
ಪತ್ರಕರ್ತರ ಗುಂಪು ಇಸ್ರೇಲ್ ಗಡಿಗೆ ಸಮೀಪವಿರುವ ಅಲ್ಮಾ ಅಲ್-ಶಾಬ್ ಬಳಿ ಕೆಲಸ ಮಾಡುತ್ತಿದೆ, ಅಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಲೆಬನಾನಿನ ಮಿಲಿಷಿಯಾ ಹಿಜ್ಬುಲ್ಲಾ ಗಡಿಯಲ್ಲಿ ಸಂಘರ್ಷ ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.ಲೆಬನಾನಿನ ಪ್ರಧಾನಿ ನಜೀಬ್ ಮಿಕಾಟಿ ಮತ್ತು ಹಿಜ್ಬುಲ್ಲಾ ಶಾಸಕರು ಘಟನೆಯನ್ನು ಇಸ್ರೇಲ್ ಮೇಲೆ ಆರೋಪಿಸಿದ್ದಾರೆ.

ಲೆಬನಾನ್ ಅಕ್ಟೋಬರ್ 14: ಇಸ್ರೇಲ್ (Israel )ಕಡೆಯಿಂದ ಕ್ಷಿಪಣಿಗಳು ಹಾರಿದ್ದು, ಶುಕ್ರವಾರ ದಕ್ಷಿಣ ಲೆಬನಾನ್‌ನಲ್ಲಿ (Lebanon) ರಾಯಿಟರ್ಸ್ ವಿಡಿಯೊ ಪತ್ರಕರ್ತ ಇಸಾಮ್ ಅಬ್ದುಲ್ಲಾ (Issam Abdallah) ಈ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಅದೇ ವೇಳೆ ಇತರ ಆರು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ (Reuters) ವರದಿ ಮಾಡಿದೆ. ದೃಶ್ಯದಲ್ಲಿದ್ದ ಅಸೋಸಿಯೇಟೆಡ್ ಪ್ರೆಸ್ ಫೋಟೋಗ್ರಾಫರ್ ರಾಯಿಟರ್ಸ್ ವಿಡಿಯೊಗ್ರಾಫರ್ ಅಬ್ದುಲ್ಲಾ ಅವರ ಶವವನ್ನು ಮತ್ತು ಗಾಯಗೊಂಡಿದ್ದ ಅಲ್ ಜಜೀರಾ ಮತ್ತು ಏಜೆನ್ಸ್ ಫ್ರಾನ್ಸ್-ಪ್ರೆಸ್ ಪತ್ರಕರ್ತರು ಸೇರಿದಂತೆ ಆರು ಮಂದಿ ಗಾಯಗೊಂಡಿರುವುದನ್ನು ನೋಡಿದ್ದಾರೆ. ಅವರಲ್ಲಿ ಕೆಲವರನ್ನು ಆಂಬ್ಯುಲೆನ್ಸ್‌ಗಳಲ್ಲಿ ಆಸ್ಪತ್ರೆಗಳಿಗೆ ರವಾನಿಸಲಾಯಿತು. ದೃಶ್ಯದ ಚಿತ್ರಗಳು ಸುಟ್ಟ ಕಾರನ್ನು ತೋರಿಸಿದೆ.

ಪತ್ರಕರ್ತರ ಗುಂಪು ಇಸ್ರೇಲ್ ಗಡಿಗೆ ಸಮೀಪವಿರುವ ಅಲ್ಮಾ ಅಲ್-ಶಾಬ್ ಬಳಿ ಕೆಲಸ ಮಾಡುತ್ತಿದೆ, ಅಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಲೆಬನಾನಿನ ಮಿಲಿಷಿಯಾ ಹಿಜ್ಬುಲ್ಲಾ ಗಡಿಯಲ್ಲಿ ಸಂಘರ್ಷ ನಡೆಸುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.ಲೆಬನಾನಿನ ಪ್ರಧಾನಿ ನಜೀಬ್ ಮಿಕಾಟಿ ಮತ್ತು ಹಿಜ್ಬುಲ್ಲಾ ಶಾಸಕರು ಘಟನೆಯನ್ನು ಇಸ್ರೇಲ್ ಮೇಲೆ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ವಿನಂತಿಸಿದಾಗ ಇಸ್ರೇಲ್ ರಕ್ಷಣಾ ಪಡೆಗಳು ಅಥವಾ IDF ತಕ್ಷಣವೇ ಪ್ರತಿಕ್ರಿಯಿಸಲಿಲ್ಲ. ಇಸ್ರೇಲ್‌ನ UN ರಾಯಭಾರಿ ಗಿಲಾಡ್ ಎರ್ಡಾನ್ ಸುದ್ದಿಗೋಷ್ಠಿಯನ್ನುದ್ದೇಶಿಸಿ, ನಿಸ್ಸಂಶಯವಾಗಿ, ನಾವು ಎಂದಿಗೂ ತನ್ನ ಕೆಲಸವನ್ನು ಮಾಡುತ್ತಿರುವ ಯಾವುದೇ ಪತ್ರಕರ್ತರನ್ನು ಹೊಡೆಯಲು ಅಥವಾ ಕೊಲ್ಲಲು ಅಥವಾ ಶೂಟ್ ಮಾಡಲು ಬಯಸುವುದಿಲ್ಲ. ಆದರೆ ನಿಮಗೆ ತಿಳಿದಿದೆ, ನಾವು ಯುದ್ಧದ ಸ್ಥಿತಿಯಲ್ಲಿದ್ದೇವೆ, ಏನಾದರೂ ಸಂಭವಿಸಬಹುದು ಘಟನೆಯ ಬಗ್ಗೆ ಇಸ್ರೇಲ್ ತನಿಖೆ ನಡೆಸಲಿದೆ ಎಂದು ಹೇಳಿದ್ದಾರೆ.

