Hayathtv
  • ಮುಖಪುಟ
  • ಸುದ್ದಿ
    • All
    • ಕರಾವಳಿ
    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ’; ಖಜುರಾಹೊದ ವಿಷ್ಣು ವಿಗ್ರಹದ ಕುರಿತ ವಿವಾದಾತ್ಮಕ ಹೇಳಿಕೆ ಬಳಿಕ ಸಿಜೆಐ ಗವಾಯಿ ಸ್ಪಷ್ಟನೆ

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಮೋದಿ ಮನೆಯಲ್ಲಿ ಹೀರಾಬೆನ್ ಮಗನಂತೆ ಬೆಳೆದ ಅಬ್ಬಾಸ್ ರಾಮ್ಸಾದಾ ಯಾರು?

    ಸುಪ್ರೀಂ ಅಂಗಳಕ್ಕೆ ದಸರಾ ಉದ್ಘಾಟನೆ – ನಾಳೆ ತುರ್ತು ವಿಚಾರಣೆ

    ಕಾಂಗ್ರೆಸ್​ ಮತದಾರರೇ ಟಾರ್ಗೆಟ್, ಕರ್ನಾಟಕದ ಆಳಂದ ಕ್ಷೇತ್ರದಲ್ಲೂ ಮತಗಳ್ಳತನ, 6000 ಮತದಾರರ ಹೆಸರು ಡಿಲೀಟ್: ರಾಹುಲ್ ಆರೋಪ

    ಧರ್ಮಸ್ಥಳ ಕೇಸ್​​ ತನಿಖೆಗೆ ಅನಿರೀಕ್ಷಿತ ಟ್ವಿಸ್ಟ್.. ನಿಜವಾಯ್ತಾ ಸೌಜನ್ಯ ಮಾವ ವಿಠಲ್ ಹೇಳಿದ್ದು..?

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಬೆಂಗಳೂರು: ಹದಿನೇಳು ವರ್ಷದ ಬಾಲಕಿ ಸೇರಿ 8 ಮಹಿಳೆಯರ ಮೇಲೆ ಅತ್ಯಾಚಾರ; ಯೋಗ ಗುರು ಬಂಧನ

    ಮರು ಎಣಿಕೆಯಲ್ಲಿ ಮಂಜುನಾಥ್ ಗೌಡ ಗೆದ್ರೆ ರಾಜಕೀಯ ಬಿಡುವೆ: ಶಾಸಕ ಕೆವೈ ನಂಜೇಗೌಡ

    • ರಾಜ್ಯ
    • ರಾಷ್ಟ್ರೀಯ
    • ವಿದೇಶ
    • ಚುನಾವಣೆ
  • ಕರಾವಳಿ
  • ಕ್ರೈಮ್
  • ವಿಶೇಷ ಸುದ್ದಿ
  • ಕ್ರೀಡೆ
  • ಮನೋರಂಜನೆ
  • ವೀಡಿಯೋ ಗ್ಯಾಲರೀ
No Result
View All Result

Home ಸುದ್ದಿ ರಾಜ್ಯ

ಶಾಂತಿ, ಸೌಹಾರ್ದತೆಗೆ ಬ್ಯಾರಿ ಸಮುದಾಯದ ಕೊಡುಗೆ ಅಪಾರ: ಡಿಸಿಎಂ ‌ಡಿ.ಕೆ.ಶಿವಕುಮಾರ್

editor tv by editor tv
September 30, 2023
in ರಾಜ್ಯ
0
ಶಾಂತಿ, ಸೌಹಾರ್ದತೆಗೆ ಬ್ಯಾರಿ ಸಮುದಾಯದ ಕೊಡುಗೆ ಅಪಾರ: ಡಿಸಿಎಂ ‌ಡಿ.ಕೆ.ಶಿವಕುಮಾರ್
1.9k
VIEWS
Share on FacebookShare on TwitterShare on Whatsapp

ಬೆಂಗಳೂರು: ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಬ್ಯಾರಿ ಭಾಷಿಕ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಬಣ್ಣಿಸಿದರು.

