
ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು ರೇಸ್ನಲ್ಲಿ ನಾನೂ ಒಬ್ಬನಿದ್ದೇನೆ ಎಂದು ಮೈಸೂರಿನಲ್ಲಿ ಹೇಳಿದ್ದಾರೆ.
ಮೈಸೂರಿನ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೇ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್ನಿಂದ ಗೆಲುವು ಪಡೆದಿದ್ದು ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ವಿಜಯ ಸಾಧಿಸಿದ್ದೇನೆ. ಆದರೆ ಬಿಜೆಪಿಗೆ ಬಂದಾಗ 4 ಬಾರಿ ಸೋಲು ಕಂಡೆ. ನಾನು ಮುಂದೆ ಏನಾಗಿ ಬಿಡುತೇನೆ ಅನ್ನೋ ಭಯದಲ್ಲಿ ಹಿತಶಕ್ತಿಗಳು ಸೋಲಿಸಿದವು ಎಂದು ವರುಣಾ, ಚಾಮರಾಜನಗರ ಸೋಲಿನ ಬಗ್ಗೆ ಪರೋಕ್ಷವಾಗಿ ವಿ.ಸೋಮಣ್ಣ ಬೇಸರ ಹೊರ ಹಾಕಿದರು.

ಅಲ್ಲಿಂದ ಬಂದಾಗ ಏನೆಲ್ಲ ಆಯಿತು ಎಂದು ಎಲ್ಲ ಹೇಳಿದ್ದೇನೆ. ಬಿಜೆಪಿಗೆ ಬಂದ ಮೇಲೆ 4 ಬಾರಿ ಸೋತಿದ್ದೇನೆ. ಕೆಲ ಹಿತಶಕ್ತಿಯಿಂದ ಸೋತಿದ್ದೇನೆ. ಅಸಮಾಧಾನ ಏನಿಲ್ಲ, ಎಲ್ಲವೂ ಸರಿ ಹೋಗುತ್ತೆ. ಈ ಸೋಲಿಗೆ ಕಾರಣ ಏನೆಂಬುದು ಗೊತ್ತಿದೆ. ಅವರಿಗೆ ದೇವರು ಶಿಕ್ಷೆ ಕೊಡುತ್ತಾನೆ ಎಂದು ಹೇಳಿದರು.