ಲೈವ್ ವಿಡಿಯೊ ಮಾಡುತ್ತಿರುವಾಗ ಅಬ್ದುಲ್ಲಾನನ್ನು ಕೊಲ್ಲಲಾಗಿದೆ ಎಂದು ರಾಯಿಟರ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಒಂದು ದೊಡ್ಡ ಸ್ಫೋಟದ ಸದ್ದು ಕ್ಯಾಮರಾವನ್ನು ಅಲುಗಾಡಿಸಿತು, ಗಾಳಿಯಲ್ಲಿ ಹೊಗೆ ತುಂಬಿಕೊಂಡಿತು. ಕಿರುಚಾಟಗಳು ಕೇಳಿದಾಗ ಕ್ಯಾಮೆರಾ ಬೆಟ್ಟದ ಕಡೆಗೆ ತಿರುಗುವುದು ವಿಡಿಯೊದಲ್ಲಿ ಕಾಣುತ್ತದೆ.
ನಮ್ಮ ವಿಡಿಯೋಗ್ರಾಫರ್ ಇಸ್ಸಾಮ್ ಅಬ್ದುಲ್ಲಾ ಹತ್ಯೆಯಾಗಿದೆ ಎಂದು ತಿಳಿದು ನಮಗೆ ಅತೀವ ದುಃಖವಾಗಿದೆ ಎಂದು ಸುದ್ದಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. “ನಾವು ತುರ್ತಾಗಿ ಹೆಚ್ಚಿನ ಮಾಹಿತಿಯನ್ನು ಹುಡುಕುತ್ತಿದ್ದೇವೆ, ಈ ಪ್ರದೇಶದಲ್ಲಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ. ಇಸಾಮ್ ಅವರ ಕುಟುಂಬ ಮತ್ತು ಸಹೋದ್ಯೋಗಿಗಳನ್ನು ಬೆಂಬಲಿಸುತ್ತೇವೆ ಎಂದು ಅದು ಹೇಳಿದೆ.
ಇನ್ನಿಬ್ಬರು ರಾಯಿಟರ್ಸ್ ಪತ್ರಕರ್ತರು, ಥಾರ್ ಅಲ್-ಸುಡಾನಿ ಮತ್ತು ಮಹೇರ್ ನಝೆಹ್ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ವೈದ್ಯಕೀಯ ಆರೈಕೆಯ ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ರಾಯಿಟರ್ಸ್ ಮತ್ತು ಇತರ ಎರಡು ಸುದ್ದಿ ಸಂಸ್ಥೆಗಳು ಇಸ್ರೇಲ್‌ನ ದಿಕ್ಕಿನಿಂದ ಬರುತ್ತಿರುವ ಕ್ಷಿಪಣಿ ಗುಂಡಿನ ಚಿತ್ರೀಕರಣ ಮಾಡುತ್ತಿದ್ದಾಗ, ಗುಂಪಿನ ಉಳಿದವರ ಸಮೀಪವಿರುವ ತಗ್ಗು ಕಲ್ಲಿನ ಗೋಡೆಯ ಮೇಲೆ ಕುಳಿತುಕೊಂಡಿದ್ದ ಅಬ್ದುಲ್ಲಾಗೆ ತಾಗಿದೆ ಎಂದು ನಾಝೆ ಹೇಳಿದರು.
ಕೆಲವು ಸೆಕೆಂಡುಗಳ ನಂತರ, ಮತ್ತೊಂದು ಕ್ಷಿಪಣಿಯು ಗುಂಪು ಬಳಸುತ್ತಿದ್ದ ಕಾರಿಗೆ ಬಡಿದು ಬೆಂಕಿ ಹೊತ್ತಿಕೊಂಡಿತು. ಎಪಿ ಮತ್ತು ಅಲ್ ಜಜೀರಾ ಸುದ್ದಿಸಂಸ್ಥೆ ಶೆಲ್‌ಗಳು ಇಸ್ರೇಲಿ ಎಂದು ಹೇಳಿಕೊಂಡರೆ, ಕ್ಷಿಪಣಿಗಳನ್ನು ಇಸ್ರೇಲ್ ನಿಜವಾಗಿಯೂ ಹಾರಿಸಿದೆಯೇ ಎಂದು ಸ್ಥಾಪಿಸಲು ಸಾಧ್ಯವಿಲ್ಲ ಎಂದು ರಾಯಿಟರ್ಸ್ ಹೇಳಿದೆ.
ಎಎಫ್‌ಪಿ ತನ್ನ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಆದರೆ ಸಂಸ್ಥೆ ಅವರ ಹೆಸರನ್ನು ಬಹಿರಂಗಪಡಿಸಲಿಲ್ಲ. ಅಲ್ ಜಜೀರಾ ತನ್ನ ಇಬ್ಬರು ಪತ್ರಕರ್ತರಾದ ಎಲೀ ಬ್ರಾಖ್ಯಾ ಮತ್ತು ವರದಿಗಾರ ಕಾರ್ಮೆನ್ ಜೌಖಾದರ್ ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಪತ್ರಕರ್ತರು ಎಂದು ಸಲಭವಾಗಿ ಗುರುತಿಸಬಹುದಾಗಿದೆ ಎಂದು ಹೇಳಿದೆ. ಘಟನೆಗೆ ಇಸ್ರೇಲ್ ಅನ್ನು ದೂಷಿಸಿದ ಸುದ್ದಿಸಂಸ್ಥೆ, ಈ ಅಪರಾಧದ ಕೃತ್ಯಕ್ಕೆ ಎಲ್ಲರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದೆ.