಟಿದ್ದ 8 ಲಕ್ಷ ರೂ. ಸಹ ಬೆಂಕಿಗಾಹುತಿ ಅನ್ನೊ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿರುವುದಾಗಿ ಅಧಿಕಾರಿ ಮೂಲಗಳು ತಿಳಿಸಿದ್ದಾರೆ.

ಆಕಸ್ಮಿಕ ಬೆಂಕಿಯಿಂದ 19 ಖಾಸಗಿ ಬಸ್‌ಗಳು ಸುಟ್ಟು ಕರಕಲಾದ ಘಟನೆ ಬೆಂಗಳೂರಿನ ವೀರಭದ್ರನಗರದಲ್ಲಿ ನಡೆದಿದೆ. ಎಸ್‌ವಿ ಕೋಚ್ ವರ್ಕ್ಶಾಪ್ ಗ್ಯಾರೇಜ್‌ನಲ್ಲಿ ಈ ಅನಾಹುತ ಸಂಭವಿಸಿದೆ. ಬಸ್‌ನ ಟೈರ್, ಡೀಸೆಲ್ ಟ್ಯಾಂಕ್‌ಗಳು ಸ್ಫೋಟಗೊಂಡು ಒಂದರಿಂದ ಒಂದಕ್ಕೆ ಬೆಂಕಿ ವ್ಯಾಪಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 60ಕ್ಕೂ ಹೆಚ್ಚು ಅಗ್ನಿಶಾಮಕ ಪಡೆಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅವಘಡಕ್ಕೆ ಬ್ಯಾಟರಿಯಲ್ಲಿ ಕಾಣಿಸಿಕೊಂಡ ಬೆಂಕಿಯೇ ಕಾರಣ ಎನ್ನಲಾಗಿದೆ.
ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಘಟನಾ ಸ್ಥಳಕ್ಕೆ ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸ್ಪಾರ್ಕ್ ಉಂಟಾಗುವ ಎಲ್ಲಾ ಸ್ಥಳಗಳಲ್ಲೂ ಅಗ್ನಿಶಾಮಕ ಇಲಾಖೆಯ ನಿಯಮಗಳ ಪಾಲನೆ ಆಗ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುವಂತೆ ಡಿಸಿಎಂ ಸೂಚನೆ ನೀಡಿದ್ದಾರೆ.