Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಷ್ಟ್ರೀಯ

ಪಂಜಾಬ್​ಗಾಗಿ ಹಮಾಸ್ ರೀತಿಯಲ್ಲೇ ದಾಳಿ ಮಾಡುತ್ತೇವೆ: ಖಲಿಸ್ತಾನಿ ಉಗ್ರ ಪನ್ನು ಬೆದರಿಕೆ

editor tv by editor tv
October 11, 2023
in ರಾಷ್ಟ್ರೀಯ
0
ಪಂಜಾಬ್​ಗಾಗಿ ಹಮಾಸ್ ರೀತಿಯಲ್ಲೇ ದಾಳಿ ಮಾಡುತ್ತೇವೆ: ಖಲಿಸ್ತಾನಿ ಉಗ್ರ ಪನ್ನು ಬೆದರಿಕೆ
1.9k
VIEWS
Share on FacebookShare on TwitterShare on Whatsapp

ಪಂಜಾಬ್​ಗಾಗಿ ಹಮಾಸ್ ರೀತಿಯಲ್ಲೇ ದಾಳಿ ನಡೆಸುತ್ತೇವೆ ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಭಾರತಕ್ಕೆ ಬೆದರಿಕೆ ಹಾಕಿದ್ದಾನೆ . ಇಸ್ರೇಲ್​-ಪ್ಯಾಲೆಸ್ತೀನ್ ಸಂಘರ್ಷದಿಂದಾರೂ ಬುದ್ಧಿ ಕಲಿತುಕೊಳ್ಳಿ, ಹಮಾಸ್ ಮಾದರಿಯಲ್ಲೇ ನಾವು ದಾಳಿ ನಡೆಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಚ್ಚರಿಕೆ ನೀಡಿದ್ದಾನೆ. ಇಸ್ರೇಲ್​ನಲ್ಲಿ ಹಮಾಸ್ ದಾಳಿಯಿಂದ ಪಾಠ ಕಲುಯುವಂತೆ ಪನ್ನು ಭಾರತ ಸರ್ಕಾರ ಹಾಗೂ ಪಂಜಾಬ್ ಸಿಎಂ ಮಾನ್​ಗೆ ಹೇಳಿದ್ದಾನೆ.

ಖಲಿಸ್ತಾನಿ ಉಗ್ರ ಪನ್ನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ ಬೆದರಿಕೆ ಹಾಕಿದ್ದಾನೆ.ಇದು 40 ಸೆಕೆಂಡುಗಳ ವಿಡಿಯೋವಾಗಿದ್ದು, ಪನ್ನು ಭಾರತದ ವಿರುದ್ಧ ವಿಷ ಉಗುಳಿದ್ದಾನೆ. ನಾವು ಪಂಜಾಬ್​ನ್ನು ಭಾರತದ ಭಾಗವೆಂದು ಪರಿಗಣಿಸುವುದಿಲ್ಲ ಅದನ್ನು ಭಾರತದಿಂದ ಮುಕ್ತಗೊಳಿಸಲು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತೇವೆ ಎಂದಿದ್ದಾನೆ.

ಪಂಜಾಬ್​ನಲ್ಲಿ ವಾಸಿಸುವ ಜನರು ಪ್ಯಾಲೆಸ್ತೀನ್​ನಂತೆ ಹಿಂಸಾಚಾರವನ್ನು ಪ್ರಾರಂಭಿಸಿದರೆ ಪರಿಸ್ಥಿತಿ ವಿನಾಶಕಾರಿಯಾಗುತ್ತದೆ ಎಂದು ಹೇಳಿದ್ದಾನೆ. ಕೆಲ ದಿನಗಳ ಹಿಂದೆ ವಿಶ್ವಕಪ್ ಕ್ರಿಕೆಟ್ ವೇಳೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಖಲಿಸ್ತಾನಿ ಧ್ವಜವನ್ನು ಹಾರಿಸುವುದಾಗಿ ಬೆದರಿಕೆ ಹಾಕಿದ್ದ.

ವಿಡಿಯೋದಲ್ಲಿ ಇದು ಕ್ರಿಕೆಟ್ ವಿಶ್ವಕಪ್ ಅಲ್ಲ, ಭಯೋತ್ಪಾದನಾ ವಿಶ್ವಕಪ್ ಎಂದು ಹೇಳಿದ್ದ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು, ಕ್ರೀಡಾಂಗಣದಲ್ಲಿ ಖಲಿಸ್ತಾನದ ಧ್ವಜ ಮಾತ್ರ ಕಾಣಿಸುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದ.

ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯ ಅಧಿಕಾರಿಗಳು ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಆಸ್ತಿಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿತ್ತು ಆತ ನಿಷೇಧಿತ ಸಂಘಟನೆಯ ಸಿಖ್ ಫಾರ್ ಜಸ್ಟಿಸ್​ನ ಮುಖಂಡ. ಚಂಡೀಗಢ ಮತ್ತು ಅಮೃತಸರದಲ್ಲಿರುವ ಆತನ ಆಸ್ತಿಯನ್ನು ಎನ್‌ಐಎ ವಶಪಡಿಸಿಕೊಂಡಿದೆ. ಪನ್ನು ಅಮೃತಸರ ನಿವಾಸಿಯಾಗಿದ್ದು, ಆತನ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಎನ್​ಐಎ ಘೋಷಿಸಿದೆ. ಕೆನಡಾದಲ್ಲಿ ಪನ್ನು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಭಾರತದಲ್ಲಿ ಪನ್ನು ವಿರುದ್ಧ ದೇಶವಿರೋಧಿ ಪಿತೂರಿ

ಸೇರಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿದ್ದು, ಅದರ ವಿವರಗಳನ್ನು ನೀಡಲಾಗಿದೆ. ಪನ್ನುನ ಅಪರಾಧಗಳ ಬಗ್ಗೆ ಕೆನಡಾಕ್ಕೆ ಹಲವಾರು ಬಾರಿ ತಿಳಿಸಲಾಗಿದೆ. ಆದರೆ ಕೆನಡಾ ಭಯೋತ್ಪಾದಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

Watch: 🇨🇦 Khalistani Terrorist Gurpatwant Pannun again threatens India.

“He says India will also face attacks from Punjab just like Hamas Terrorists attacked Israel.”

I hope he also knows the status of Hamas Terrorists after killing hundreds of Israelis.

Join my channels to… pic.twitter.com/DosY6AZaOt

— NobleInsights (@NobleInsightss) October 10, 2023

ಚಂಡೀಗಢದಲ್ಲಿ, ಖಾಲಿಸ್ತಾನಿ ಗುರುಪತ್ವಂತ್ ಪನ್ನು ಅವರ ಸೆಕ್ಟರ್ 15 ರ ಮನೆಯನ್ನು ಎನ್ಐಎ ವಶಪಡಿಸಿಕೊಂಡಿದೆ. ಸುಮಾರು ಅರ್ಧ ಗಂಟೆ ಕಾಲ ಎನ್‌ಐಎ ತಂಡ ಇಲ್ಲಿ ಹಾಜರಿದ್ದು, ಮನೆಯ ಹೊರಗೆ ಸೂಚನಾ ಫಲಕ ಹಾಕಿತ್ತು. ಅದೇ ರೀತಿ ಅಮೃತಸರದ ಖಾನ್ಕೋಟ್ ಗ್ರಾಮದಲ್ಲಿ ಪನ್ನುವಿನ 46 ಕನಾಲ್ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ.

Previous Post

ಇಸ್ರೇಲ್‌ನಲ್ಲಿರುವ ಕರಾವಳಿಗರ ರಕ್ಷಣೆಗೆ ವಿದೇಶಾಂಗ ಸಚಿವರಿಗೆ ಪತ್ರ: ನಳಿನ್ ಕುಮಾರ್ ಕಟೀಲ್

Next Post

ಡಿ.ಕೆ ಶಿವಕುಮಾರ್ ಕಾಲಿಗೆ ಬಿದ್ದ ಬಿಜೆಪಿ ಶಾಸಕ ಮುನಿರತ್ನ; ಹಂಗಾಮದ ವಿಡಿಯೋ ಇಲ್ಲಿದೆ ನೋಡಿ

Next Post
ಡಿ.ಕೆ ಶಿವಕುಮಾರ್ ಕಾಲಿಗೆ ಬಿದ್ದ ಬಿಜೆಪಿ ಶಾಸಕ ಮುನಿರತ್ನ; ಹಂಗಾಮದ ವಿಡಿಯೋ ಇಲ್ಲಿದೆ ನೋಡಿ

ಡಿ.ಕೆ ಶಿವಕುಮಾರ್ ಕಾಲಿಗೆ ಬಿದ್ದ ಬಿಜೆಪಿ ಶಾಸಕ ಮುನಿರತ್ನ; ಹಂಗಾಮದ ವಿಡಿಯೋ ಇಲ್ಲಿದೆ ನೋಡಿ

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.