
ಫೆಲಸ್ತೀನ್’ಗೆ ಬೆಂಬಲ ಸೂಚಿಸಿ ಎಸ್.ಡಿ.ಪಿ.ಐ ವತಿಯಿಂದ ದ.ಕ ಜಿಲ್ಲೆಯ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ
ಮಂಗಳೂರು,ಅಕ್ಟೋಬರ್ 20: ಎಸ್‌ಡಿಪಿಐ ವತಿಯಿಂದ ದ.ಕ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವಾರು ಕಡೆಗಳಲ್ಲಿ ಇಂದು ಫೆಲೆಸ್ತೀನ್ ಜನತೆಯ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಮಾರಣಾಂತಿಕ ವಂಶ ಹತ್ಯೆಯನ್ನು ಖಂಡಿಸಿ ಹಾಗೂ ಮಾತೃಭೂಮಿಗಾಗಿ ಜಿಯೋನಿಸ್ಟ್ ಇಸ್ರೇಲ್‌ನ ವಿರುದ್ದ ಹೋರಾಡುತ್ತಿರುವ ಫೆಲೆಸ್ತೀನ್ ನ ದೀರ ಜನತೆಯೋಂದಿಗೆ ಭಾರತದ ಬೆಂಬಲ ಮುಂದುವರಿಸಬೇಕು ಎಂದು ಆಗ್ರಹಿಸಿ ಮತ್ತು ಅವರ ಹೋರಾಟಕ್ಕೆ ಭಾರತೀಯರಾದ ನಮ್ಮ ಬೆಂಬಲವನ್ನು ಸೂಚಿಸಿ ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು.



