
ಪೊಲೀಸ್ ಠಾಣೆ ಎದುರು ದಿವ್ಯಾಂಗ ಮಹಿಳೆಯೊಬ್ಬಳನ್ನು ಪೊಲೀಸರು ರಸ್ತೆಯಲ್ಲಿ ಧರ ಧರನೆ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಪೊಲೀಸರ ಈ ಕ್ರಮದ ವಿರುದ್ಧ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ. ಈ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸ್ ಹೇಳುವುದೇನು?: ಆಕೆಯ ಮಾನಸಿಕ ಸ್ಥಿತಿ ಸರಿ ಇರಲಿಲ್ಲ, ಆಕೆ ಹಾಗೂ ಆಕೆಯ ಗಂಡನ ಜತೆ ಜಗಳ ನಡೆದಿದೆ, ಈ ಹಿನ್ನೆಲೆಯಲ್ಲಿ ಪತಿಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಳು, ಆದರೆ ಅಲ್ಲಿ ಠಾಣೆಯ ಗೋಡೆಯನ್ನು ಹತ್ತಲು ಪ್ರಯತ್ನಿಸಿದ್ದಾಳೆ.

ಅಷ್ಟರಲ್ಲಿ ಗಮನಿಸಿದ ಇಬ್ಬರು ಮಹಿಳಾ ಪೊಲೀಸರು ಮಹಿಳೆಯ ಬಳಿ ಹೋಗಿದ್ದಾರೆ. ತಕ್ಷಣ ಆಕೆಯನ್ನು ಪೊಲೀಸ್ ಠಾಣೆಯ ಹೊರಗೆ ಕಳುಹಿಸಲಾಯಿತು, ಆಕೆ ಅಲ್ಲಿಯೇ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಶುರು ಮಾಡಿದ್ದಳು. ಆಗ ಮಹಿಳಾ ಪೇದೆಗಳು ಆಕೆಯ ಎರಡೂ ಕೈಗಳನ್ನು ಹಿಡಿದು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ

ಅಲ್ಲಿದ್ದ ಕೆಲವರು ಇದನ್ನು ರೆಕಾರ್ಡ್ ಮಾಡಿಕೊಂಡಿದ್ದು, ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಮೇಲಧಿಕಾರಿಗಳು ಸ್ಪಂದಿಸಿದರು. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.

ಏತನ್ಮಧ್ಯೆ, ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಹರ್ದೋಯ್ ಎಸ್ಪಿ ಕೇಶವ್ ಚಂದ್ರ ಗೋಸ್ವಾಮಿ ಅವರು ಘಟನೆಯ ಬಗ್ಗೆ ಇಲಾಖೆ ಗಮನಹರಿಸಿದೆ ಮತ್ತು ಘಟನೆಯ ತನಿಖೆಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದರು. ಹೆಚ್ಚಿನ ತನಿಖೆಗಳು ನಡೆಯುತ್ತಿವೆ, ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಎಸ್ಪಿ ಹೇಳಿದರು.