
Nathuram Godse : ‘ಚರ್ಚಿಲ್ ಎಷ್ಟು ಮಂದಿಯ ಸಾವಿಗೆ ಕಾರಣನಾದ ಗೊತ್ತೇ?’, ‘ಗಾಂಧಿಯೂ ಎಲ್ಲರಂತೆ ಕೊರತೆಗಳುಳ್ಳ ಸಾಧಾರಣ ಮನುಷ್ಯ. ಗೋಡ್ಸೆಗೆ ಅವನ ತತ್ವಗಳು ಒಪ್ಪಿಗೆಯಾಗಿರಲಿಕ್ಕಿಲ್ಲ’ ಎಂಬ ಸಮಜಾಯಿಷಿಗಳೂ ಈ ಫೋಟೋದಡಿ ಇವೆ. ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ತುತ್ತೂರಿಯನ್ನೂ ಕೆಲವರು ಊದಿದ್ದಾರೆ. ಈ ಫೋಟೋ ನೋಡಿದ ನಿಮ್ಮ ಮನಸ್ಸಿನಲ್ಲಿ ಏನು ಓಡುತ್ತಿದೆ?

Ashraf Kammaje |
Updated on: Oct 06, 2023 | 5:12 PM
Hyderabad : ಈ ಆಟೋರಿಕ್ಷಾ ನೋಡಿದರೆ ನಿಮಗೇನೆನ್ನಿಸುತ್ತದೆ? ಇತರರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಂತೆ ಈ ಆಟೋ ಡ್ರೈವರ್ (Auto Driver) ಕೂಡ ಇಲ್ಲಿ ನಿಂತಿದ್ದಾನೆ. ಸಿಗ್ನಲ್ನ ಹಸಿರು ದೀಪಕ್ಕಾಗಿ ಕಾಯುತ್ತಿದ್ದಾನೆ. ಇದರಲ್ಲೇನು ವಿಶೇಷ ಎನ್ನಿಸುತ್ತದಲ್ಲವೇ? ರೆಡ್ಡಿಟ್ ಜಾಲತಾಣದಲ್ಲಿ ಈ ಫೋಟೋ ಪೋಸ್ಟ್ ಮಾಡಿರುವವರೊಬ್ಬರು ಜೊತೆಗೆ, ‘ಇದನ್ನು ನಾನಿಂದು ಹೈದರಾಬಾದ್‌ನಲ್ಲಿ ನೋಡಿ ಆಘಾತಗೊಂಡೆ. ಒಬ್ಬ ಕೊಲೆಗಡುಕನ ವೈಭವೀಕರಣ ಇದು’ ಎಂಬ ಒಕ್ಕಣೆ ಹಾಕಿದ್ದಾರೆ. ಆಟೋವನ್ನು ಗಮನವಿಟ್ಟು, ಬೇಕಿದ್ದಲ್ಲಿ ಝೂಮ್ ಮಾಡಿ ನೋಡಿದಾಗ ವಿಷಯ ಏನೆಂದು ತಿಳಿಯುತ್ತದೆ. ಆಟೋದ ಮೇಲೆ ಇರುವ ಫೋಟೋ ಗಾಂಧಿ ಹಂತಕ, ದೇಶದ ಮೊದಲ ಭಯೋತ್ಪದಕ ನಾಥೂರಾಮ್ ಗೋಡ್ಸೆಯದು (Nathuram ಘೋಡ್ಸೆ

