
ಹೈದರಾಬಾದ್: ಇಸ್ರೇಲ್ ಪ್ರಧಾನಿ ವಿರುದ್ಧ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ನೆತನ್ಯಾಹು ರಾಕ್ಷಸ, ಕ್ರೂರಿ ಮತ್ತು ಯುದ್ಧ ಅಪರಾಧಿ ಎಂದು ಆರೋಪಿಸಿದ್ದಾರೆ.
ಹೈದರಾಬಾದ್ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಓವೈಸಿ, ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿರುವ ಮಧ್ಯೆ ಗಾಜಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಿ ಅವರಿಗೆ ಸಹಾಯ ಮಾಡುವಂತೆ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಇಂದಿಗೂ ಹೋರಾಡುತ್ತಿರುವ ಗಾಜಾದ ವೀರ ಸೈನಿಕರಿಗೆ ಹೃತ್ಪೂರ್ವಕ ನಮನಗಳು! ಅಲಲ್ದೆ ಅವರ ಸಾಧನೆಗೆ ನನ್ನ ನಮನಗಳು ಯಾವುದೇ ಸಂದರ್ಭದಲ್ಲೂ ನಾನು ಪ್ಯಾಲೆಸ್ತೀನ್ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

ಅಷ್ಟುಮಾತ್ರವಲ್ಲದೆ ನೆತನ್ಯಾಹು ಒಬ್ಬ ದೆವ್ವ, ಕ್ರೂರ ಮತ್ತು ಯುದ್ಧ ಅಪರಾಧಿ ಎನ್ನದು ಹೇಳಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಸಾವಿರಾರು ಜನರು ಸಾವನ್ನಪ್ಪಿದ ಮತ್ತು ಗಾಯಗೊಂಡಿರುವ ಮಧ್ಯೆ ಗಾಜಾದ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಮತ್ತು ಅವರಿಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಪ್ಯಾಲೆಸ್ಟೀನಿಯನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸುವಂತೆ ನಾನು ಪ್ರಧಾನಿಗೆ ಮನವಿ ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದ ಅವರು ಪ್ಯಾಲೆಸ್ತೀನ್ ಕೇವಲ ಮುಸ್ಲಿಮರ ವಿಷಯವಲ್ಲ; ಇದು ಮಾನವೀಯ ಸಮಸ್ಯೆಯಾಗಿದ್ದು ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.