
ಬೆಂಗಳೂರು: ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ಅಧಿಕಾರದಲ್ಲಿ ಇರದೇ ಇದ್ದಾಗ ಇಂತಹ ಕಿತಾಪತಿ ಮಾಡುವುದು ಅವರ ಹುಟ್ಟುಗುಣ. ರಕ್ತದಲ್ಲೇ ಬಂದು ಬಿಟ್ಟಿದೆ ಎಂದು ಖಾರವಾಗಿ ಹೇಳಿದ್ದಾರೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಬಿಜೆಪಿಯವರು ಅಧಿಕಾರದಲ್ಲಿ ಇರದೇ ಇದ್ದಾಗ ಇದೇ ಕಿತಾಪತಿ ಮಾಡುತ್ತಾರೆ. ಜಗಳ ತಂದಿಡುವುದು, ಕೋಮು ಘರ್ಷಣೆ ಮಾಡಿಸುವುದು, ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವುದು ಅವರ ಹುಟ್ಟುಗುಣ. ರಕ್ತದಲ್ಲೇ ಬಂದು ಬಿಟ್ಟಿದೆ ಎಂದಿದ್ದಾರೆ.

ಬಿಜೆಪಿಯವರು ಅಧಿಕಾರದಲ್ಲಿದಾಗ ಪೊಲೀಸ್ ನೈತಿಕಗಿರಿ. ಗಲಾಟೆ ಮಾಡುವುದು, ಹೊಡೆಯುವುದು ಆಡುತ್ತಾರೆ. ಬಿಜೆಪಿ ಕಾರ್ಯಕರ್ತರು ವೇಷ ಬದಲಿಸಿಕೊಂಡು, ಹೆಸರು ಬದಲಿಸಿಕೊಂಡು ಕಿಡಿಗೇಡಿತನ ಮಾಡುತ್ತಾರೆ. ಇದೆಲ್ಲ ಅವರ ಹುಟ್ಟುಗುಣ. ರಕ್ತದಲ್ಲೇ ಇದೆಲ್ಲ ಬಂದು ಬಿಟ್ಟಿದೆ ಎಂದು ಬೆಂಗಳೂರಿನಿಂದ ಮಂಗಳೂರಿಗೆ ತೆರಳುವ ಮುನ್ನ ಏರ್ಪೋರ್ಟ್ನಲ್ಲಿ ಹೇಳಿದ್ದಾರೆ