ಬೆಂಗಳೂರಿನಲ್ಲಿ (Bengaluru) ಶನಿವಾರ ನಡೆದ ಬ್ಯಾರೀಸ್ ವೆಲ್‌ಫೇರ್ ಅಸೋಸಿಯೇಷನ್‌ನ (Bearys Welfare Association) ನೂತನ ಸೌಹಾರ್ದ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ವೇಳೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬ್ಯಾರಿ ಸಮುದಾಯ ಕಾಂಗ್ರೆಸ್ ಪಕ್ಷದ ಕೈ ಹಿಡಿಯಬೇಕು ಎಂದು ಮನವಿ ಮಾಡಿದರು.

ಎಲ್ಲಾ ಧರ್ಮದವರ ಜೊತೆ ಸ್ನೇಹ ಭಾವದಿಂದ ಇರುವ ಹಾಗೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಸೌಹಾರ್ದಯುತ ಗುಣ ಈ ಸಮುದಾಯಕ್ಕೆ ಇದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆಗೆ ಬ್ಯಾರಿ ಭಾಷಿಕರು ನೀಡಿರುವ ಕೊಡುಗೆ ಸ್ಮರಣೀಯವಾದುದು. ಹೆಣ್ಣುಮಕ್ಕಳು ಒಡವೆ ಹಾಕಿಕೊಂಡರೆ ಹೇಗೆ ಸುಂದರವಾಗಿ ಕಾಣುತ್ತಾರೋ, ಹಾಗೆಯೇ ಬ್ಯಾರಿ ಭಾಷಿಕರು ಕನ್ನಡವನ್ನು ಸುಂದರಗೊಳಿಸಿದ್ದಾರೆ ಎಂದರು.

ಧರ್ಮ ಯಾವುದಾದರೂ ತತ್ವವೊಂದೇ. ನಾಮ ನೂರಾದರೂ ದೈವವೊಂದೇ. ಪೂಜೆ ಯಾವುದಾದರೂ ಭಕ್ತಿಯೊಂದೇ. ಕರ್ಮ ಯಾವುದಾದರೂ ನಿಷ್ಠೆಯೊಂದೆ. ದೇವನೊಬ್ಬ ನಾಮ ಹಲವು ಎನ್ನುವ ಮಾತಿನಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂರಾರು ದೇವಾಲಯಗಳಿಗೆ ದಾನ-ಧರ್ಮ ಮಾಡಿದವರು ಬ್ಯಾರಿ ಭಾಷಿಕರು. ಮುಲ್ಕಿಯ ದುರ್ಗಾಪರಮೇಶ್ವರಿ ದೇವಸ್ಥಾನ ಕಟ್ಟಿಸಿದ್ದು ಬಪ್ಪ ಬ್ಯಾರಿ ಎಂದು ಇದೇ ವೇಳೆ ಹೇಳಿದರು

ಬ್ಯಾರಿ ಸಮುದಾಯ ಭವನಕ್ಕೆ ಸಹಾಯ ಮಾಡಲು ಅಥವಾ ನಿಮಗೆ ಆಶ್ವಾಸನೆಗಳನ್ನು ನೀಡಲು ಇಲ್ಲಿಗೆ ಬಂದಿಲ್ಲ. ಬದಲಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿದ ಕಾರಣ ನಿಮ್ಮ ಋಣ ತೀರಿಸಲು ಬಂದಿದ್ದೇನೆ. ದೇಶದಲ್ಲಿ ಬದಲಾವಣೆಯ ಗಾಳಿ ಎಬ್ಬಿಸಿ, ಸಮರ್ಥವಾದ ಉತ್ತರ ನೀಡಲು ಕಾರಣರಾಗಿದ್ದೀರಿ ಎಂದು ತಿಳಿಸಿದರು

ಎಲ್ಲಾ ಧರ್ಮ, ಜಾತಿಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಸರ್ಕಾರ ನಮ್ಮದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಧರ್ಮದವರನ್ನು ಕಾಂಗ್ರೆಸ್ ಸರ್ಕಾರ ಕಾಪಾಡುತ್ತದೆ ಎಂದು ಭರವಸೆ ನೀಡಿದರು.

