
Same-sex marriage: ಸಲಿಂಗ ವಿವಾಹಕ್ಕೆ ಅವಕಾಶ ಕಲ್ಪಿಸಲು ವಿಶೇಷ ವಿವಾಹ ಕಾಯ್ದೆಯ ಆಡಳಿತದಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ಸಂಸತ್ ನಿರ್ಧರಿಸಬೇಕು ಎಂದು ಸುಪ್ರೀಂ ಪೀಠ ಹೇಳಿದೆ. ಅದೇ ಸಮಯದಲ್ಲಿ, ಹಾಗೆ ಮಾಡಲು ವಿಫಲವಾದರೆ ಕ್ವೀರ್ ದಂಪತಿಗಳ (ಸಲಿಂಗಿ, ದ್ವಿಲಿಂಗಿ, ಟ್ರಾನ್ಸ್ಜೆಂಡರ್ ಸೇರಿದಂತೆ ಒಟ್ಟಾರೆ ಭಿನ್ನವಾಗಿರುವರನ್ನು ಸಂಬೋಧಿಸಲು ಕ್ವೀರ್ ಪದವನ್ನು ಬಳಸಲಾಗುತ್ತದೆ) ವಿರುದ್ಧ ತಾರತಮ್ಯ ಉಂಟಾಗುತ್ತದೆ ಎಂದು ಅದು ಸೂಚಿಸಿತು.

ದೆಹಲಿ ಅಕ್ಟೋಬರ್ 17 : ಭಾರತದಲ್ಲಿ ಸಲಿಂಗ ವಿವಾಹ ವನ್ನು(Same-sex marriage) ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ (Supreme Court) ಮಂಗಳವಾರ 3:2 ಬಹುಮತದ ತೀರ್ಪಿನಲ್ಲಿ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (Chief Justice D Y Chandrachud) ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಸಲಿಂಗ ದಂಪತಿಗಳಿಗೆ ಮದುವೆಯಾಗುವ ಅಥವಾ ಒಟ್ಟಾಗಿ ಬಾಳುವ ಹಕ್ಕನ್ನು ಕಾನೂನು ಗುರುತಿಸುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಕಾನೂನು ರೂಪಿಸುವುದು ಸಂಸತ್ ಗೆ ಬಿಟ್ಟದ್ದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ ಎಸ್ ನರಸಿಂಹ ಪೀಠದ ಇತರ ಸದಸ್ಯರಾಗಿದ್ದರು. ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಕೌಲ್ ಅವರು ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸುವ ಮನವಿಯನ್ನು ಬೆಂಬಲಿಸಿದರೆ, ಇತರ ಮೂವರು ನ್ಯಾಯಾಧೀಶರು ಅದನ್ನು ತಿರಸ್ಕರಿಸಿದರು. 10 ದಿನಗಳ ನಿರಂತರ ವಿಚಾರಣೆಯ ನಂತರ ಪೀಠವು ಮೇ 11 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಸಲಿಂಗ ವಿವಾಹಕ್ಕೆ ಅವಕಾಶ ಕಲ್ಪಿಸಲು ವಿಶೇಷ ವಿವಾಹ ಕಾಯ್ದೆಯ ಆಡಳಿತದಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬುದನ್ನು ಸಂಸತ್ ನಿರ್ಧರಿಸಬೇಕು ಎಂದು ಸುಪ್ರೀಂ ಪೀಠ ಹೇಳಿದೆ. ಅದೇ ಸಮಯದಲ್ಲಿ, ಹಾಗೆ ಮಾಡಲು ವಿಫಲವಾದರೆ ಕ್ವೀರ್ ದಂಪತಿಗಳ (ಸಲಿಂಗಿ, ದ್ವಿಲಿಂಗಿ, ಟ್ರಾನ್ಸ್ಜೆಂಡರ್ ಸೇರಿದಂತೆ ಒಟ್ಟಾರೆ ಭಿನ್ನವಾಗಿರುವರನ್ನು ಸಂಬೋಧಿಸಲು ಕ್ವೀರ್ ಪದವನ್ನು ಬಳಸಲಾಗುತ್ತದೆ) ವಿರುದ್ಧ ತಾರತಮ್ಯ ಉಂಟಾಗುತ್ತದೆ ಎಂದು ಅದು ಸೂಚಿಸಿತು.

