
ಸೆಪ್ಟೆಂಬರ್ 28 ರಂದು ಕೊಪ್ಪಳದ ಗಂಗಾವತಿಯ ಹಿಂದೂ ಮಹಾ ಮಂಡಳಿ ವತಿಯಿಂದ ನಡೆಯುತ್ತಿದ್ದ ಗಣೇಶ ವಿಸರ್ಜನೆ ವೇಳೆಯಲ್ಲಿ ಯುವಕರು ಮಸೀದಿ ಎದುರು ಮಂಗಳಾರತಿ ಮಾಡಿ, ‘ಗವಿ ಗಂಗಾಧರೇಶ್ವರ ಮಹಾ ರಾಜಕೀ ಜೈ’ ಎಂದು ಘೋಷಣೆ ಕೂಗಿದ ವೀಡಿಯೋ ವೈರಲ್ ಆಗಿತ್ತು. ಇದು ಕೋಮು ಗಲಭೆಗೆ ಪ್ರಚೋದನೆ ನೀಡುತ್ತದೆ ಎನ್ನುವ ಕಾರಣಕ್ಕೆ ಸೆ.30 ರಂದು ಮಂಗಳಾರತಿ ಮಾಡಿದ 4 ಜನರ ಮೇಲೆ ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರರಕಣ ದಾಖಲಾಗಿತ್ತು. ಈ ಪ್ರರಕಣ ಇನ್ನೂ ಹಸಿ ಇರುವಾಗಲೇ ಮತ್ತೆ ಅದೇ ಮಸೀದಿಯ ಮುಂದೆ ಮಂಗಳವಾರ ರಾತ್ರಿ ವೇಳೆ ಕೂಡ ಗಣೇಶ ವಿಸರ್ಜನೆ ಮಾಡುವ ಮೆರವಣಿಗೆ ಮಾಡಿ ಮಂಗಳಾರತಿ ಮಾಡಲಾಗಿದೆ. ಇದರಿಂದ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
| Edited By: Ashraf Kammaje
Updated on:Oct 04, 2023 | 3:19 PM

ಕೊಪ್ಪಳ ಜಿಲ್ಲೆಯ ಗಂಗಾವತಿ (Gangavati) ನಗರದ ಗಾಂಧಿ ಸರ್ಕಲ್ ಸಮೀಪ ಇರುವ ದೊಡ್ಡ ಜಾಮಿಯಾ ಮಸೀದಿ (Masjid) ಮುಂದೆ ಗಣೇಶ ವಿಸರ್ಜನೆ ಮಾಡುವ ಮೆರವಣಿಗೆ ವೇಳೆ ಮಸೀದಿ ಮುಂದೆ ಪೂಜೆ ಮಾಡಿದ್ದು, ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಸೆಪ್ಟೆಂಬರ್ 28 ರಂದು ಕೊಪ್ಪಳದ ಗಂಗಾವತಿಯ ಹಿಂದೂ ಮಹಾ ಮಂಡಳಿ ವತಿಯಿಂದ ನಡೆಯುತ್ತಿದ್ದ ಗಣೇಶ ವಿಸರ್ಜನೆ ವೇಳೆಯಲ್ಲಿ ಯುವಕರು ಮಸೀದಿ ಎದುರು ಮಂಗಳಾರತಿ ಮಾಡಿ, ‘ಗವಿ ಗಂಗಾಧರೇಶ್ವರ ಮಹಾ ರಾಜಕೀ ಜೈ’ ಎಂದು ಘೋಷಣೆ ಕೂಗಿದ ವೀಡಿಯೋ ವೈರಲ್ ಆಗಿತ್ತು. ಇದು ಕೋಮು ಗಲಭೆಗೆ ಪ್ರಚೋದನೆ ನೀಡುತ್ತದೆ ಎನ್ನುವ ಕಾರಣಕ್ಕೆ ಸೆ.30 ರಂದು ಮಂಗಳಾರತಿ ಮಾಡಿದ 4 ಜನರ ಮೇಲೆ ಪೊಲೀಸ್ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರರಕಣ ದಾಖಲಾಗಿತ್ತು.