ಹುಟ್ಟಿದ ಊರಿನಲ್ಲೇ ಉದ್ಯೋಗ ಸೃಷ್ಟಿ ಮಾಡಿ
ಬಿಜೆಪಿ ಸರ್ಕಾರ ಇದ್ದ ವೇಳೆ ಹೂಡಿಕೆದಾರರ ಸಮಾವೇಶದ ಮೂಲಕ 10 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿತು ಎಂದು ಹೇಳಿದ್ದರು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಿಂದ ಒಬ್ಬರೂ ಬಂದಿರಲಿಲ್ಲ. ಗಲ್ಫ್ ಸೇರಿದಂತೆ ಹೊರದೇಶಗಳಿಗೆ ಹೋಗದೆ, ಹುಟ್ಟಿದ ಊರಿನಲ್ಲಿ ಉದ್ಯೋಗ ಸೃಷ್ಟಿ ಮಾಡಿ. ಪ್ರತಿಭಾ ಪಲಾಯನ ರಾಜ್ಯದ ಅಭಿವೃದ್ಧಿಗೆ ಮಾರಕ. ಮಂಗಳೂರು ಹೂಡಿಕೆದಾರರ ಸ್ವರ್ಗ. ಎಲ್ಲಾ ರೀತಿಯಲ್ಲೂ ಅಲ್ಲಿ ಅವಕಾಶವಿದ್ದು, ಸರ್ಕಾರ ನಿಮ್ಮ ಬೆನ್ನಿಗೆ ನಿಲ್ಲುತ್ತದೆ. ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಿ. ಕೋಮು ಗಲಭೆಯ ಪ್ರಯೋಗಶಾಲೆ ಎನ್ನುವ ಹೆಸರು ಅಳಿಸಿ ಹಾಕಿ. ಮಲೇಷ್ಯಾ ಮಾದರಿಯಲ್ಲಿ ಟ್ವಿನ್ ಸಿಟಿಯನ್ನು ಮೊದಲು ಕಟ್ಟಿದವರೇ ಬ್ಯಾರಿ ಸಮುದಾಯದವರು. ನಿಮ್ಮ ಕೈಲಿ ಎಲ್ಲವೂ ಸಾಧ್ಯ ಎಂದರು.

ಸಮುದಾಯದ ಬೆಳವಣಿಗೆಗೆ ನಿವೇಶನಗಳ ಅಗತ್ಯವಿದೆ ಎಂದು ಮನವಿ ಮಾಡಿದ್ದೀರಿ. ಕಾನೂನಿ ಚೌಕಟ್ಟಿನಲ್ಲಿ ಏನೇ ಸಾಧ್ಯತೆ ಇದ್ದರೂ ಸಹಾಯ ಮಾಡಲಾಗುವುದು. ಮುಖ್ಯಮಂತ್ರಿಗಳು ಕೈಗೆ ಪೆನ್ ಕೊಟ್ಟಿದ್ದಾರೆ. ಇದರಿಂದ ಏನು ಬೇಕಾದರೂ ಮಾಡಬಹುದು. “You Can Make More Friends, You can Make More Enemies”. ನಾವು ಸ್ನೇಹ ಸಂಪಾದನೆ ಮಾಡೋಣ. ನನ್ನ ಮನೆ ಹಾಗೂ ಮುಖ್ಯಮಂತ್ರಿಗಳ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿದರು.

ಯು.ಟಿ.ಖಾದರ್ ಅವರು ಎಲ್ಲಾ ಮಂತ್ರಿಗಳಿಗಿಂತ ಮೇಲೆ ಕುಳಿತಿದ್ದಾರೆ
ಸ್ಪೀಕರ್ ಆಗಿರುವಂತಹ ಯು.ಟಿ.ಖಾದರ್ ಅವರಿಗೆ ಮಂತ್ರಿ ಸ್ಥಾನ ನೀಡಿ ಎಂದು ಮನವಿ ಮಾಡಿದ್ದೀರಿ. ಅವರು ನಮಗಿಂತ ಎತ್ತರದ ಸ್ಥಾನದಲ್ಲಿ ಕುಳಿತುಕೊಂಡಿದ್ದಾರೆ. ಎಸ್.ಎಂ.ಕೃಷ್ಣ, ಜಗದೀಶ್ ಶೆಟ್ಟರ್ ಅವರು ಸ್ಪೀಕರ್ ಆಗಿದ್ದರು. ಯಾರ ಹಣೆಯಲ್ಲಿ ಏನು ಬರೆದಿರುತ್ತದೆ ಎಂದು ಯಾರಿಗೂ ತಿಳಿದಿಲ್ಲ. ನೀವು ನಮ್ಮನ್ನೆಲ್ಲಾ ಮೀರಿಸಿ ಮುಂದೊಂದು ದಿನ ಬೆಳೆಯಬಹುದು ಎಂದರು.

