
ಮಂಗಳೂರು ಅ 18: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನವಸತಿ ಪ್ರದೇಶದಲ್ಲಿರುವ ವಾಮಂಜೂರು ವೈಟ್ ಗ್ರೂವ್ ಅಣಬೆ ಫ್ಯಾಕ್ಟರಿಯಿಂದಾಗಿ ಸುಮಾರು 15 ಕುಟುಂಬದ ಮಕ್ಕಳು ವೃದ್ದರು ಶ್ವಾಸಕೋಶ ಸಂಬಂಧಿ ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ದಾಖಲಾಗಿದ್ದಾರೆ, ಅದಲ್ಲದೇ ಇನ್ನೂ ಹಲವಾರು ಮಂದಿ ಕಾಯಿಲೆಗೆ ತುತ್ತಾಗಿ ಅನಿವಾರ್ಯವಾಗಿ ತಮ್ಮ ವಸತಿಯನ್ನು ಸ್ಥಳಾಂತರ ಮಾಡಿ ಕುಟುಂಬಸ್ಥರ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ,ಹಾಗೂ ಇನ್ನೂ ಹಲವು ಮಂದಿ ಈ ಕಾರ್ಖಾನೆಯಿಂದ ಹೊರಸೂಸುವ ಮಾರಕ ವಿಷಗಾಳಿಯಿಂದ ದಿನನಿತ್ಯ ಬೇರೆ ಬೇರೆ ಕಾಯಿಲೆಗೆ ತುತ್ತಾಗುತ್ತಿದ್ದಾರೆ

. ಅಣಬೆ ಕಾರ್ಖಾನೆಯ ವಿರುದ್ಧ ಕಳೆದ ಮೂರ್ನಾಲ್ಕು ತಿಂಗಳಿನಿಂದ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದರು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಅಣಿಬೆ ಕಾರ್ಖಾನೆಯ ವಿರುದ್ಧ ಯಾವುದೇ ಕ್ರಮಗೊಳ್ಳಲಿಲ್ಲ. ಜನಸಾಮಾನ್ಯರ ಅಹವಾಲನ್ನು ಸ್ವೀಕರಿಸಲು ಮುಂದಾಗದ ಅಧಿಕಾರಿಗಳು ಮತ್ರು ಜನಪ್ರತಿನಿಧಿಗಳ ನಡೆಯನ್ನು ಎಸ್‌ಡಿಪಿಐ ಪಕ್ಷ ಸವಾಲಾಗಿ ಸ್ವೀಕರಿಸಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟಕ್ಕೆ ಸಜ್ಜಾಗಿದೆ.

ನಾಗರಿಕರ ಪ್ರಾಣದ ಮೇಲೆ ಅಪಾಯ ಬೀರುವ ಈ ಕಾರ್ಖಾನೆಯ ಅನುಮತಿಯನ್ನು ಸಂಬಂಧಪಟ್ಟ ಇಲಾಖೆಗಳು ಕೂಡಲೇ ರದ್ದು ಪಡಿಸಬೇಕು ಅಥವಾ ಜನವಸತಿ ಪ್ರದೇಶದಿಂದ ಕೈಗಾರಿಕಾ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು. ಇಲ್ಲದಿದ್ದಲ್ಲಿ ನಾಗರಿಕರನ್ನು ಒಟ್ಟು ಸೇರಿಸಿ ಕಾರ್ಖಾನೆಗೆ ಬೀಗ ಜಡಿದು ಬೃಹತ್ ಹೋರಾಟ ನಡೆಸಲಾಗುವುದೆಂದು ಎಸ್‌ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ನೇತ್ರತ್ವದ ಜಿಲ್ಲಾ ನಿಯೋಗವು ದ.ಕ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಧಿಕಾರಿ, ಮಂಗಳೂರು ಪೋಲೀಸ್ ಆಯುಕ್ತರು, ತೋಟಗಾರಿಕೆ ಉಪ ನಿರ್ದೇಶಕರು, ಹಿರಿಯ ಪರಿಸರ ಅಧಿಕಾರಿಯವರನ್ನು ಬೇಟಿಯಾಗಿ ಎಚ್ಚರಿಕೆ ನೀಡಿದೆ.

ನಿಯೋಗದಲ್ಲಿ ಎಸ್‌ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರ್, ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ ಉಪಸ್ಥಿತರಿದ್ದರು.