ಇದೇನೂ ಅಲ್ಲ, ‘ಹಿಟ್ಲರ್ ಬಟ್ಟೆ ಅಂಗಡಿ’ ಇರುವುದು ಗೊತ್ತಾ?’, ”ನಾನು ಪಂಜಾಬ್‌ನ ವಾಸಿ. ಇಲ್ಲಿ ಕಾರು, ಬಸ್ಸುಗಳ ಮೇಲೆ, ಕೆಲವು ಕಚೇರಿಗಳಲ್ಲೂ ಭಿಂದ್ರನ್‌ವಾಲೇಯ ಫೋಟೋಗಳಿವೆ.”, ಗಾಂಧಿ ಹಂತಕ ಭಯೋತ್ಪದಕನನ್ನು ‘ಉಗ್ರವಾಗಿಗಳನ್ನ, ವೈಭವೀಕರಿಸುವ ಸಂಸ್ಕೃತಿಯೇ ನಮ್ಮಲ್ಲಿದೆ’ ಅಂತೆಲ್ಲ ಷರಾ ಬರೆದಿದ್ದಾರೆ ಕೆಲವರು. ಈ ಪೋಸ್ಟ್‌ಗೆ ಅನೇಕ ಪರ ವಿರೋಧ ಹೇಳಿಕೆಗಳು ಬಂದು ವರ್ತಮಾನದ ಧ್ರುವೀಕರಣಕ್ಕೆ ಇದೊಂದು ನಿದರ್ಶನವಾಗಿದೆ. ‘ಅವನು ಕೊಲೆಗಡುಕನಲ್ಲವೇ?’ ಎಂದೊಬ್ಬರು ಪ್ರಶ್ನೆ ಹಾಕಿದ್ದಾರೆ. ಮಂದಿಗೆ ನಿಜಕ್ಕೂ ಮರುಳೋ, ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೋ ಎನ್ನಿಸಬೇಕು.ನಾಥೂರಾಮ ಗೋಡ್ಸೆ;’ಅವನು ಕೊಲೆಗಡುಕನೇ ಆಗಿರಲಿ, ಹಿಂದೂವಾಗಿದ್ದಲ್ಲಿ ಎಲ್ಲಾ ಕ್ಷಮ್ಯ, ಹೊಸ ಭಾರತಕ್ಕೆ ಸ್ವಾಗತ’. ಎಂದೋಬ್ಬರು ಬಹಳ ಸತ್ಯವಾದ ಕಾಮೆಂಟ್ ಹಾಕಿದ್ದಾರೆ.

ಚರ್ಚಿಲ್ ಎಷ್ಟು ಮಂದಿಯ ಸಾವಿಗೆ ಕಾರಣನಾದ ಗೊತ್ತೇ?’, ‘ಗಾಂಧಿಯೂ ಎಲ್ಲರಂತೆ ಕೊರತೆಗಳುಳ್ಳ ಸಾಧಾರಣ ಮನುಷ್ಯ. ಗೋಡ್ಸೆಗೆ ಅವನ ತತ್ವಗಳು ಒಪ್ಪಿಗೆಯಾಗಿರಲಿಕ್ಕಿಲ್ಲ’ ಎಂಬ ಸಮಜಾಯಿಷಿಗಳೂ ಇವೆ. ತಲೆಯುಳ್ಳ ಶಾಂತಮನಸಿರಲ್ಲಿ ಕೆಲವರು, ‘ಸೈದ್ಧಾಂತಿಕ ವಿರೋಧ ಬೇರೆ ಅದಕ್ಕಾಗಿ ಹತ್ಯೆ ಮಾಡುವುದು ಬೇರೆ. ದ್ವೇಷ ಎನ್ನುವುದು ಒಂದು ಸಿದ್ಧಾಂತವಲ್ಲ’ ಎಂದು ಚರ್ಚೆಯನ್ನು ದಾರಿಗೆ ತರಲು ಯತ್ನಿಸುವುದನ್ನು ನೋಡಬಹುದು. ಆದರೆ ಒಟ್ಟಾರೆ ಅಲ್ಲಿ ಸೂಕ್ಷ್ಮತೆ ಎನ್ನುವುದು ಕಳೆದುಹೋಗಿ ವಿತಂಡವಾದಗಳೇ ಏರ್ಪಟ್ಟಿವೆ.