ಈ ನ್ಯಾಯಾಲಯವು ಶಾಸಕಾಂಗ ಡೊಮೇನ್ಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ವಿಶೇಷ ವಿವಾಹ ಕಾಯಿದೆಯ ಮಿತಿಗಳ ಕಾರಣದಿಂದ ನ್ಯಾಯಾಲಯವು ಅದನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಒಬ್ಬರ ಬಾಳ ಸಂಗಾತಿಯನ್ನು ಆಯ್ಕೆ ಮಾಡುವ ವಿಷಯವು ಸಂವಿಧಾನದ 21ನೇ ವಿಧಿಯಡಿ ಒಬ್ಬರ ಬದುಕು ಮತ್ತು ಸ್ವಾತಂತ್ರ್ಯದ ಹಕ್ಕಿಗೆ ಸಂಬಂಧಿಸಿದ್ದಾಗಿದೆ. ಅದರಲ್ಲಿ ತಮ್ಮ ಬಾಳ ಸಂಗಾತಿಯ ಆಯ್ಕೆ ಮತ್ತು ಅದನ್ನು ದೃಢಪಡಿಸುವುದು ಕೂಡಾ ಒಳಗೊಂಡಿದೆ. ಇದನ್ನು ಗುರುತಿಸದಿರುವುದು ತಾರತಮ್ಯವೇ ಸರಿ’ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದಾರೆ

ಅಂತಹ ದಂಪತಿಗಳಿಗೆ ನೀಡಬಹುದಾದ ಹಕ್ಕುಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸುತ್ತದೆ ಎಂದು ಸಾಲಿಸಿಟರ್ ಜನರಲ್ ಹೇಳಿದರು.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿದ ಅರ್ಜಿಗಳ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುವಾಗ ಮುಖ್ಯ ನ್ಯಾಯಮೂರ್ತಿ ಮೂರು ತೀರ್ಮಾನಗಳನ್ನು ಮಾಡಿದರು. 1. ಪ್ರಕರಣವನ್ನು ವಿಚಾರಣೆ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ. 2. ಕ್ವೀರ್ ಯುಗಗಳಿಂದಲೂ ಭಾರತಕ್ಕೆ ತಿಳಿದಿರುವ ನೈಸರ್ಗಿಕ ವಿದ್ಯಮಾನವಾಗಿದೆ. ಇದು ನಗರ ಅಥವಾ ಗಣ್ಯರ ಸಮುದಾಯದಲ್ಲಿರುವುದಲ್ಲ. 3. ಮದುವೆ ಸ್ಥಿರ ಅಲ್ಲ.
ಸಲಿಂಗಕಾಮವು ನಗರ ಪರಿಕಲ್ಪನೆಯಲ್ಲ
ಸಲಿಂಗಕಾಮವನ್ನು ನಗರ ಪರಿಕಲ್ಪನೆ ಎಂದು ಪರಿಗಣಿಸುವುದು ಸರಿಯಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. “ಸಲಿಂಗಕಾಮ ಅಥವಾ ಕ್ವೀರ್ ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಮೇಲ್ವರ್ಗದವರಿಗೆ ಸೀಮಿತವಾಗಿಲ್ಲ. ಇಂಗ್ಲಿಷ್ ಮಾತನಾಡುವ ವೈಟ್ ಕಾಲರ್ ಪುರುಷ ಕ್ವೀರ್ ಎಂದು ಹೇಳಿಕೊಳ್ಳುವುದಾದರೆ ಅದೇ ರೀತಿ ಹಳ್ಳಿಯಲ್ಲಿ ಕೃಷಿ ಕೆಲಸದಲ್ಲಿ ಕೆಲಸ ಮಾಡುವ ಮಹಿಳೆಯೂ ಹೇಳಬಹುದು. ಕ್ವೀರ್ ಜನರು ನಗರ ಮತ್ತು ಗಣ್ಯ ಸಮುದಾಯದ ಸ್ಥಳಗಳಲ್ಲಿ ಮಾತ್ರ ಇರುತ್ತಾರೆ ಎಂದು ಕಲ್ಪಿಸಿಕೊಳ್ಳಬಾರದು. ಒಬ್ಬರ ಜಾತಿ ಅಥವಾ ವರ್ಗ ಅಥವಾ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಕ್ವೀರ್ನೆಸ್ ಇರಬಹುದು” ಎಂದು ಡಿ ವೈ ಚಂದ್ರಚೂಡ್ ಹೇಳಿದರು.