ಇದು ಬೆಂಗಳೂರು ಕಂಡು ಕೇಳರಿಯದಂತ ದೋಖಾ ಕಹಾನಿ. ಬಿಎಂಟಿಸಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯೇ ಇಲಾಖೆಗೆ ಕೋಟಿ ಕೋಟಿ ರೂಪಾಯಿ ಕನ್ನ ಹಾಕಿದ್ದಾನೆ. ಈತ ವಂಚಿಸಿ ಕಲರ್ ಕಲರ್ ಕಾಗೆ ಹಾರಿಸಿದ್ದ ರೀತಿಯೇ ಇಂಟ್ರೆಸ್ಟಿಂಗ್.
ಬಿಎಂಟಿಸಿಯಲ್ಲಿ ನಕಲಿ ಸಹಿ ಅವ್ಯವಹಾರ ಸದ್ದು ಮಾಡಿದೆ. ಶಾಂತಿನಗರದ ಬಿಎಂಟಿಸಿ ಆಡಳಿತ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಹಿ ಫೋರ್ಜರಿ ಮಾಡಿರೋ ಆರೋಪ ಕೇಳಿಬಂದಿದೆ. ಇಲ್ಲಿ ವಂಚಿಸಿರೋದು ಬರೋಬ್ಬರಿ 16 ಕೋಟಿ. ಅಷ್ಟೊಂದು ಹಣ ವಂಚಿಸಿದ್ಹೇಗೆ? ಯಾರ ಗಮನಕ್ಕೂ ಬರದಿದ್ದು ಹೇಗೆ? ಅದೇ ಇಂಟ್ರೆಸ್ಟಿಂಗ್ ಇಲ್ಲಿ.
ಕಲರ್ ಕಲರ್’ ಕನ್ನ!
2020-2023ರ ಅವಧಿಯಲ್ಲಿ ನಡೆದ ಅವ್ಯವಹಾರ
ಬಿಎಂಟಿಸಿ ಪ್ರಧಾನ ಕಚೇರಿಯಲ್ಲೇ ಅವ್ಯವಹಾರ
6 ಅಧಿಕಾರಿಗಳಿಂದ ಕೋಟಿ-ಕೋಟಿ ದೋಖಾ
ಬಿಎಂಟಿಸಿ ಭದ್ರತೆ – ಜಾಗೃತದಳ ನಿರ್ದೇಶಕ ಅರುಣ್
ಮ್ಯಾನೇಜಿಂಗ್ ಡೈರೆಕ್ಟರ್ ಶಿಖಾ ಹೆಸರಿನಲ್ಲಿ ನಕಲಿ ಸಹಿ
ಸಹಿ ಇದ್ದ ಕಡತವನ್ನ ಕಲರ್ ಜೆರಾಕ್ಸ್ ಮಾಡಿ ವಂಚನೆ
ನಕಲಿ ಸಹಿ ಮಾಡಿ ಸುಮಾರು 16 ಕೋಟಿ ರೂ. ವಂಚನೆ
ವಂಚನೆ ಆರೋಪಿಸಿ ವಿಚಕ್ಷಣಾ ದಳದಿಂದ ದೂರು
ಪ್ರಕರಣ ದಾಖಲು ಓರ್ವ ಆರೋಪಿಯ ಬಂಧನ
ಮೇಲಾಧಿಕಾರಿಗಳ ಸಹಿಯನ್ನು ನಕಲು ಮಾಡಿ, 13 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ನಷ್ಟವುಂಟು ಮಾಡಿದ್ದಾರೆ. ಈ ಬಗ್ಗೆ ತನಿಖೆ ಮುಂದುವರೆಸಿದ್ದೇವೆ.
ಶೇಖರ್ ಹೆಚ್.ಟಿ, ಡಿಸಿಪಿ ಕೇಂದ್ರ ವಿಭಾಗ
ಡಿಸಿಪಿಯವರು ಹೇಳಿದಂತೆ ಪ್ರಕರಣದ ಬಿಎಂಟಿಸಿಯ ಅಂದಿನ ಸಂಚಾರ ಮುಖ್ಯ ವ್ಯವಸ್ಥಾಪಕರಾಗಿದ್ದ ಶ್ರೀರಾಮ್ ಮುಲ್ಕವಾನ್ನನ್ನ ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇತರೆ 6 ಮಂದಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.