
ಇಂಡಿಯನ್ ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಅವರು ಏಷ್ಯಾನ್ ಗೇಮ್ಸ್ನಲ್ಲಿ ಮತ್ತೆ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಜಾವೆಲಿನ್ ಥ್ರೋನ ಫೈನಲ್ ಪಂದ್ಯದಲ್ಲಿ 88.88 ಮೀಟರ್ ದೂರ ಭರ್ಚಿ ಎಸೆಯುವ ಮೂಲಕ ನೀರಜ್ ಚೋಪ್ರಾ 2ನೇ ಬಾರಿ ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು.
ಫೈನಲ್ ಪಂದ್ಯದಲ್ಲಿ ಭಾರತೀಯ ಸ್ಪರ್ಧಿಯಾದ ಕಿಶೋರ್ ಜೆನಾ ಅವರನ್ನು ಸೋಲಿಸುವ ಮೂಲಕ ನೀರಜ್ ಚೋಪ್ರಾ ಗೋಲ್ಡ್ ಮೆಡೆಲ್ಗೆ ಮುತ್ತಿಕ್ಕಿದರು. ಕಿಶೋರ್ ಜೆನಾ ಬೆಳ್ಳಿ ಪದಕಕ್ಕೆ ಕೊರೊಳೊಡ್ಡುವ ಮೂಲಕ ಬಂಗಾರ, ಬೆಳ್ಳಿ ಪದಕ ಎರಡು ಭಾರತದ ಪಾಲಾದವು. ಫೈನಲ್ನಲ್ಲಿ ನೀರಜ್ ಚೋಪ್ರಾಗೆ ಭಾರೀ ಪೈಪೋಟಿ ನೀಡಿದ ಕಿಶೋರ್ ಜೆನಾ ತಮ್ಮ ವೈಯಕ್ತಿಕ ಭರ್ಚಿ ಎಸೆತವನ್ನು 86.77 ಮೀಟರ್ ದೂರ ಎಸೆದರು. ಬಳಿಕ ನೀರಜ್ ಬಲವಾಗಿ 88.88 ಮೀಟರ್ ದೂರ ಭರ್ಚಿ ಎಸೆದು ದಾಖಲೆ ನಿರ್ಮಿಸಿದರು.


ಇನ್ನು ಇಬ್ಬರು ಭಾರತೀಯರೇ ಫೈನಲ್ ಪಂದ್ಯಕ್ಕೆ ಎಂಟ್ರಿಕೊಟ್ಟಿದ್ದರಿಂದ ದೇಶಕ್ಕೆ ಗೋಲ್ಡ್ ಪಕ್ಕಾ ಎನ್ನುವುದು ಮೊದಲೇ ನಿರ್ಧಾರವಾಗಿತ್ತು. ಇನ್ನು ಪದಕ ಗೆದ್ದು ಸಂಭ್ರಮಿಸುವ ವೇಳೆ ಸ್ಟೇಡಿಯಂನಲ್ಲಿ ಫೋಟೋಗೆ ಪೋಸ್ ಕೊಡುತ್ತಿದ್ದರು. ಈ ವೇಳೆ ಅಭಿಮಾನಿ ಒಬ್ಬರು ಭಾರತದ ರಾಷ್ಟ್ರ ಧ್ವಜವನ್ನು ನೀರಜ್ ಚೋಪ್ರಾ ಕಡೆ ಎಸೆದರು. ಆಗ ಅದನ್ನು ನೆಲಕ್ಕೆ ಬೀಳದಂತೆ ಅಧ್ಭುತವಾಗಿ ಕ್ಯಾಚ್ ಹಿಡಿದರು. ಸದ್ಯ ಈ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
