
ನ್ಯೂಸ್‌ಕ್ಲಿಕ್ ಸುದ್ದಿ ವೆಬ್‌ಸೈಟ್‌ಗೆ ಹಣ ನೀಡಿದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ ಬೆಳಿಗ್ಗೆ ಹಲವಾರು ಪತ್ರಕರ್ತರ ಮೇಲೆ ದಾಳಿ ನಡೆಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ದಾಳಿಗೊಳಗಾದವರಲ್ಲಿ ನ್ಯೂಸ್‌ಕ್ಲಿಕ್ ವೆಬ್‌ಸೈಟ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ, ಪತ್ರಕರ್ತರಾದ ಅಭಿಸರ್ ಶರ್ಮಾ, ಔನಿಂದ್ಯೋ ಚಕ್ರವರ್ತಿ ಮತ್ತು ಭಾಷಾ ಸಿಂಗ್ ಮತ್ತು ವಿಡಂಬನಕಾರ ಸಂಜಯ್ ರಾಜೌರಾ ಸೇರಿದ್ದಾರೆ.

ಈ ಬಗ್ಗೆ ಶರ್ಮಾ ಟ್ವೀಟ್ ಮಾಡಿದ್ದು, ”ಪೊಲೀಸರು ಅವರ ಫೋನ್ ಮತ್ತು ಲ್ಯಾಪ್‌ಟಾಪ್‌ನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.
ದೆಹಲಿಯಲ್ಲಿರುವ ನ್ಯೂಸ್‌ಕ್ಲಿಕ್‌ನ ಕಚೇರಿಯಲ್ಲೂ ಹುಡುಕಾಟ ನಡೆಯುತ್ತಿದೆ ಎಂದು ವರದಿಯಾಗಿದೆ. ANI ಪ್ರಕಾರ, ಒಟ್ಟಾರೆಯಾಗಿ, 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ.
ನ್ಯೂಸ್‌ಕ್ಲಿಕ್ ಅಮೆರಿಕದ ಮಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್‌ನ ಅವರ ಸುತ್ತ ಕೇಂದ್ರೀಕೃತವಾದ ನೆಟ್‌ವರ್ಕ್‌ನಿಂದ “ಚೀನೀ ಪ್ರಚಾರವನ್ನು” ಪ್ರಪಂಚದಾದ್ಯಂತ ಹರಡಲು ಹಣವನ್ನು ಪಡೆದಿದೆ ಆಗಸ್ಟ್ 5ರಂದು, ನ್ಯೂಯಾರ್ಕ್ ಟೈಮ್ಸ್ ವರದಿಯೊಂದನ್ನು ಪ್ರಕಟಿಸಿತ್ತು.

ಸಿಂಘಮ್ ಅವರು ”ಚೀನೀ ಸರ್ಕಾರಿ ಮಾಧ್ಯಮ ಸಂಸ್ಥೆ’ದೊಂದಿಗೆ ನಿಕಟವಾಗಿ ಕೆಲಸ ಮಾಡಿದರು ಮತ್ತು ವಿವಿಧ ದೇಶಗಳಲ್ಲಿ ಚೀನೀ ಪರವಾಗಿ ಪ್ರಚಾರ ಮಾಡಿದರು ಎಂದು ವರದಿ ಹೇಳಿದೆ.
ಆ ಸಮಯದಲ್ಲಿ, ನ್ಯೂಸ್‌ಕ್ಲಿಕ್ ವೆಬ್‌ಸೈಟ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರು ಚೀನಾದ ಕಮ್ಯುನಿಸ್ಟ್ ಪಕ್ಷದ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಯ ಕುರಿತಾದ ಆರೋಪಗಳು ಸುಳ್ಳು ಎಂದು ತಿಳಿಸಿದ್ದರು.
