
ಮಂಗಳೂರು: ಕೇರಳ, ಬಿಹಾರ ಸಹಿತ ಹಲವೆಡೆ ಪಿಎಫ್‌ಐ ನಾಯಕರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿರುವುದನ್ನು ಖಂಡಿಸಿ ಮಂಗಳೂರಿನಲ್ಲಿ ಪಿಎಫ್‌ಐ ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಮಂಗಳೂರಿನ ಕ್ಲಾಕ್ ಟವರ್ ಬಳಿ ಜಮಾಯಿಸಿದ ಪಿಎಫ್‌ಐ ಕಾರ್ಯಕರ್ತರು ಸರಕಾರದ ಸೇಡಿನ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.



ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮೇಯರ್ ಅಶ್ರಫ್, ಬಿಜೆಪಿ ಸರಕಾರವು ಸ್ವತಂತ್ರ ಸಂಸ್ಥೆಗಳನ್ನು ಬಳಸಿ ತಮ್ನ ವಿರೋಧಿಗಳನ್ನು ದಮನಿಸುತ್ತದೆ. ಆದರೆ ಅದು ಪಿಎಫ್‌ಐ ಬಳಿ ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಎಕೆ ಅಶ್ರಫ್ ಮಾತನಾಡಿದರು.
ಯಾಸಿರ್ ಹಸನ್, ಇಜಾಝ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು.