ಈ ಪ್ರರಕಣ ಇನ್ನೂ ಹಸಿ ಇರುವಾಗಲೇ ಮತ್ತೆ ಅದೇ ಮಸೀದಿಯ ಮುಂದೆ ಮಂಗಳವಾರ ರಾತ್ರಿ ವೇಳೆ ಕೂಡ ಗಣೇಶ ವಿಸರ್ಜನೆ ಮಾಡುವ ಮೆರವಣಿಗೆ ಮಾಡಲಾಗಿದೆ. ಆದ್ರೆ, ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾ ತಂಡದವರು, ಯುವಕರು ಮಸೀದಿಯ ಮುಂದೆಯ ರಸ್ತೆಯಲ್ಲಿ ರಂಗೋಲಿ ಹಾಕಿ, ಬೆಂಕಿ ಹಚ್ಚಿ, ಕುಂಬಳಕಾಯಿ ಹೊಡೆಯಲು ಮುಂದಾಗಿದ್ದರು. ಅದಕ್ಕೆ ಕೋಪಗೊಂಡಿದ್ದ ಮುಸ್ಲಿಂ ಸಮಾಜದವರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಕೂಡಲೇ ಸ್ಥಳದಲ್ಲಿಯೇ ಇದ್ದ ಪೊಲೀಸರು ಅದನ್ನು ನಿಲ್ಲಿಸಿ, ರಂಗೋಲಿಗೆ ನೀರು ಹಾಕಿ ಮೆರವಣಿಗೆಯನ್ನು ಮುಂದೆ ಕಳುಹಿಸಿದ್ದಾರೆ. ಪದೇ ಪದೇ ಮಸೀದಿಯ ಮುಂದೆ ಉದ್ದೇಶಪೂರ್ವಕವಾಗಿ ಪೂಜೆ ಮಾಡುವುದು, ಮಂಗಳಾರತಿ ಮಾಡುವುದು ಮಾಡಲಾಗುತ್ತಿದೆ. ಇದು ಕೋಮು ಗಲಭೆಯನ್ನು ಸೃಷ್ಠಿ ಮಾಡುವ ಕೆಲಸವಾಗಿದೆ. ಕೂಡಲೇ ಅಂತಹ ಆರೋಪಿಗಳನ್ನು ಬಂಧನ ಮಾಡಬೇಕು. ಈ ರೀತಿಯಾಗಿ ನಡೆಯದಂತೆ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು ಎಂದು ನೂರಾರು ಜನ ಮುಸ್ಲಿಂ ಸಮಾಜದವರು ಸೇರಿಕೊಂಡು ಪಟ್ಟು ಹಿಡಿದರು.

ಸ್ಥಳಕ್ಕೆ ನಗರಠಾಣೆ ಪಿಎಸ್‌ಐ, ಡಿವೈಎಸ್ಪಿ ಅವರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮುಸ್ಲಿಂ ಸಮಾಜದವರು ಪಟ್ಟು ಬಿಡದೆ ಕೆಲ ಗಂಟೆಗಳವರೆಗೆ ಬಂಧನಕ್ಕೆ ಒತ್ತಾಯಿಸಿದ್ದಾರೆ. ನಂತರ ಮುಸ್ಲಿಂ ಸಮಾಜದ ಹಿರಿಯರ ಸಮ್ಮುಖದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಗಂಗಾವತಿ ನಗರದ ಗಾಂಧಿ ಸರ್ಕಲ್, ಮಸೀದಿ ಏರಿಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಸಮಯದಲ್ಲಿ ಕೂಡ ಎರಡು ಸಮುದಾಯಗಳ ನಡುವೆ ಗಲಾಟೆ ನಡೆಯಬಹುದು ಎನ್ನುವ ಕಾರಣಕ್ಕೆ ತಹಸಿಲ್ದಾರ್ ಮಂಜುನಾಥ ಬೋಗವಾತಿ, ಕಂದಾಯ ನಿರೀಕ್ಷಕರು ಹಾಗೂ ಪೊಲೀಸ್ ಇಲಾಖೆಯ ನಗರಠಾಣೆ ಪಿಎಸ್‌ಐ, ಗ್ರಾಮೀಣ ಠಾಣೆ ಪಿಎಸ್‌ಐ, ಡಿವೈಎಸ್ಪಿ ಸೇರಿದಂತೆ ಸಾಕಷ್ಟು ಜನರು ಪೊಲೀಸ್ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಬಿಡುಬಿಟ್ಟಿದ್ದಾರೆ.

ಮಸೀದಿ ಮುಂದೆ ಪೂಜೆ ವಿವಾದಕ್ಕೆ ಸಂಬಂಧಪಟ್ಟಂತೆ ಕೋಮುಗಲಭೆ ಉಂಟಾಗುವ ಪರಿಸ್ಥಿತಿ ಇರುವುದರಿಂದ ನಗರದಲ್ಲಿ ಇರುವ ಹಾಗೂ ಬಂದೋಬಸ್ತ್ ಕೈಗೊಳ್ಳಲಾಗಿದೆ.
