
ಇಸ್ರೇಲ್-ಪ್ಯಾಲೆಸ್ತೈನ್ ನಡುವಿನ ಯುದ್ಧ ಎರಡನೇ ದಿನವೂ ಮುಂದುವರಿದಿದೆ. ತನ್ನ ನೆಲಕ್ಕೆ ನುಗ್ಗಿದ ಹರಿಸ್ತಿರೋ ಹಮಾಸ್ಗೆ ಇಸ್ರೇಲ್ ಕೂಡ, ಕ್ಷಿಪಣಿಗಳ ಮೂಲಕ ತಿರುಗೇಟು ಕೊಟ್ಟಿದೆ. ಎತ್ತ ಕಡೆಯಿಂದ ರಾಕೆಟ್ ನುಗ್ಗುತ್ತೋ, ಎಲ್ಲಿ ದಿಢೀರನೆ ಕಟ್ಟಡ ಧ್ವಂಸವಾಗುತ್ತೋ ಗೊತ್ತಿಲ್ಲ. ಯುದ್ಧಭೂಮಿಯಲ್ಲಿ ಜನರು ಜೀವ ಕೈಯಲ್ಲಿಡಿದು ಬದುಕುತ್ತಿದ್ದಾರೆ. ಕ್ಷಣ,ಕ್ಷಣಕ್ಕೂ ಕಿವಿಗಚ್ಚುವಂತೆ ಕೇಳಿಸ್ತಿರೋ ರಾಕೆಟ್, ಕ್ಷಿಪಣಿ, ಬಾಂಬ್ ಸದ್ದಿಗೆ ಬೆಚ್ಚಿಬೀಳ್ತಿದ್ದಾರೆ.

ಯುದ್ಧಭೂಮಿಯ ಚಿತ್ರಣ ಕ್ಷಣಕ್ಷಣಕ್ಕೂ ಬದಲಾಗ್ತಾನೆ ಇದೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ಅಟ್ಯಾಕ್- ಕೌಂಟರ್ ಅಟ್ಯಾಕ್ ತೀವ್ರಗೊಳ್ತಿದ್ದು, ಜನರ ಚೀರಾಟ, ಆರ್ತನಾದ ಜೋರಾಗೇ ಕೇಳಿಸುತ್ತಿದೆ. ಏಟಿಗೆ ಎದುರೇಟು, ರಕ್ತಕ್ಕೆ ರಕ್ತ ಅಂತ ಇಸ್ರೇಲ್ ಹಾಗೂ ಹಮಾಸ್ ಕೌಂಟರ್ ಅಟ್ಯಾಕ್ ಕೊಡ್ತಿವೆ. ದೊಡ್ಡ ದೊಡ್ಡ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿ ಉಡೀಸ್ ಮಾಡಲಾಗ್ತಿದೆ.

ಕ್ಷಣಕ್ಕೊಂದು ಬಾಂಬ್, ಮಿಸೈಲ್ ಮೂಲಕ ದಾಳಿ ನಡೆಸಲಾಗ್ತಿದೆ. ಪ್ಯಾಲೆಸ್ತೈನ್ನ ಗಾಜಾ ಪಟ್ಟಿಯಿಂದ ಚಿಮ್ಮಿದ ಕ್ಷಿಪಣಿಗಳು ಇಸ್ರೇಲ್ ದೇಶವನ್ನ ಛಿದ್ರ ಛಿದ್ರ ಮಾಡಿದೆ. ಹಮಾಸ್ನಲ್ಲಿ ಇಸ್ರೇಲ್ ಕ್ಷಿಪಣಿಗಳು ಘರ್ಜಿಸಿವೆ. ಏರ್ಸ್ಟ್ರೈಕ್, ರಾಕೆಟ್ ಮೂಲಕ ಇಸ್ರೇಲ್ ಕೂಡ ಹಮಾಸ್ ಅಡಗುದಾಣಗಳು, ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಕಟ್ಟಡಗಳನ್ನ ಟಾರ್ಗೆಟ್ ಮಾಡಿ ಧ್ವಂಸ ಮಾಡಿದೆ.

ಗಾಜಾ ಪಟ್ಟಿಯಿಂದ ಹಮಾಸ್ ನಿನ್ನೆ ಮೋಟಾರ್ ಪ್ಯಾರಾ ಗ್ಲೈಡರ್ ಮೂಲಕ ಇಸ್ರೇಲ್ಗೆ ಎಂಟ್ರಿ ಕೊಟ್ಟಿದ್ದರು. ಇಂದು ಪ್ಯಾರಾಚೂಟ್ ಮೂಲಕ ಇಸ್ರೇಲ್ಗೆ ಹಮಾಸ್ ದಾಳಿ ಮಾಡುತ್ತಿದೆ . ಕ್ಷಣ ಕ್ಷಣಕ್ಕೂ ಇಸ್ರೇಲ್ನಲ್ಲಿ ಭಾರೀ ಪ್ರಮಾಣದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗಿದೆ. ಇಸ್ರೇಲ್- ಪ್ಯಾಲೆಸ್ತೈನ್ ನಡುವಿನ ಯುದ್ಧದಲ್ಲಿ 900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ದೇಶದಲ್ಲಿ 500 ಮಂದಿ ಸಾವು, ಪ್ಯಾಲೆಸ್ತೈನ್, ಗಾಜಾ ಪಟ್ಟಿಯಲ್ಲಿ 400 ಮಂದಿ ಪ್ರಾಣ ಬಿಟ್ಟಿದ್ದಾರೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಭದ್ರತಾ ಪಡೆ ಭಾರೀ ಏರ್ ಸ್ಟ್ರೈಕ್ ನಡೆಸಿದ್ದು, ಇದುವರೆಗೆ 400 ಮಂದಿ ಪಾಲೇಸ್ತಿನ್ ಜನರ ಹತ್ಯೆ ಮಾಡಿದೆ ಎನ್ನಲಾಗಿದೆ.

https://twitter.com/Ieshan_W/status/1710679567344734425?ref_src=twsrc%5Etfw%7Ctwcamp%5Etweetembed%7Ctwterm%5E1710679567344734425%7Ctwgr%5E5494a3e58f262ee50e29426e54b1da1b7057db4b%7Ctwcon%5Es1_c10&ref_url=https%3A%2F%2Fwww.varthabharati.in%2Ftrending%2Fmoment-when-building-behind-tv-reporter-gets-bombed-in-live-show-from-gaza-1967157
ಅಲ್ಜಝೀರಾ ವರದಿಗಾರ್ತಿ ಲೈವ್ ವರದಿ ಮಾಡುತ್ತಿರುವಾಗಲೇ ಬಾಂಬ್ ದಾಳಿ: ವಿಡಿಯೋ ವೈರಲ್