ರಾಜ್ಯಸಭೆಗೆ ಕಳಿಸುತ್ತೇವೆ ಎಂದರೂ ಫಾರೂಕ್ ಬರಲಿಲ್ಲ
ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬಿ.ಎಂ.ಫಾರೂಕ್ ಅವರಿಗೆ ನಾನು ಮತ್ತು ಸಿದ್ದರಾಮಯ್ಯ ಅವರು ಅನೇಕ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಿ, ರಾಜ್ಯಸಭೆ ಸದಸ್ಯನನ್ನಾಗಿ ಮಾಡುತ್ತೇವೆ ಎಂದು ಹೇಳಿದೆವು. ಆದರೆ ಕುಮಾರಸ್ವಾಮಿ ಅವರೇ ಮುಖ್ಯ ಎಂದು ಅವರ ಜೊತೆ ಹೋದರು. ಮುಂದಕ್ಕೆ ಈ ತಪ್ಪು ಮಾಡಲು ಹೋಗಬೇಡಿ. ಇಡೀ ಸಮುದಾಯ ಬಳಲುತ್ತಾ ಇದೆ ಎಂದು ಸಲಹೆ ನೀಡಿದರು.

Previous Post

ಭಾರಿ ಮಳೆಯಿಂದ ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಉರುಳಿದ ಮರಗಳು: ಟ್ರಾಫಿಕ್‌ ಜಾಮ್

Next Post

ಉತ್ತರ ಪ್ರದೇಶ: ಪೊಲೀಸ್ ಠಾಣೆ ಎದುರು ದಿವ್ಯಾಂಗ ಮಹಿಳೆಯನ್ನು ಧರ ಧರನೆ ಎಳೆದೊಯ್ದ ಪೊಲೀಸರು

Next Post
ಉತ್ತರ ಪ್ರದೇಶ: ಪೊಲೀಸ್ ಠಾಣೆ ಎದುರು ದಿವ್ಯಾಂಗ ಮಹಿಳೆಯನ್ನು ಧರ ಧರನೆ ಎಳೆದೊಯ್ದ ಪೊಲೀಸರು

ಉತ್ತರ ಪ್ರದೇಶ: ಪೊಲೀಸ್ ಠಾಣೆ ಎದುರು ದಿವ್ಯಾಂಗ ಮಹಿಳೆಯನ್ನು ಧರ ಧರನೆ ಎಳೆದೊಯ್ದ ಪೊಲೀಸರು

ನಮ್ಮ ಬಗ್ಗೆ

ಹಯಾತ್ TV ರಾಜ್ಯದ ಹೆಸರಾಂತ ವಾರ್ತಾ ವೇದಿಕೆಗಳಲ್ಲಿ ಒಂದಾಗಿದೆ. ಇದರಲ್ಲಿ ರಾಜ್ಯ, ದೇಶ, ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ ಸೇರಿ ಹತ್ತಾರು ಸುದ್ದಿ ಗಳನ್ನು ಪ್ರತಿದಿನ ಹಾಕಲಾಗುತ್ತದೆ. ದೇಶ ಬದಲಾಗುತ್ತಿದೆ, ನ್ಯೂಸ್ ಅನ್ನು ಓದುವ ವಿಧಾನ ವೂ ಬದಲಾಗಲಿದೆ. ಈ ಬದಲಾವಣೆಯ ಬೆನ್ನಲ್ಲೇ ನಾವಿದ್ದೇವೆ.

ಜಾಹೀರಾತು ಮತ್ತು ಸುದ್ದಿಗಾಗಿ ಸಂಪರ್ಕಿಸಿ

Hayath Tv Media network
Mangalore
Chief Editor Ashraf Kammaje – 8861948115

Print Media

9483267000

  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.

No Result
View All Result
  • Contact Us
  • HayathTV
  • Privacy Policy
  • Terms and Conditions

© 2025 HAYATH TV NEWS.