
ಅಹಮದಾಬಾದ್: ಕತ್ತಲೆಯನ್ನೇ ಕರಗಿಸಿ ಬಿಡುವಂತೆ ಅಗ್ನಿ ದೇವನ ರುದ್ರ ನರ್ತನ. ಎತ್ತ ನೋಡಿದ್ರೂ ಬರೀ ಬೆಂಕಿ.. ಬೆಂಕಿ.. ಬೆಂಕಿಯ ಜ್ವಾಲೆ. ಇದನ್ನ ನೋಡಿದ್ರೆ ಯಾವುದೋ ಌಕ್ಷನ್ ಸಿನಿಮಾದ ಸೀನ್ ಇರಬೇಕು ಅನಿಸುತ್ತೆ. ಆದ್ರೆ, ಹೀಗೆ ಧಗಧಗೆ ಹೊತ್ತಿ ಉರಿದಿದ್ದು ಕೆಮಿಕಲ್ ಫ್ಯಾಕ್ಟರಿ.
ಗುಜರಾತ್ನ ಅರವಳ್ಳಿ ಜಿಲ್ಲೆಯಲ್ಲಿ ಈ ಭೀಕರ ಅಗ್ನಿ ದುರಂತ ಸಂಭವಿಸಿದೆ. ಬೆಳಗಿನ ಜಾವದಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 60 ಟ್ಯಾಂಕರ್ಗಳು ಸುಟ್ಟು ಭಸ್ಮವಾಗಿವೆ.

10 ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟು ಯತ್ನಿಸಿದ್ರೂ ಸಾಧ್ಯವಾಗಿರಲಿಲ್ಲ. ಕಡೆಗೆ, ಬೆಂಕಿ ನಂದಿಸೋಕೆ ಗಾಂಧಿನಗರ, ಮೆಹ್ಸಾನಾ, ಹಿಮ್ಮತ್ ನಗರ, ಇದಾರ್ನಿಂದಲೂ ಅಗ್ನಿ ಶಾಮಕ ವಾಹನಗಳನ್ನ ಕರೆಸಬೇಕಾಯ್ತು.
